ಮನೆ ಸುದ್ದಿ ಜಾಲ 100 ಅಡಿ ತಲುಪಿದ ಕೆಆರ್‌ ಎಸ್‌ ಜಲಾಶಯದ ನೀರಿನ ಮಟ್ಟ

100 ಅಡಿ ತಲುಪಿದ ಕೆಆರ್‌ ಎಸ್‌ ಜಲಾಶಯದ ನೀರಿನ ಮಟ್ಟ

0

ಮೈಸೂರು (Mysuru)- ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಉತ್ತಮವಾಗಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಮೇ ತಿಂಗಳಲ್ಲೇ ೧೦೦ ಅಡಿಗಳನ್ನು ತಲುಪಿದೆ.

ಭಾನುವಾರ ಬೆಳಿಗ್ಗೆ ನೀರಿನ ಮಟ್ಟ ೧೦೦.೦೨ ಅಡಿಗಳಷ್ಟಿತ್ತು. ಜಲಾಶಯದ ಗರಿಷ್ಠ ನೀರು ಶೇಖರಣಾ ಮಟ್ಟ ೧೨೪.೮ ಅಡಿ. ಕಳೆದ ವರ್ಷ ಇದೇ ಸಮಯದಲ್ಲಿ ನೀರಿನ ಮಟ್ಟ ಕೇವಲ ೮೮ ಅಡಿಗಳಷ್ಟಿತ್ತು.

ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಕೆಆರ್‌ಎಸ್ ಜಲಶಾಯದ ನೀರಿನ ಮಟ್ಟ ಬೇಸಿಗೆಯಲ್ಲಿ ಬಹಳ ಬೇಗನೆ ಕುಸಿಯುತ್ತದೆ. ಜಲಾಶಯದ ಶೇಖರಣಾ ಮಟ್ಟ ಮಳೆಯ ಅಭಾವದಿಂದಾಗಿ ಮಳೆಗಾಲದಲ್ಲಿಯೂ ಡೆಡ್ ಸ್ಟೋರೇಜ್ ಮಟ್ಟ ಇರುವ ಎಷ್ಟೋ ಸಂದರ್ಭಗಳಿವೆ. ಆದರೆ ಈ ವರ್ಷ ಉತ್ತಮ ಮಳೆಯಿಂದಾಗಿ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಭಾನುವಾರದಂದು ನೀರಿನ ಒಳಹರಿವು ೧,೧೭೧ ಕ್ಯೂಸೆಕ್ ಇದ್ದು, ಹೊರಹರಿವು ೧,೦೧೧ ಕ್ಯೂಸೆಕ್ ನಷ್ಟಿತ್ತು. ಗರಿಷ್ಠ ಸಾಮರ್ಥ್ಯ ೪೯.೪೫೨ ಟಿಎಂಸಿ ಪೈಕಿ ಹಾಲಿ ನೀರಿನ ಶೇಖರಣಾ ಪ್ರಮಾಣ ೨೨.೮೨೫ ಟಿಎಂಸಿಯಷ್ಟಿದೆ. ಕಳೆದ ವರ್ಷ ಮೇ ೧೫, ೨೦೨೧ರಂದು ನೀರಿನ ಶೇಖರಣೆಯ ಮಟ್ಟ ೧೪.೭೭೯ ಟಿಎಂಸಿ ಅಷ್ಟಿತ್ತು ಎಂದಿದ್ದಾರೆ.

ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಮಳೆ ಹಾಗೂ ಗುಡುಗಿನೊಂದಿಗೆ ಮಳೆ ಮುಂದುವರೆಯಲಿದೆ.