ಮನೆ ವ್ಯಕ್ತಿತ್ವ ವಿಕಸನ ಪೂರ್ವಾಗ್ರಹಗಳಿಂದ ಮುಕ್ತರಾಗದೆ ವಿಕಾಸವಿಲ್ಲ

ಪೂರ್ವಾಗ್ರಹಗಳಿಂದ ಮುಕ್ತರಾಗದೆ ವಿಕಾಸವಿಲ್ಲ

0

“ಅವರೆಲ್ಲ ಕೆಟ್ಟವರು”, “ಮಕ್ಕಳಿಗೆ ಜವಾಬ್ದಾರಿ ಇಲ್ಲ” ಮಕ್ಕಳು ಕೆಟ್ಟು ಹೋಗಿದ್ದಾರೆ ಸುಟ್ಟುಕೊಟ್ಟರೂ ವಿದ್ಯೆ ಅವನಿಗೆ ತಲೆಗೆ ಹತ್ತುವುದಿಲ್ಲ”- ಇಂತಹ ಅನೇಕ ಹೇಳಿಕೆಗಳನ್ನು ನೀವು ಕೇಳಿರಬಹುದು. ನೀವೂ ಇಂತಹ ಮಾತುಗಳನ್ನು ಆಡಿರಬಹದು.

Join Our Whatsapp Group

ಇವೆಲ್ಲ ಪೂರ್ವಾ ಗ್ರಹಗಳು.ಇದು ಹೀಗೆಯೇ ಎಂದು ತೀರ್ಮಾನಿಸಿದಂತಹ ವಿಚಾರಗಳಾಗಿರುತ್ತವೆ. ನೀರು ಯಾವಾಗಲೂ ಕೆಳಕ್ಕೇ ಹರಿಯುವುದು ಎನ್ನುವುದು ಪ್ರಾಕೃತಿಕ ಸತ್ಯ. ಆದರೆ ಆ ಸತ್ಯಕ್ಕೆ ವಿರುದ್ಧವಾಗಿ ನೀರನ್ನು ಮೇಲಕ್ಕೆ ಏಕೆ ಹಾಯಿಸಬಾರದು ಎಂಬ ಯೋಚನೆಯನ್ನೇ ಮನುಷ್ಯ ಮಾಡಿದರೆ ಇದ್ದರೆ ನಿರೆತ್ತುವ ಪಂಪನ್ನು ಕಂಡುಹಿಡಿಯಲು ಸಾಧ್ಯವಿರಲಿಲ್ಲ. ಭೂಮಿ ಚಪ್ಪಟೆಯಾಗಿದೆ ಎಂಬ ವಿಚಾರಕ್ಕೆ ಭಿನ್ನವಾಗಿ ಚಪಟ್ಟೆಯಾಗಿಯೇ ಏಕಿರಬೇಕು ಎಂದು ಯೋಚನೆರನ್ನೇ ಮಾಡದಿದ್ದರೆ ಇವತ್ತು ಖಗೋಳ ವಿಜ್ಞಾನ ಕ್ಷೇತ್ರವು ಇಂದು ಬೆಳೆದಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರಲಿಲ್ಲ.

