ಮನೆ ಅಪರಾಧ ಆಸಿಡ್ ದಾಳಿ ಪ್ರಕರಣ: ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ದಾಖಲು

ಆಸಿಡ್ ದಾಳಿ ಪ್ರಕರಣ: ಮ್ಯಾಜಿಸ್ಟ್ರೇಟ್ ಮುಂದೆ ಸಂತ್ರಸ್ತ ಯುವತಿ ಹೇಳಿಕೆ ದಾಖಲು

0

ಬೆಂಗಳೂರು: ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದ ಆಸಿಡ್ ದಾಳಿ ಪ್ರಕರಣದಲ್ಲಿ ದಾಳಿಗೊಳಗಾದ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಮ್ಯಾಜಿಸ್ಟೇಟ್ ರವರು ಯುವತಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಮ್ಯಾಜಿಸ್ಟ್ರೇಟ್ ಮುಂದೆ ಎಂದರೆ ತಹಸೀಲ್ದಾರ್ ಮುಂದೆ ಸಂತ್ರಸ್ತೆ ಯುವತಿ ಹೇಳಿಕೆಯನ್ನು ನೀಡಿದ್ದಾಳೆ. ಇಂಡಿಯನ್ ಎವಿಡೆನ್ಸ್ ಆಕ್ಟ್ 32(1) ರ ಅಡಿಯಲ್ಲಿ ಸಂತ್ರಸ್ತ ಯುವತಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯಲ್ಲೇ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಪಡೆದುಕೊಂಡಿದ್ದಾರೆ.

ಮ್ಯಾಜಿಸ್ಟ್ರೇಟ್ ಎದುರು ಯುವತಿ ಹೇಳಿದ್ದೇನು?

