ಮನೆ ಅಪರಾಧ ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಾಧಿಕಾರಿ

ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಲೆಕ್ಕಾಧಿಕಾರಿ

0

ರಾಮನಗರ: ಪೌತಿ ಖಾತೆ ಮಾಡಲು ಗ್ರಾಮ ಲೆಕ್ಕಾಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಘಟನೆ ಮಾಗಡಿ ತಾಲೂಕು ಕಚೇರಿಯಲ್ಲಿ ನಡೆದಿದೆ.

Join Our Whatsapp Group

ಲಂಚ ಪಡೆಯುತ್ತಿರುವ ಮಲ್ಲಸಂದ್ರ ವೃತ್ತದ ಗ್ರಾಮ ಲೆಕ್ಕಿಗ ರಮೇಶ್ ನ ಕೃತ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೌತಿ ಖಾತೆ ಮಾಡಲು 30 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ವಿಎ ರಮೇಶ್ ರೈತನ ಬಳಿ ಹಣಕ್ಕಾಗಿ ಧಮಕಿ ಹಾಕಿದ್ದಾನೆ.

ಕನಕಪುರದಲ್ಲಿ ಅಮಾನತುಗೊಂಡು ಮಾಗಡಿಗೆ ಬಂದು ಸೇರಿರುವ ರಮೇಶ್, ಕಳೆದ 6 ವರ್ಷಗಳಿಂದ ಮಾಗಡಿ ತಾಲೂಕಿನಲ್ಲೇ ಕೆಲಸ ಮಾಡುತ್ತಿದ್ದಾನೆ. ರೈತನ ಬಳಿ ಈಗಾಗಲೇ 10 ಸಾವಿರ ಹಣ ಪಡೆದಿದ್ದಾನೆ. ಈತನ ಲಂಚ ಪ್ರಸಂಗದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.