ಮನೆ ಸುದ್ದಿ ಜಾಲ ಉಕ್ರೇನ್‍ ನಲ್ಲಿ 50 ಮಂದಿ ಭಾರತೀಯರಿದ್ದಾರೆ: ವಿದೇಶಾಂಗ ಸಚಿವಾಲಯ

ಉಕ್ರೇನ್‍ ನಲ್ಲಿ 50 ಮಂದಿ ಭಾರತೀಯರಿದ್ದಾರೆ: ವಿದೇಶಾಂಗ ಸಚಿವಾಲಯ

0

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಲ್ಲಿ ಇನ್ನೂ 50 ಮಂದಿ ಭಾರತೀಯರು ಇದ್ದಾರೆ. ಈ ಪೈಕಿ 15ರಿಂದ 20 ಮಂದಿ ತವರಿಗೆ ಮರಳಲು ಬಯಸಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಿ ಅವರನ್ನು ಕರೆತರಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

‘ಆಪರೇಷನ್ ಗಂಗಾ’ ಇನ್ನೂ ಚಾಲ್ತಿಯಲ್ಲಿದೆ. ಸ್ವದೇಶಕ್ಕೆ ಮರಳಲು ಇಚ್ಛಿಸುವವರನ್ನು ಕರೆತರಲು ನಾವೇನು ಮಾಡಬಹುದೋ ಅದನ್ನು ಮಾಡಲಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

‘ಮೂರು ದಿನಗಳ ಹಿಂದಿನ ಲೆಕ್ಕಾಚಾರದ ಪ್ರಕಾರ ಇನ್ನೂ 50 ಮಂದಿ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ. ಇವರಲ್ಲಿ 15ರಿಂದ 20 ಮಂದಿ ವಾಪಸಾಗಲು ಬಯಸುತ್ತಿದ್ದರೆ ಉಳಿದವರು ಸದ್ಯದ ಸ್ಥಿತಿಯಲ್ಲಿ ಹಿಂತಿರುಗುವ ಮನಸು ಮಾಡುತ್ತಿಲ್ಲ. ಉಕ್ರೇನ್‌ನಲ್ಲಿರುವ ಎಲ್ಲ ಭಾರತೀಯರ ಜತೆ ಸಂಪರ್ಕದಲ್ಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.ಈವರೆಗೆ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಮೂಲಕ 22,500 ಮಂದಿಯನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಲೇಖನಹಿಜಾಬ್ ಕ್ಕಿಂತ ಮಕ್ಕಳ ಶಿಕ್ಷಣ ಮುಖ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಜನತೆಗೆ ಹೋಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್