ಕಲಬುರಗಿ: ರಾಜ್ಯದಲ್ಲಿ ಕದ್ದ ಮಾಲು ವಾಪಸ್ಸು ಕೊಡುವ ಟ್ರೆಂಡ್ ಶುರುವಾಗಿದ್ದು, ಕದ್ದ ಮಾಲನ್ನ ವಾಪಸ್ ಕೊಟ್ಟರೆ ಅದನ್ನ ಸಾಕ್ಷಿಯಾಗಿ ಪರಿಗಣಿಸ್ತಾರೆ. ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ನಿವೇಶನ ವಾಪಸ್ಸು ಕೊಟ್ಟರೆ ಖರ್ಗೆ ಒಡೆತದನ ಸಿದ್ದಾರ್ಥ ಟ್ರಸ್ಟ್ ಗೆ ನೀಡಲಾದ ಜಮೀನು ವಾಪಸ್ ಕೊಟ್ಟಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.
ವಿಜಯಪುರಕ್ಕೆ ತೆರಳು ಮುನ್ನ ಇಲ್ಲಿನ ವಿಮನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಸಾಕ್ಷಿ ಬಗ್ಗೆ ಮಾತಾಡುವ ಇವರು ಒಂದು ಕೇಸ್ ವಾಪಸ್ ಪಡೆಯಲು ಒಬ್ಬ ವ್ಯೆಕ್ತಿಗೆ ಎಷ್ಟು ಕೊಟ್ಟಿದ್ದಾರೆ ಅಂತಾ ಗೊತ್ತಿದೆ. ಸಮಯ ಬಂದಾಗ ಅದನ್ನ ಬಹಿರಂಗಪಡಿಸುತ್ತೇನೆ. ಕೇಸ್ ವಾಪಸ್ ಪಡೆಯಲು ಯಾವ ಹಂತಕ್ಕೆ ಹೋಗಿದ್ದಾರೆ ಎಂಬುದು ಸಹ ಗೊತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲೂ ಕೂಡ ಖರೀದಿ ಮಾಡಬಹುದು ಅಂತಾ ಅಂದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಮ್ಮ ಮೇಲೆ ಯಾವ ಕೇಸೂ ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ತಮ್ಮ ಮೇಲಿನ ಯಾವ ಕೇಸೂ ವಾಪಸ್ ಪಡೆದಿಲ್ಲ. ತಮ್ಮ ಮೇಲೆ ಯಾವ ಕೇಸು ಇದೆ ಹಾಗೂ ಯಾವ ಕೇಸು ವಾಪಸ್ಸು ಪಡೆಯಲಾಗಿದೆ ಎಂಬುದನ್ನು ಹೇಳಲಿ. ತಮ್ಮ ಮೇಲಿನ ಕೇಸಿನ ಸಂಬಂಧ ದಾಖಲೆ ತೋರಿಸಿದರೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಸಿ.ಟಿ ರವಿ ಸವಾಲು ಹಾಕಿದರಲ್ಲದೇ ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್. ಕೆ. ಪಾಟೀಲ್ ಸವಾಲಾಗಿ ಸ್ವೀಕರಿಸಲಿ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ತಮ್ಮ ಮೇಲಿನ ಕೇಸು ರುಜುವಾತು ಮಾಡಬೇಕು. ಇಲ್ಲದಿದ್ದರೆ ಜನೆತೆ ಎದುರು ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು. ತಮ್ಮ ಮೇಲೆ ಕೋಲಾರ,ಚಿಕ್ಕಬಳ್ಳಾಪುರದಲ್ಲಿ ಯಾವುದೇ ಕೇಸ್ ಇರಲಿಲ್ಲ ಎಂದು ಸಿ.ಟಿ ರವಿ ಸ್ಪಷ್ಠಪಡಿಸಿದರು.
ತಮ್ಮ ಮೇಲೆ ಯಾವ ಕೇಸ್ ದಾಖಲಾಗಿದೆ ಎಂಬುದರ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೇ ಕೇಳಬೇಕು. ಯಾಕಂದರೆ ಪ್ರಿಯಾಂಕ್ ಖರ್ಗೆ ಸರ್ವಜ್ಞ ಅಲ್ವಾ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಇವರು ಸಚಿವ ಸಂಪುಟದಲ್ಲಿ ಉಪ್ಪಿಟ್ಟು ಕಾಫಿ ತಿಂದು ಬರುತ್ತಿದ್ದರೆ. ಸಬ್ಜೆಕ್ಟ್ ಓದೋದಿಲ್ಲ , ಓದೊದೆ ತಲೆ ಅಲ್ಲಾಡಿಸಿ ಬರ್ತಾರೆ. ನನ್ನ ಮೇಲೆ ಕೇಸಿದೆ ಎಂದು ಯಾವ ಅರ್ಜಿ ಕೊಟ್ಟಿಲ್ಲ. ಯಾವ ಕೇಸ್ ದಾಖಲು ಆಗಿರಲಿಲ್ಲ. ಇದು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಸವಾಲು ಎಂದು ಗುಡುಗಿದರು.