ಮನೆ ಉದ್ಯೋಗ ಕರ್ನಾಟಕ ರಾಜ್ಯ ಬೀಜ ನಿಗಮ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಬೀಜ ನಿಗಮ: ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ), ಸೀನಿಯರ್ ಅಸಿಸ್ಟಂಟ್, ಜೂನಿಯರ್ ಅಸಿಸ್ಟಂಟ್ ಮತ್ತು ಬೀಜ ಸಹಾಯಕರು ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 32 ಹುದ್ದೆಗಳು ಖಾಲಿ ಇವೆ.

ಖಾಲಿ ಹುದ್ದೆಗಳ ವಿವರ : ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ): 16 ಹುದ್ದೆಗಳು, ಹಿರಿಯ ಸಹಾಯಕರು: 1 ಹುದ್ದೆ, ಕಿರಿಯ ಸಹಾಯಕರು: 9 ಹುದ್ದೆಗಳು, ಬೀಜ ಸಹಾಯಕರು: 6 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ವಿದ್ಯಾರ್ಹತೆ ಹುದ್ದೆವಾರು:

ಸಹಾಯಕ ವ್ಯವಸ್ಥಾಪಕರು (ಕಾರ್ಯಾಚರಣೆ): ಬಿಎಸ್ಸಿ ಇನ್‌ ಕೃಷಿ ಪದವಿ ಪಡೆದಿರಬೇಕು, ಹಿರಿಯ ಸಹಾಯಕರು: ಬಿಕಾಂ/ಬಿಬಿಎಂ ಪದವಿ ಜತೆಗೆ, ಟ್ಯಾಲಿ ಸರ್ಟಿಫಿಕೇಟ್‌ ಪಡೆದಿರಬೇಕು, ಕಿರಿಯ ಸಹಾಯಕರು: ಬಿಕಾಂ/ಬಿಬಿಎಂ ಪದವಿ ಜತೆಗೆ, ಟ್ಯಾಲಿ ಸರ್ಟಿಫಿಕೇಟ್‌ ಪಡೆದಿರಬೇಕು, ಬೀಜ ಸಹಾಯಕರು: ಕೃಷಿಯಲ್ಲಿ 2 ವರ್ಷದ ಡಿಪ್ಲೊಮ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಅರ್ಹತೆ ವರ್ಗಾವಾರು ಇಂತಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ. ಅರ್ಜಿ ಸಲ್ಲಿಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ಆಯ್ಕೆ ನಡೆಸಲಾಗುತ್ತದೆ.

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಜುಲೈ 20 ಕೊನೆಯ ದಿನ. ಇ-ಪೋಸ್ಟ್‌ ಅಂಚೆ ಕಚೇರಿಗಳಲ್ಲಿ ಅಪ್ಲಿಕೇಶನ್ ಶುಲ್ಕ ಪಾವತಿಗೆ ಜುಲೈ 25 ಕೊನೆಯ ದಿನ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ http://kea.kar.nic.in/ ಗೆ ಭೇಟಿ ನೀಡಬಹುದು.

ಹಿಂದಿನ ಲೇಖನರಾಜ್ಯದ ವಿವಿಧೆಡೆ ಭಾರಿ ಮಳೆ: ಜಲಾಶಯಗಳ ಒಳ ಹರಿವು ಹೆಚ್ಚಳ; ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಮುಂದಿನ ಲೇಖನಧಾರಕಾರ ಮಳೆ: ರಸ್ತೆಗೆ ಉರುಳಿದ ಕಲ್ಲು ಬಂಡೆ