ಮನೆ ಹಾಸ್ಯ ಒತ್ತಡದ ನಿವಾರಣೆಗೆ ಹಾಸ್ಯ ಚಟಾಕಿಗಳು

ಒತ್ತಡದ ನಿವಾರಣೆಗೆ ಹಾಸ್ಯ ಚಟಾಕಿಗಳು

0

ಮೇಷ್ಟ್ರು : ನೋಡ್ರೋ ಎಲ್ಲರೂ ಈ ಸಲದ ಪರೀಕ್ಷೆಯಲ್ಲಿ 100ಕ್ಕೆ 75ಅಂಕಗಳನ್ನು ತೆಗಿಬೇಕು.                        

ಮಕ್ಕಳು : ಬರೀ 75 ಏನ್ ಸರ್  ನೂರಕ್ಕೆ ನೂರು ತೆಗಿತೀವಿ .

( ಮೇಷ್ಟ್ರು ಆಶ್ಚರ್ಯದಿಂದ) ಏನ್ರೋ ನೀವು ಹೇಳ್ತಾ ಇರೋದು ನಿಜಾನಾ? ಕಾಮಿಡಿ ಮಾಡಬೇಡಿ.                   

ಮಕ್ಕಳು: ಇನ್ನೇನ್ ಸರ್ ಮೊದಲು ಕಾಮಿಡಿ ಶುರು ಮಾಡಿದ್ದು ನೀವೇ ತಾನೇ

ಮೇಷ್ಟ್ರು: ಮಕ್ಕಳೇ ಈ ದಿನದ ಪಾಠ ಶುರು ಮಾಡೋಣವಾ?                 

ಮಕ್ಕಳು: ಆಯ್ತು ಸರ್…          

ಮೇಷ್ಟ್ರು: ಲೇ…ಗುಂಡ ಶಬ್ದ ಮಾಲಿನ್ಯಕ್ಕೆ ಏನು ಮಾಡಬೇಕು?                      

ಗುಂಡ : ಅದು,ಅದು,..  ಕಿವಿ ಮುಚ್ಬೇಕು ಸರ್….

(ಪರೀಕ್ಷೆ ಕೊಠಡಿಯಲ್ಲಿ) ಗುರು: ಎಲ್ಲರಿಗೂ ಪ್ರಶ್ನೆ ಪತ್ರಿಕೆ ಸಿಕ್ಕಾಯಿತಲ್ಲ? ಚೆನ್ನಾಗಿ ಬರೆಯಿರಿ ಏನಾದ್ರೂ ಡೌಟ್ ಇದ್ರೆ ಕೇಳಿ!                                 

ಶಿಷ್ಯ: ನನಗೆ ಡೌಟ್ ಇದೆ ಸರ್?                       

ಗುರು: ವೆರಿ ಗುಡ್, ಶಿಷ್ಯ ಅಂದ್ರೆ ನೀನೇ ನೋಡು,ಕೇಳು?                   

ಶಿಷ್ಯ :ಸರ್ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಏನು ಇದೆ ಆದರೆ ಉತ್ತರ ಪತ್ರಿಕೆಯಲ್ಲಿ ಉತ್ತರವಿಲ್ಲ, ಪ್ರಿಂಟಿಂಗ್ ಮಿಸ್ಟೇಕ್ ಇರಬೇಕು.

ಗುರು: ನಿಮ್ಮ ತಂದೆಗೆ ಎಷ್ಟು ವಯಸ್ಸಾಗಿದೆ?             

ಶಿಷ್ಯ: ಅವರ ನನಗಿಂತ ಚಿಕ್ಕವರು.                   

ಗುರು :ಏನ್ ಹೇಳ್ತಾ ಇದ್ದೀಯಾ?ಅದು ಹೇಗೆ ಸಾಧ್ಯ?                         

ಶಿಷ್ಯ: ಹೇಗೆ ಅಂದರೆ ಅವರು ನಾನು ಹುಟ್ಟಿದ ಮೇಲೆ ತಾನೆ ತಂದೆಯಾಗಿದ್ದು.

ಶಿಕ್ಷಕ: ನೀರು ಮತ್ತು ಭೂಮಿಯ ಮೇಲೆ ಬದುಕಬಲ್ಲ ಪ್ರಾಣಿಗಳ ಒಂದು ಉದಾಹರಣೆ ಹೇಳಿ.                  

ವಿದ್ಯಾರ್ಥಿ: ಕಪ್ಪೆ           

ಶಿಕ್ಷಕ: ಇನ್ನೊಂದು ಉದಾಹರಣೆ.       

ವಿದ್ಯಾರ್ಥಿ: ಮತ್ತೊಂದು ಕಪ್ಪೆ

ಹಿಂದಿನ ಲೇಖನವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಬಂದಿದ್ದ ಯುವಕನಿಂದ ಮಹಿಳಾ ವೈದ್ಯೆಯ ಕೊಲೆ
ಮುಂದಿನ ಲೇಖನ ಮೈಸೂರು ಜಿಲ್ಲೆಯಲ್ಲಿ ಮಧ್ಯಹ್ನ 1 ಗಂಟೆವರಗೆ  ಶೇ 36.73ರಷ್ಟು ಮತದಾನವಾಗಿದೆ