“”ನಾನು ಮುತ್ತೂಟ್ ಮಿನಿ‌ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ . ತಂದೆ ರಾಜು ಮನೆಯ ಬಳಿಯೇ ತರಕಾರಿ ಅಂಗಡಿ ಇಟ್ಟುಕೊಂಡಿರುತ್ತಾರೆ. ತಾಯಿ ಲಕ್ಷ್ಮಮ್ಮ ಗೃಹಿಣಿಯಾಗಿದ್ದಾರೆ. ನಮ್ಮ ತಂದೆ ತಾಯಿಗೆ ಮೂರು ಜನ ಮಕ್ಕಳು. ದೊಡ್ಡವಳು ಪ್ರೀತಿ ಸಾಫ್ಟ್ವೇರ್ ಇಂಜಿನಿರ್ ಆಗಿ ಕೆಲಸ ಮಾಡಿಕೊಂಡಿದ್ದಾಳೆ. ನಾನು ಎರಡನೆಯವಳು, ಕೊನೆಯವನು ನನ್ನ ತಮ್ಮ‌ ವಿಶ್ವಾಸ್. 28 ರ ಬೆಳಗ್ಗೆ 8.30 ಕ್ಕೆ ನನ್ನ ತಂದೆ ಮುತ್ತೂಟ್ ಮಿನಿ ಫೈನಾನ್ಸ್ ಗೆ ಡ್ರಾಪ್ ಮಾಡಿದ್ರು. ನಾನು ಮೊದಲನೇ ಮಹಡಿಯಲ್ಲಿರುವ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋದೆ. ಕಚೇರಿಗೆ ಯಾರು ಬಾರದೇ ಇದ್ದಾಗ ಕಚೇರಿ ಬಾಗಿಲ ಬಳಿಯೇ ನಿಂತುಕೊಂಡಿದ್ದೆ. ಆಗ ನಾಗೇಶ ಎಂಬಾತ ಕೈಯಲ್ಲಿ ಕವರ್ ನಲ್ಲಿ ಏನನ್ನೊ ಹಿಡಿದುಕೊಂಡು ಬಂದಿದ್ದ. ಆತನನ್ನು ನೋಡಿ ನಾನು ಕೆಳಗೆ ಓಡಲು ಪ್ರಯತ್ನಿಸಿದ್ದೆ. ಕೂಡಲೇ ನಾಗೇಶ ನನ್ನನ್ನು ಹಿಂಬಾಲಿಸಿಕೊಂಡು ಬಂದ ತನ್ನ ಕೈಯಲ್ಲಿದ್ದ ಆ್ಯಸಿಡ್ ಅನ್ನು ನನ್ನ ಮೈಮೇಲೆ ಹಾಕಿ ಓಡಿ ಹೋಗಿರುತ್ತಾನೆ. ಆಗ ನನ್ನ ಮುಂಭಾಗದ ಎದೆ, ಕೈಗಳು ಹಾಗೂ ಬೆನ್ನಿಗೆ ಆ್ಯಸಿಡ್ ಬಿದ್ದು ಗಾಯಗಳಾಗಿದೆ. ನಾನು ಫೋನ್ ಮಾಡಿ ನನ್ನ ತಂದೆಯನ್ನು‌‌ ಸ್ಥಳಕ್ಕೆ ಬರಲು ತಿಳಿಸಿದೆ . ಸ್ಥಳಕ್ಕೆ ನಮ್ಮ ತಂದೆ ಬಂದು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ನಾಗೇಶ 7 ವರ್ಷದ ಹಿಂದೆ ದೊಡ್ಡಮ್ಮ ಸುಶೀಲಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ, ಆತ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ನಾನು ಪ್ರೀತಿ ಮಾಡಲ್ಲ ಎಂದಾಗ ಆತ ಸುಮ್ಮನೆ ಇದ್ದ, ಈಗ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ಏಪ್ರಿಲ್ 27 ರಂದು 9 ಗಂಟೆ ನಾನು ಕೆಲಸ ಮಾಡುವ ಕಚೇರಿಗೆ ಬಂದಿದ್ದ ನಾಗೇಶ್ ,ನೀನು ನನ್ನನ್ನ ಪ್ರೀತಿಸಿ ಮದುವೆಯಾಗಲೇ ಬೇಕು ಇಲ್ಲದಿದ್ರೆ ಯಾರಿಗೂ ಸಿಗದಂತೆ ಮಾಡ್ತಿನಿ ಎಂದು ಧಮ್ಕಿ ಹಾಕಿದ್ದ ನಂತರ ಕಚೇರಿ ಮ್ಯಾನೇಜರ್ ಗೆ ಅವಳಿಗೆ ಏನು ಮಾಡ್ತಿನಿ ನೋಡ್ತಿರಿ ಎಂದು ಹೇಳಿಹೋಗಿದ್ದ. ಈ ವಿಚಾರವನ್ನು ಅಂದೇ ನನ್ನ ದೊಡ್ಡಮ್ಮನಿಗೂ ತಿಳಿಸಿದ್ದೆ ದೊಡ್ಡಮ್ಮ ಕರೆ ಮಾಡಿ ನಾಗೇಶ ಅಣ್ಣನಿಗೂ ವಿಚಾರ ಹೇಳಿದ್ರು ನಾಗೇಶನ ಅಣ್ಣ ಬುದ್ಧಿವಾದ ಹೇಳೋದಾಗಿ ಹೇಳಿದ್ರು. ಆದರೆ ಏಪ್ರಿಲ್ 28 ರಂದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆ್ಯಸಿಡ್ ತೆಗೆದುಕೊಂಡು ಬಂದ ನನ್ನನ್ನು ಅಡ್ಡಗಟ್ಟಿ ಆ್ಯಸಿಡ್ ದಾಳಿ ಮಾಡಿದ್ದಾನೆ” ಎಂದು ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಎದುರು ನಡೆದ ಘಟನೆಯನ್ನು ಘಟನೆಯ ಉದ್ದೇಶವನ್ನು ಹೇಳಿದ್ದಾಳೆ.

ಹಿಂದಿನ ಲೇಖನಆ್ಯಸಿಡ್ ದಾಳಿ: ಸಂತ್ರಸ್ತ ಯುವತಿಗೆ 5ಲಕ್ಷ ರೂ. ಧನ ಸಹಾಯ ಮಾಡಿದ ಸಚಿವ ಡಾ.ಕೆ.ಸುಧಾಕರ್
ಮುಂದಿನ ಲೇಖನಯುವತಿ ಮೇಲೆ ಆಸಿಡ್‌ ದಾಳಿ ನಡೆಸಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಲಿ: ಹೆಚ್.ಡಿ.ಕುಮಾರಸ್ವಾಮಿ