ಮನೆ ಕ್ರೀಡೆ ಬರ್ತ್ ಡೇ ದಿನವೇ ಆಲ್ರೌಂಡರ್ ಅಕ್ಸರ್ ಪಟೇಲ್ ನಿಶ್ಚಿತಾರ್ಥ

ಬರ್ತ್ ಡೇ ದಿನವೇ ಆಲ್ರೌಂಡರ್ ಅಕ್ಸರ್ ಪಟೇಲ್ ನಿಶ್ಚಿತಾರ್ಥ

0

ನವದೆಹಲಿ : ಟೀಂ ಇಂಡಿಯಾ ಕ್ರಿಕೆಟ್​ನ ಆಲ್​ರೌಂಡರ್​ ಅಕ್ಸರ್ ಪಟೇಲ್​ ಹುಟ್ಟುಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಎಡಗೈ ಸ್ಪಿನ್ನರ್​​​​ ತಮ್ಮ ಬಹುದಿನದ ಗೆಳತಿ ಮೇಹಾ ಜೊತೆ ರಿಂಗ್​ ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಮೇಹಾ ನವದೆಹಲಿಯಲ್ಲಿ ವಾಸವಾಗಿದ್ದು, ಆಹಾರ ತಜ್ಞೆ ಮತ್ತು ಪೌಷ್ಟಿಕತಜ್ಞೆಯಾಗಿದ್ದಾರೆ.

​​ಜನವರಿ 20ರಂದು 28ನೇ ವಸಂತಕ್ಕೆ ಕಾಲಿಟ್ಟಿರುವ ಅಕ್ಸರ್ ಪಟೇಲ್​​​, ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದು ನನ್ನ ಜೀವನದ ಹೊಸ ಆರಂಭ. ಶಾಶ್ವತವಾಗಿ ಒಟ್ಟಿಗೆ ಜೀವನ ನಡೆಸಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಆಲ್​ರೌಂಡರ್​ ಅಕ್ಸರ್ ಪಟೇಲ್ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅನೇಕರು ವಿಶ್ ಮಾಡಿದ್ದು, ಪ್ರಮುಖವಾಗಿ ರಿಷಬ್ ಪಂತ್​, ಉಮೇಶ್ ಯಾದವ್, ಉನದ್ಕತ್​​​ ಮತ್ತು ಇಶನ್​ ಕಿಶನ್​ ಅಭಿನಂದಿಸಿದ್ದಾರೆ.

2015ರಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಇವರು 2021ರಲ್ಲಿ ಮೊದಲ ಟೆಸ್ಟ್​​ ಪಂದ್ಯವನ್ನಾಡಿದ್ದು, ಈವರೆಗೆ 5 ಟೆಸ್ಟ್​​ ಪಂದ್ಯಗಳಿಂದ 36 ವಿಕೆಟ್​ ಪಡೆದುಕೊಂಡಿದ್ದಾರೆ. ಏಕದಿನದಲ್ಲಿ ಭಾರತದ ಪರ 38 ಪಂದ್ಯಗಳನ್ನಾಡಿರುವ ಅಕ್ಸರ್​​ ಪಟೇಲ್​ 45 ವಿಕೆಟ್ ಪಡೆದುಕೊಂಡಿದ್ದು, 15 ಟಿ20 ಪಂದ್ಯಗಳಿಂದ 13 ವಿಕೆಟ್ ಕಿತ್ತಿದ್ದಾರೆ. ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲೂ ಅಕ್ಸರ್ ಪಟೇಲ್ ಮಿಂಚು ಹರಿಸಿದ್ದಾರೆ.

ಹಿಂದಿನ ಲೇಖನಭಾರತ ಟೆಸ್ಟ್ ತಂಡಕ್ಕೆ ಬೆಸ್ಟ್ ಕ್ಯಾಪ್ಟನ್ ಹೆಸರಿಸಿದ ಕೆವಿನ್ ಪೀಟರ್ಸನ್!
ಮುಂದಿನ ಲೇಖನ2022ರಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ರಾಹುಲ್-ಆಥಿಯಾ ಶೆಟ್ಟಿ?