ಪ್ರತಿಪಕ್ಷಗಳು ಜಾತಿಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಬಿಹಾರ ಸರ್ಕಾರವು ಬಿಡುಗಡೆ ಮಾಡಿರುವ ಜಾತಿ ಗಣತಿಯ ವರದಿ ರಾಜಕೀಯ ವಿವಾದವನ್ನು ಸೃಷ್ಟಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಆಗಲೂ ಅವರು ಬಡವರ ಭಾವನೆಗಳೊಂದಿಗೆ ಆಟವಾಡುತ್ತಿದ್ದರು, ಇಂದಿಗೂ ಅದೇ ಆಟವನ್ನು ಮುಂದುವರೆಸಿದ್ದಾರೆ. ಜಾತಿಯ ಹೆಸರಿನಲ್ಲಿ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಪ್ರಯತ್ನವನ್ನು ಪಾಪ ಎಂದು ಮೋದಿಯವರು ಬಣ್ಣಿಸಿದ್ದಾರೆ. ಕೆಲವರು ದೇಶದ ಪ್ರಗತಿ ಹಾಗೂ ಅಭಿವೃದ್ಧಿಯನ್ನು ದ್ವೇಷಿಸುತ್ತಾರೆ, ಅವರು ಕೇವಲ ತಮ್ಮ ಭವಿಷ್ಯವನ್ನು ಮಾತ್ರ ನೋಡುತ್ತಿದ್ದಾರೆ. ಚಿಂತನೆ ಇಲ್ಲದವರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ.
ಪ್ರತಿಪಕ್ಷಗಳಿಗೆ ಯಾವುದೇ ಮುಂದಾಲೋಚನೆ, ದೇಶದ ಬಗ್ಗೆ ಚಿಂತನೆಯಾಗಲೀ, ಮಾರ್ಗಸೂಚಿಯಾಗಲೀ ಇಲ್ಲ. ಬಿಜೆಪಿ ನೇತೃತ್ವದಡಿಯಲ್ಲಿ ದೇಶದ ಪ್ರಗತಿಯನ್ನು ಅವರು ಇಷ್ಟಪಡುವುದಿಲ್ಲ, ಜಾಗತಿಕ ವೇದಿಕೆಯಲ್ಲಿ ದೇಶವನ್ನು ಹೊಗಳುವುದು ಅವರಿಗೆ ಇಷ್ಟವಿಲ್ಲ, ಇಡೀ ವಿಶ್ವವೇ ಭಾರತದ ಕೀರ್ತಿಯನ್ನು ಹಾಡಿ ಹೊಗಳುತ್ತಿದೆ ಎಂದು ಹೇಳಿದರು.