ರಾಯಚೂರು: ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಮಂಗಗಳು ಬಿದ್ದು ಸಾವನ್ನಪ್ಪಿದ್ದು, ಅದೇ ನೀರನ್ನು ಕುಡಿದು ಗ್ರಾಮದ ಕೆಲವರು ಅಸ್ವಸ್ಥರಾದ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ನಡೆದಿದೆ.
ತೆರೆದ ವಾಟರ್ ಟ್ಯಾಂಕ್ ನಲ್ಲಿ ನೀರು ಕುಡಿಯಲು ಹೋಗಿ ಬಿದ್ದಿರುವ ಎರಡು ಮಂಗಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ. ಈ ವಿಷಯ ಅರಿವಿಗೆ ಬಾರದೇ ಇರುವುದರಿಂದ ಮಂಗಗಳು ಸತ್ತು ಬಿದ್ದು ಟ್ಯಾಂಕಿಂದಲೇ ಇಡೀ ಊರಿಗೆ ನೀರು ಸರಬರಾಜು ಆಗುತ್ತಿತ್ತು.
ಮೂರು ದಿನಗಳ ಬಳಿಕ ಕೆಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಸ್ಥರು ಅಸ್ವಸ್ಥರಾಗಲು ಕಾರಣವನ್ನು ಹುಡುಕಿದಾಗ ಟ್ಯಾಂಕ್ ನಲ್ಲಿ ಮಂಗಗಳ ಶವಗಳು ಪತ್ತೆಯಾಗಿದೆ.