ಮನೆ ಅಪರಾಧ ಗುತ್ತಿಗೆದಾರನ ಮನೆಯಲ್ಲಿ ಕಳ್ಳತನ: 30 ಲಕ್ಷ ರೂ. ನಗದು, ಬಂಗಾರದ ಆಭರಣ ಕದ್ದ ಕಳ್ಳರು

ಗುತ್ತಿಗೆದಾರನ ಮನೆಯಲ್ಲಿ ಕಳ್ಳತನ: 30 ಲಕ್ಷ ರೂ. ನಗದು, ಬಂಗಾರದ ಆಭರಣ ಕದ್ದ ಕಳ್ಳರು

0
ಸಾಂದರ್ಭಿಕ ಚಿತ್ರ

ಬೆಳಗಾವಿ(Belagavi): ನಗರದ ಲಕ್ಷ್ಮೀ ಎಕ್ಸಟೆನ್ಷನ್ ನಿವಾಸಿ, ಪ್ರಥಮ ದರ್ಜೆ ಗುತ್ತಿಗೆದಾರ ಪ್ರಕಾಶ ತೊಳಿನವರ ಅವರ ಮನೆಗೆ ನುಗ್ಗಿರುವ ಕಳ್ಳರು ಅಪಾರ ಪ್ರಮಾಣದ ಹಣ, ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾರೆ.

ಶುಕ್ರವಾರದಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಖದೀಮರು ಹಾಡುಹಗಲೇ, ಮನೆಯಲ್ಲಿದ್ದ 30 ಲಕ್ಷ ರೂಪಾಯಿ ನಗದು, 131 ತೊಲೆಯ ಬಂಗಾರದ ಆಭರಣ ಹಾಗೂ 4 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಪ್ರಕಾಶ ತೊಳಿನವರ ಕುಟುಂಬ ಶುಕ್ರವಾರ ಬದಾಮಿ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದ ಲಾಭ ಪಡೆಯಲು ಕಳ್ಳರು ಮನೆಯ ಬೀಗ ಒಡೆದು ಕಳ್ಳತನ ಮಾಡಿದ್ದಾರೆ. ಹಾಡು ಹಗಲು ಕಳ್ಳತನ ನಡೆದಿದ್ದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಶುಕ್ರವಾರ ರಾತ್ರಿ ಶಹರ ಠಾಣೆ ಪಿಎಸ್ ಐ ಎಮ್ ಡಿ ಘೋರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿಂದಿನ ಲೇಖನಕುಡಗೋಲಿನಿಂದ ಸೋದರ ಸಂಬಂಧಿಗಳ ಮೇಲೆ ದಾಳಿ:  ಆಸ್ತಿ ಸಂರಕ್ಷಿಸಲು ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ-  ಹೈಕೋರ್ಟ್
ಮುಂದಿನ ಲೇಖನಪ್ರೀತಿಸಿ ಮದುವೆ ನಿರಾಕರಿಸುವುದು ಐಪಿಸಿ 420 ಅಡಿ ವಂಚನೆಯಲ್ಲ: ಹೈಕೋರ್ಟ್