ಮನೆ ಸುದ್ದಿ ಜಾಲ ಜನತೆಗೆ ಹೋಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಜನತೆಗೆ ಹೋಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

0

ನವದೆಹಲಿ: ಇಂದು ದೇಶದಾದ್ಯಂತ ಬಣ್ಣದ ಹಬ್ಬ ಹೋಳಿ ಶುಭಾಶಯವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ನಿಮ್ಮೆಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ ಮತ್ತು ಭ್ರಾತೃತ್ವದ ಸಂಕೇತವಾದ ಈ ಬಣ್ಣದ ಹಬ್ಬವು ನಿಮ್ಮ ಜೀವನದಲ್ಲಿ ಪ್ರತಿಯೊಂದರಲ್ಲೂ ಸಂತೋಷದ ಬಣ್ಣವನ್ನು ತರಲಿ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿ, ಹೋಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ದೇಶದ ಎಲ್ಲಾ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಬಣ್ಣಗಳ ಹಬ್ಬವಾದ ಹೋಳಿಯು ಸಮುದಾಯದ ಸೌಹಾರ್ದತೆ ಮತ್ತು ಸಾಮರಸ್ಯದ ಜೀವಂತ ಉದಾಹರಣೆಯಾಗಿದೆ. ಇದು ವಸಂತ ಆಗಮನದ ಜೊತೆಗೆ ಶುಭ ಸುದ್ದಿಯನ್ನು ತರುತ್ತದೆ. ಈ ಹಬ್ಬವು ದೇಶದ ಜನತೆಯ ಜೀವನದಲ್ಲಿ ಸಂತೋಷ, ಉತ್ಸಾಹ ಮತ್ತು ಹೊಸ ಶಕ್ತಿಯನ್ನು ತುಂಬಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ.

ಹಿಂದಿನ ಲೇಖನಉಕ್ರೇನ್‍ ನಲ್ಲಿ 50 ಮಂದಿ ಭಾರತೀಯರಿದ್ದಾರೆ: ವಿದೇಶಾಂಗ ಸಚಿವಾಲಯ
ಮುಂದಿನ ಲೇಖನಅಂಧರ ತ್ರಿಕೋನ ಟ್ವೆಂಟಿ-20 ಫೈನಲ್: ಭಾರತ-ಪಾಕಿಸ್ತಾನ ಮುಖಾಮುಖಿ