ಮನೆ ಆರೋಗ್ಯ ಬೇವಿನ ಎಲೆಗಳಿಂದ ಇರುವ ಉಪಯೋಗ ಒಂದೆರಡಲ್ಲ!

ಬೇವಿನ ಎಲೆಗಳಿಂದ ಇರುವ ಉಪಯೋಗ ಒಂದೆರಡಲ್ಲ!

0

ನಮ್ಮ ನಿಸರ್ಗದಲ್ಲಿ ಎಲ್ಲವೂ ಇದೆ. ನಾವು ಅದನ್ನು ಅರ್ಥ ಮಾಡಿಕೊಂಡು ಸರಿಯಾಗಿ ಉಪಯೋಗಿಸಿದರೆ ಅದ್ಭುತ ಪ್ರಯೋಜನಗಳನ್ನು ನಮ್ಮದಾಗಿಸಿಕೊಳ್ಳಬಹುದು. ಬನ್ನಿ ಈ ಲೇಖನ ದಲ್ಲಿ ಬೇವಿನ ಎಲೆಗಳ ಅದ್ಭುತ ಲಾಭಗಳ ಬಗ್ಗೆ ಮಾಹಿತಿ ಕಲೆ ಹಾಕೋಣ….

ಸಕ್ಕರೆ ಕಾಯಿಲೆಗೆ ಪರಿಹಾರ

• ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲಿ ಬೇವಿನ ಎಲೆಗಳು ಅದ್ಭುತ ಪರಿಹಾರ ಒದಗಿಸುತ್ತವೆ. ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅವರಿಗೆ ನೈಸರ್ಗಿಕ ಪರಿಹಾರವಾಗಿ ಇವುಗಳು ಕೆಲಸ ಮಾಡುತ್ತವೆ.

•  ಇದಕ್ಕಾಗಿ ಒಂದು ಟೇಬಲ್ ಚಮಚ ಹಸಿ ಬೇವಿನ ಎಲೆಗಳ ರಸ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿ ಕೊಳ್ಳಬೇಕು. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಉತ್ತಮ.

ಮುಟ್ಟಿನ ಸಮಸ್ಯೆಗೆ ಪರಿಹಾರ

ಬೇವಿನ ಎಲೆಗಳು ದೇಹದ ದುರ್ವಾಸನೆಯನ್ನು ದೂರ ಇರಿಸುತ್ತವೆ. ಇದಕ್ಕಾಗಿ ಕೆಲವು ಬೇವಿನ ಎಲೆ ಗಳನ್ನು ಒಂದು ಬಕೆಟ್ ಉಗುರು ಬೆಚ್ಚಗಿನ ನೀರಿನಲ್ಲಿ 30 ನಿಮಿಷಗಳ ಕಾಲ ನೆನೆ ಹಾಕಿ ಅದರಿಂದ ಸ್ನಾನ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ದೇಹದ ದುರ್ವಾಸನೆ ಜೊತೆಗೆ ಸೋಂಕುಗಳನ್ನು ಸಹ ಇದು ಹೋಗಲಾಡಿಸುತ್ತದೆ.

ತಲೆಹೊಟ್ಟು ಸಮಸ್ಯೆ ನಿವಾರಣೆ

ಕೆಲವು ಹಚ್ಚಹಸಿರಾದ ಬೇವಿನ ಎಲೆಗಳನ್ನು ತೆಗೆದುಕೊಂಡು ತೆಂಗಿನ ಎಣ್ಣೆಯಲ್ಲಿ ನುಣ್ಣಗೆ ಗಟ್ಟಿಯಾದ ಪೇಸ್ಟ್ ಬರುವಂತೆ ರುಬ್ಬಿ ಅದನ್ನು ತಲೆಗೆ ಹಚ್ಚಿಕೊಂಡು 15 ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಆನಂತರ ತಲೆ ಸ್ವಚ್ಛ ಮಾಡಿಕೊಳ್ಳುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ ಮತ್ತು ತಲೆ ಕೂದಲು ಉದುರುವ ಸಾಧ್ಯತೆ ಕೂಡ ತಪ್ಪುತ್ತದೆ.

ಫಂಗಸ್ ಸಮಸ್ಯೆಗೆ ರಾಮಬಾಣ

ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಶ್ರೀಗಂಧದ ಪುಡಿ ಮತ್ತು ರೋಜ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ನಿಮ್ಮ ತಲೆಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ನೆತ್ತಿಯ ಭಾಗದಲ್ಲಿ ಕಂಡುಬರುವ ಫಂಗಲ್ ಸೋಂಕು ದೂರವಾಗುತ್ತದೆ ಮತ್ತು ಚರ್ಮದ ಅನೇಕ ಸಮಸ್ಯೆಗಳು ಪರಿಹಾರವಾಗುತ್ತವೆ.

• ಒಂದು ಲೋಟ ನೀರಿನಲ್ಲಿ ಮೂರು ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಆನಂತರ ತಣ್ಣಗೆ ಮಾಡಿ.

• ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಗಂಟಲು ನೋವಿನ ಪರಿಹಾರಕ್ಕೆ ಬಾಯಿ ಮುಕ್ಕಳಿಸಬಹುದಾಗಿದೆ. ಪ್ರತಿದಿನ ಹೇಗೆ ಮಾಡುತ್ತ ಬಂದರೆ ಕೆಮ್ಮು ಮತ್ತು ಗಂಟಲು ನೋವು ವಾಸಿ ಆಗುತ್ತದೆ.