ಮನೆ ಸುದ್ದಿ ಜಾಲ ಫಿಲ್ಮ್ ಚೇಂಬರ್ ಎಲೆಕ್ಷನ್‌ಗೆ ಮುಹೂರ್ತ ಫಿಕ್ಸ್..!

ಫಿಲ್ಮ್ ಚೇಂಬರ್ ಎಲೆಕ್ಷನ್‌ಗೆ ಮುಹೂರ್ತ ಫಿಕ್ಸ್..!

0

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗೆ ಡೇಟ್ ಫಿಕ್ಸ್ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರತಿವರ್ಷದಂತೆ ಈ ವರ್ಷದ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ನಡೆದ ಕಾರ್ಯಕಾರ್ಯಿಣಿ ಸಭೆಯಲ್ಲಿ ಚುನಾವಣೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಚುನಾವಣೆಯನ್ನ ಡಿಸೆಂಬರ್‌ನಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ.

ಅಧ್ಯಕ್ಷಸ್ಥಾನ, ಉಪಾಧ್ಯಕ್ಷ ಸ್ಥಾನ, ವಿತರಕ ವಲಯ, ಪ್ರದರ್ಶಕರ ವಲಯ, ಕಾರ್ಯದರ್ಶಿ ಹಾಗೂ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಬಾರಿ ನಿರ್ಮಾಪಕ ಸಂಘದಿಂದ ಅಧ್ಯಕ್ಷರಾಗಲು ಅವಕಾಶವಿರುವ ಕಾರಣ ಸಾರಾ ಗೋವಿಂದು ಸೇರಿದಂತೆ ಹಲವರು ಸ್ಪರ್ಧೆಗಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಡಿ.14ರಂದು ಚುನಾವಣೆ ನಡೆದಿತ್ತು. ಪ್ರದರ್ಶಕ ವಲಯದಿಂದ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ ಆಗಿದ್ದರು. ಈ ವರ್ಷ ಡಿಸೆಂಬರ್ 20ರಂದು ಚುನಾವಣೆಗೆ ದಿನಾಂಕ ನಿಗಧಿ ಮಾಡಲಾಗಿದೆಯಂತೆ. ಈ ಬಗ್ಗೆ ಕಾರ್ಯಕಾರ್ಯಿಣಿ ಸಭೆಯಲ್ಲಿ ಮಾತುಕತೆಯಾಗಿದೆ.