ಮನೆ ಆರೋಗ್ಯ ಈರುಳ್ಳಿ ಸೇವಿಸುವುದರಿಂದ ಹಲವಾರು ಪ್ರಯೋಜನ

ಈರುಳ್ಳಿ ಸೇವಿಸುವುದರಿಂದ ಹಲವಾರು ಪ್ರಯೋಜನ

0

ಪ್ರತಿಯೊಂದು ಅಡುಗೆಗೂ ಈರುಳ್ಳಿ ಬೇಕೇ ಬೇಕು, ಪ್ರತಿದಿನವೂ ಬೇಕು. ಈರುಳ್ಳಿ ಇಲ್ಲದ ಸಾಂಬಾರ್, ಪಲ್ಯ, ಸಾಗು ತಿನ್ನಲು ಅಷ್ಟು ರುಚಿ ಕೊಡುವುದಿಲ್ಲ. ಚಳಿಗಾಲ, ಮಳೆಗಾಲ, ಎಲ್ಲ ಸಮಯದಲ್ಲೂ ಈರುಳ್ಳಿ ಕೊಡುವ ಆರೋಗ್ಯ ಪ್ರಯೋಜನಗಳಿಗೆ ಯಾವುದೇ ಕೊರತೆ ಇರುವುದಿಲ್ಲ.

ಏಕೆಂದರೆ ಇದರಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಇವೆ. ತಲೆ ಕೂದಲು, ಹೃದಯ, ಉಗುರು, ಚರ್ಮ ಹೀಗೆ ಮನುಷ್ಯನ ದೇಹದ ಪ್ರತಿಯೊಂದು ಅಂಗಾಂಗಗಳಿಗೂ ಈರುಳ್ಳಿಯಿಂದ ಪ್ರಯೋಜನವಿದೆ.

ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈರುಳ್ಳಿ ತನ್ನಲ್ಲಿ ಪಾಲಿಫಿನಲ್ ಎಂಬ ಅಂಶಗಳನ್ನು ಒಳಗೊಂಡಿದ್ದು, ಆಂಟಿ ಆಕ್ಸಿಡೆಂಟ್ ರೂಪದಲ್ಲಿ ನಮ್ಮ ದೇಹಕ್ಕೆ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ರಕ್ಷಣೆ ನೀಡುತ್ತದೆ. ಇವುಗಳನ್ನು ತೆಗೆದು ಹಾಕಿ ನಮ್ಮ ದೇಹಕ್ಕೆ ಅದ್ಭುತವಾದ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.

ಆರೋಗ್ಯಕರವಾದ ಜೀರ್ಣಶಕ್ತಿ ಒದಗಿಸುತ್ತದೆ

• ನಾರಿನ ಅಂಶ ಅಪಾರ ಪ್ರಮಾಣದಲ್ಲಿರುವ ಈರುಳ್ಳಿ ನಮ್ಮ ಹೊಟ್ಟೆಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳನ್ನು ಸರಿಪಡಿಸುತ್ತದೆ. ಅದರಲ್ಲಿ ಅಜೀರ್ಣತೆ, ಮಲಬದ್ಧತೆ ಕೂಡ ಒಂದು.

• ಈರುಳ್ಳಿಯಲ್ಲಿ ತಜ್ಞರಾದ ಲವ್ನೀತ್ ಬತ್ರ ಹೇಳುವ ಹಾಗೆ oligofructose ಎಂಬ ಕರಗುವ ನಾರಿನ ಅಂಶ ಇರಲಿದ್ದು, ಕರುಳಿನ ಭಾಗದಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಇದು ಸಹಕಾರಿ ಯಾಗುತ್ತದೆ ಮತ್ತು ಇದರಿಂದ ಜೀರ್ಣ ಶಕ್ತಿ ಕ್ರಮೇಣವಾಗಿ ಹೆಚ್ಚಾಗುತ್ತದೆ.

ಬ್ಲಡ್ ಶುಗರ್ ನಿರ್ವಹಣೆ ಆಗುತ್ತದೆ

• ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್ ಪ್ರಮಾಣ ದೇಹದ ಬ್ಲಡ್ ಶುಗರ್ ಮಟ್ಟವನ್ನು ನಿರ್ವಹಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

•          ಇನ್ಸುಲಿನ್ ಉತ್ಪತ್ತಿಯಲ್ಲಿ ನೆರವಾಗುತ್ತದೆ. ಈರುಳ್ಳಿಯಲ್ಲಿ ಕಂಡುಬರುವ ಸಲ್ಫರ್, ಕ್ರೋಮಿಯಂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅದೇ ರೀತಿ ಇರುವಂತೆ ಮೈನ್ಟೈನ್ ಮಾಡುತ್ತದೆ.

ಆರೋಗ್ಯಕರವಾದ ತಲೆ ಕೂದಲಿಗೆ ಒಳ್ಳೆಯದು

• ಈರುಳ್ಳಿ ತಲೆ ಕೂದಲು ಸೊಂಪಾಗಿ ಬೆಳೆಯುವಂತೆ ನೋಡಿಕೊಳ್ಳುತ್ತದೆ. ಏಕೆಂದರೆ ಇದರಲ್ಲಿ ಪೊಲೇಟ್ ಎಂಬ ಸಣ್ಣ ಪ್ರಮಾಣದ ಪೌಷ್ಟಿಕ ಸತ್ವ ಇರಲಿದ್ದು ತಲೆ ಕೂದಲಿನ ಬೇರುಗಳಿಗೆ ಹಾಗೂ ಕಿರು ಚೀಲಗಳಿಗೆ ಇದರ ಅವಶ್ಯಕತೆ ತುಂಬಾ ಇದೆ.

• ಹಾಗಾಗಿ ಈರುಳ್ಳಿ ಪೇಸ್ಟ್ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಕೂದಲಿಗೆ ಸಿಗಬೇಕಾದ ಪೌಷ್ಟಿಕಾಂಶ ಸಿಕ್ಕಂತಾಗುತ್ತದೆ ಮತ್ತು ಕೆರೆಟಿನ್ ಉತ್ಪತ್ತಿ ಹೆಚ್ಚಾಗುತ್ತದೆ.

ಹೃದಯಕ್ಕೆ ತುಂಬಾ ಒಳ್ಳೆಯದು

• ಪ್ರತಿ ದಿನ ಈರುಳ್ಳಿ ಸ್ವಲ್ಪ ಬೆಲ್ಲ ತಿನ್ನುವುದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಮುಖ್ಯವಾಗಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡು ಸರಾಗವಾದ ರಕ್ತ ಸಂಚಾರವನ್ನು ಈರುಳ್ಳಿ ಕೊಡುತ್ತದೆ.

• ದೇಹದ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶವನ್ನು ಕರಗಿಸುವ ಕೆಲಸ ಮಾಡುತ್ತದೆ. ಹಾಗಾಗಿಯೇ ಹೃದಯದ ಮೇಲಿನ ಒತ್ತಡ ಕಡಿಮೆಯಾಗಿ ಆರೋಗ್ಯಕರವಾದ ಹೃದಯ ನಿಮ್ಮದಾಗುತ್ತದೆ.