ಬೆಂಗಳೂರು: ಚಂದನವನದಲ್ಲಿ ನಟ ಕೋಮಲ್ ಮತ್ತೆ ಸದ್ದು ಮಾಡಲು ಬರುತ್ತಿದ್ದಾರೆ. ಅವರ ಅಭಿನಯದ ಉಂಡೆನಾಮ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ನಟ ಕೋಮಲ್ ಅಭಿಮಾನಿಗಳು ಸೇರಿದಂತೆ ಲಕ್ಷಾಂತರ ಜನರು ಟ್ರೈಲರ್ ವೀಕ್ಷಣೆ ಮಾಡಿದ್ದಾರೆ.
ಕೊಮಲ್ ನಟನೆಗೆ ಒಳ್ಳೆಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಚಿತ್ರದಲ್ಲಿ ಕೋಮಲ್ ಮದುವೆಯಾಗಲು ಪಡುವ ಪಡಿಪಾಟಲು, ಅವರ ಮೊದಲ ರಾತ್ರಿಯ ಕಹಾನಿಯನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಈ ಸಿನಿಮಾ ಕೋಮಲ್‌ಗೆ ಬ್ರೇಕ್ ಕೊಡಲಿದೆ ಎಂದು ಅಭಿಮಾನಿಗಳ ವಿಶ್ವಾಸ.
ಉಂಡೆನಾಮ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ಕೆ.ಎಲ್ ರಾಜಶೇಖರ್ ನಿರ್ದೇಶನ ಮಾಡಿದ್ದಾರೆ.ನಾಯಕಿಯಾಗಿ ಧನ್ಯಾ ಬಾಲಕೃಷ್ಣ ಅಭಿನಯಿಸಿದ್ದಾರೆ. ಹರೀಶ್ ರಾಜ್, ತಬಲ ನಾಣಿ, ಬ್ಯಾಂಕ್ ಜನಾರ್ಧನ್, KGF ಸಂಪತ್ ಸೇರಿದಂತೆ ಹಲವಾರು ನಟರು ನಟಿಸಿದ್ದಾರೆ.ಏಪ್ರಿಲ್ 14ರಂದು ಚಿತ್ರ ತೆರೆಗೆ ಬರಲಿದೆ.
Saval TV on YouTube