ಮನೆ ದೇವಸ್ಥಾನ ಪೂರ್ವಜನ್ಮದ ಪುಣ್ಯ ವಿಶೇಷ

ಪೂರ್ವಜನ್ಮದ ಪುಣ್ಯ ವಿಶೇಷ

0

ಪವಿತ್ರ ದೇವಾಲಯಗಳಿಗೆ ಹೋಗಿ ದೇವರ ದರ್ಶನ ಪಡೆಯಬೇಕಾದರೆ ಪೂರ್ವ ಜನ್ಮದ ಸಂಸ್ಕಾರ ಬಲವೂ ಇರಬೇಕು.ದೇವಾಲಯಗಳ ದರ್ಶನ, ಪವಿತ್ರ ಕ್ಷೇತ್ರಗಳ ಯಾತ್ರೆ, ಪುಣ್ಯ ನದೀ ಸ್ನಾನ ಇವುಗಳು ಪೂರ್ವ ಜನ್ಮದ ಸುಕೃತವಿದ್ದರೆ  ಮಾತ್ರ ಸಾಧ್ಯ. ಎಷ್ಟೇ ಮಂದಿ ಯಾತ್ರಿಕರು ಮಾರ್ಗ ಮಧ್ಯದಲ್ಲಿ ರೋಗ ರುಜಿನಕೆ ತುತ್ತಾಗಿ ಪುಣ್ಯಕ್ಷೇತ್ರಕ್ಕೆ ಹೋದರೂ ದೇವರ ದರ್ಶನ ಮಾಡಲು ಸಾಧ್ಯವಾಗದೆ ತೊಳಲುತ್ತಾರೆ. ಮತ್ತೆ ಕೆಲವರು ತಮ್ಮ ಅಜಾಗರೂಕತೆಯಿಂದ ಒಡವೆ ವಸ್ತುಗಳನ್ನೂ ಹಣವನೋ ಕಳೆದುಕೊಂಡು ಚಿಂತಾಕ್ರಿಂತರಾಗಿರುತ್ತ…

Join Our Whatsapp Group

ದೇವರ ದರ್ಶನ ಮಾಡಿದರೂ ಮನಸ್ಸಿಗೆ ನೆಮ್ಮದಿಯಿಲ್ಲದೆ ಪೆಚಾಡುತ್ತಿರುತ್ತಾರೆ.ಇನ್ನು ಕೆಲವರು ನದಿ ಅಥವಾ ಸಮುದ್ರದಲ್ಲಿ ಸ್ನಾನ ಮಾಡುತ್ತಿರುವಾಗ ಮುಳುಗಿ, ಪ್ರಾಣವನ್ನೇ ಕಳೆದುಕೊಂಡಿರುವುದೂ ಉಂಟು. ಇವರ ಪ್ರಸಿದ್ಧಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತದೆ.ಆದ್ದರಿಂದಲೇ ಯಾವಾಗಲೂ ಪುಣ್ಯ ಕಾರ್ಯಗಳನ್ನೇ  ಮಾಡುತ್ತಿರಬೇಕು: ಭಗವಂತನನ್ನು ಭಕ್ತಿಯಿಂದ ಧ್ಯಾನಿಸುತ್ತ ದಾನ ಧರ್ಮಾದಿಗಳಿಂದ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಹಿಂದಿನಿಂದಲೂ ಹಿರಿಯರು ಹೇಳುತ್ತ ಬಂದಿದ್ದಾರೆ. ಇಂತಹ  ಸುಬುದ್ಧಿ ಬರಬೇಕಾದರೆ ತೀರ್ಥಯಾತ್ರೆಯಿಂದ ಮಾತ್ರಸಾಧ್ಯ.ಎಂಥ ನಾಸ್ತಿಕನೇ ಆಗಲಿ. ಮನರಂಜನೆಗಾಗಿ ಕ್ಷೇತ್ರದರ್ಶನ ಮಾಡಿದರೂ, ನಿಜವಾದ ಯಾತ್ರಿಕರ ಮಧ್ಯೆ ಅವರ ಸಹವಾಸದಲ್ಲಿ ಇರುವುದರಿಂದ,ಹೂವಿನಿಂದ ನಾರಿಗೆ ಸ್ವರ್ಗ ಎಂಬಂತೆ ಸಹವಾಸದ ಬಲದಿಂದಾದರೂ ಅಲ್ಪ ಸ್ವಲ್ಪ ಪುಣ್ಯ ಲಭಿಸಿತು. ತೀರ್ಥಯಾತ್ರೆಗಳ ದೆಸೆಯಿಂದ ನಾಸ್ತಿಕರ ಮನಸ್ಸು  ಪರಿವರ್ತನೆ ಯಾಗಲೂ ಸಾಧ್ಯವುಂಟು.

ಈ ಕಾರಣದಿಂದಾಗಿಯೇ ಕಾಶಿ ರಾಮೇಶ್ವರಗಳ ಯಾತ್ರೆ ಮಾಡಿ ಬಂದವರನ್ನು ಪೂಜ್ಯರೆಂದು ಭಾವಿಸಿ, ಅವರಿಗೆ ಭಕ್ತಿಭಾವದಿಂದ ನಮಸ್ಕರಿಸುತ್ತಾರೆ. ಅಂಥವರ ಪಾದಸ್ಪರ್ಶದಿಂದ ಯಾತ್ರೆ ಮಾಡಿದಷ್ಟೇ ಪುಣ್ಯವೆಂಬ ನಂಬಿಕೆ ಜನರಲ್ಲಿ ಮೂಡಿ ಬಂದಿದೆ.

ನಮ್ಮ ಪೂರ್ವಿಕರು ಆಗ ಮೋಕ್ತ ವಿಧಾನದಂತೆ ಅಯವರಿತು ವಾಸ್ತುಶಾಸ್ತ್ರ  ನಿಯಮಾನುಸಾರವಾಗಿಯೇ ದೇವಾಲಯಗಳನ್ನು ನಿರ್ಮಿಸಿರುವರು ತತ್ವಗಳನ್ನು ಕ್ರಿಯಾ ವಿಶಿಷ್ಟನಾಗಿ ಮಾಡುವ ದೇವತಾ ಮೂರ್ತಿಗಳನ್ನು ಅಚ್ಚುಗಟ್ಟಾಗಿ ನಿರ್ಮಿಸಿ, ಪ್ರತಿಷ್ಠಾಪಿಸಿ, ಪೂಜಿಸಿದವರು. ಈ ಪೂಜಾ ಕ್ರಮವೇ ಒಂದು ಶಾಸ್ತ್ರ ಭಾಗವಾಗಿದೆ ಇದಕ್ಕೆ ‘ಆಗಮಸಿಂಹಿತೆ ಕ್ರಿಯಾಪಾದ’ ವೆಂದು ಹೆಸರು.ಅಜ್ಞಾನಿಗಳನ್ನು ಉದ್ಬರಿಸಲೋಸುಗವಾಗಿ ಸಾಕ್ಷಾತ್ ಮಹೇಶ್ವರನೇ  ಈ ಆಗಮನ ಶಾಸ್ತ್ರವನ್ನು ತನ್ನ ಪ್ರಿಯ ಪತ್ನಿಯಾದ ಪಾರ್ವತಿಗೆ ಉಪದೇಶಿಸಿದನೆಂದು ಶಾರದಾತಿಲಕ ವೆಂಬ ಗ್ರಂಥದಲ್ಲಿ  ಉಲ್ಲೇಖನವಾಗಿದೆ.