ಸ್ಥಾಪಿತವಾಗಿರುವ, ಬದಲಾಯಿಸಲಿಕ್ಕಾಗದ  ಪ್ರಾಕೃತಿಕ ಸಿದ್ಧಾಂತಕ್ಕೇ  ಭಿನ್ನವಾಗಿ ಯೋಚನೆ ಮಾಡದೆ ಇದ್ದರೆ ಬೆಳವಣಿಗೆಯಾಗಲಿ, ಪ್ರಗತಿಯಾಗಲಿ ಸಾಧ್ಯವಾಗುವುದಿಲ್ಲವೆಂದ ಮೇಲೆ ಇನ್ನು ಕೆಲವು ಹೇಳಿಕೆಗಳ ಪೂರ್ವಗ್ರಹಕ್ಕೆ ಕಟ್ಟುಬಿದ್ದರೆ ನಮ್ಮ ವೈಕ್ತಿತ್ವ ವಿಕಾಸವಾಗಲು ಹೇಗೆ ಸಾಧ್ಯ. ಒಬ್ಬ ಶಿಕ್ಷಕನು ಈ “ವಿದ್ಯಾರ್ಥಿಗೆ ಏನ್ನನ್ನೇ ಮಾಡಿದರೂ ವಿದ್ಯೆ ಹತ್ತುವುದಿಲ್ಲ” ಎಂದು ಎಲ್ಲಿ ಯ ತನಕ ಯೋಚಿಸುತ್ತಾರೆಯೋ ಅಲ್ಲಿಯ ತನಕ ವಿದ್ಯಾರ್ಥಿಗೆ ವಿದ್ಯೆ ತಲೆಗೆ ಹತ್ತಲು ಏನು ಮಾಡಬೇಕು ಎನ್ನುವುದು ಶಿಕ್ಷಕರಿಗೆ ಹೊಳೆಯಲು ಸಾಧ್ಯವಿಲ್ಲ. ಒಬ್ಬ ವಿದ್ಯಾರ್ಥಿ ಎಂದಿನ ತನಕ, “ಗಣಿತ ಮತ್ತು ಇಂಗ್ಲಿಷ್ ನಲ್ಲಿ ನಾನು ಪಾಸಾಗಲು ಸಾಧ್ಯವಿಲ್ಲ ”ಎಂದು ಯೋಚಿಸುತ್ತಿರುತ್ತಾನೆ/ಳೆ ಯೋ ಅಲ್ಲಿಯ ತನಕ ಅವನು|ಳಿಗೆ ಗಣಿತ ಮತ್ತು ಇಂಗ್ಲೀಷಿನಲ್ಲಿ ಪಾಸಾಗಲು ಏನು ಮಾಡಬೇಕು ಎಂದು ಹೊಳೆಯಲು ಸಾಧ್ಯವಿಲ್ಲ ಅದರಿಂದ ನಾವು ವಿಕಾಸ ಹೊಂದಬೇಕೆಂದು ಬಯಸುವುದಾದರೆ ಯಾವತ್ತು ನಾವು ಯಾವುದೇ ವಿಧವಾದ ಪೂರ್ವಾಗ್ರಹಗಳಿಗೆ ಬದ್ಧರಾಗಬಾರದು.

ಇದರರ್ಥ ಗ್ರಹಿಕೆಗಳೇ ಇರಬಾರದೆಂದಲ್ಲ ಗ್ರಹಿಕೆಗಳೂ ಇರಬಹದು ಅದರಿಂದಾಗಿ ಪೂರ್ವಗ್ರಹಗಳೂ ಇರಬಹುದು. ಆದರೆ ಪೂರ್ವಾಗ್ರಹಗಳಿಗೆ ಬದ್ಧರಾಗಬಹುದು.ಇದುವರೆಗಿನ ಅನುಭವದಿಂದ ಇಂಥ ತೀರ್ಮಾನ ಮಾಡಿಕೊಂಡಿದೇನೆ. ಆದರೆ ಈ ತೀರ್ಮಾನವೂ ಬದಲಾಗಬಹುದು ಎಂದು ಯೋಚಿಸಬೇಕು. ಆಗ ಯೋಚನೆಗಳು ತೆರೆದಿಟ್ಟಲ್ಪಡುತ್ತವೆ. ಅದರಿಂದಾಗಿ ವಿಕಾಸ ಸಾಧ್ಯವಾಗುತ್ತದೆ.

ಹಿಂದಿನ ಲೇಖನಬೆಂಗಳೂರಿನಿಂದ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ: ಪ್ರಕರಣ ದಾಖಲು
ಮುಂದಿನ ಲೇಖನಹತ್ಯೆ ಪ್ರಕರಣ: ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಖುಲಾಸೆ