ಮನೆ ಯೋಗಾಸನ ಯೋಗದಲ್ಲಿ ಪಾಲಿಸಲೇಬೇಕಾದ ನಿಯಮಗಳಿವು

ಯೋಗದಲ್ಲಿ ಪಾಲಿಸಲೇಬೇಕಾದ ನಿಯಮಗಳಿವು

0

ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗಾಸನ ತುಂಬಾ ಸಹಕಾರಿ. ಆದರೆ ಈ ಯೋಗಾಸನವನ್ನು ಕ್ರಮಬದ್ಧವಾಗಿ ಮಾಡಬೇಕು. ಎಲ್ಲಾ ಸಮಯದಲ್ಲಿ ಯೋಗಾಭ್ಯಾಸ ಮಾಡುವಂತಿಲ್ಲ.

ಯೋಗಾಭ್ಯಾಸ ಹೀಗಿರಲಿ:

1. ಯೋಗವನ್ನು ಮುಂಜಾನೆ ಅಭ್ಯಾಸ ಮಾಡುವುದು ತುಂಬಾ ಒಳ್ಳೆಯದು. ಸ್ನಾನದ ಬಳಿಕ ಖಾಲಿ ಹೊಟ್ಟೆಯಲ್ಲಿ ಯೋಗಾಭ್ಯಾಸ ಮಾಡಬೇಕು.

2. ಸ್ನಾನದ ಮುಂಚೆ ಯೋಗ ಮಾಡುವುದಾದರೆ ಯೋಗ ಮಾಡಿದ ತಕ್ಷಣ ಸ್ನಾನ ಮಾಡಬೇಡಿ. ಅರ್ಧ ಗಂಟೆಯ ಬಳಿಕ ಮಾಡಿ.

3. ಯೋಗವನ್ನು ಸಮತಟ್ಟಾದ ನೆಲದ ಮೇಲೆ ಮಾಡಬೇಕು. ಯೋಗ ಮಾಡುವ ರೂಂನಲ್ಲಿ ಗಾಳಿ ಬೆಳಕು ಆಡುವಂತೆ ಇರಬೇಕು.

4. ಯೋಗವನ್ನು ಬರೀ ನೆಲದ ಮೇಲಾಗಲಿ, ಸಿಮೆಂಟ್ ಬೆಂಚಿನ ಮೇಲಾಗಲಿ ಮಾಡಬಾರದು. ಯೋಗ ಮ್ಯಾಟ್ ಅಥವಾ ಬ್ಲಾಂಕೆಟ್, ಅಥವಾ ಶುದ್ಧ ಗಟ್ಟಿಯಾದ ಬಟ್ಟೆಯನ್ನು ಹಾಸಿ ಅದರಲ್ಲಿ ಮಾಡಬೇಕು.

5. ಬೆಳಗ್ಗೆ ಯೋಗ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಮಾಡಿದರೆ, ಸಂಜೆ ಮಾಡುವವರು ಪಶ್ಚಿಮ ಅಥವಾ ದಕ್ಷಿಣಕ್ಕೆ ಮುಖ ಮಾಡುವುದು ಒಳ್ಳೆಯದು.

6. ಯೋಗಾಭ್ಯಾಸವನ್ನು ಶಾಂತ ಮನಸ್ಸಿನಿಂದ ಮಾಡಬೇಕು. ದೇಹವನ್ನು ದಂಡಿಸಬಾರದು. ಯೋಗ ಮಾಡುವಾಗ ಸುಸ್ತಾದರೆ ಹಾಗೇ ಮುಂದುವರೆಸದೆ ವಿಶ್ರಾಂತಿ ತಗೊಂಡು ಯೋಗಾಭ್ಯಾಸ ಮುಂದುವರೆಸಬೇಕು.

7. ಯೋಗ ಮಾಡಲು ನಿಯಮಿತ ಸಮಯವನ್ನು ಪಾಲಿಸುವುದು ಒಳ್ಳೆಯದು.

8. ಯೋಗ ಮಾಡುವಾಗ ಬೇಡದ ವಿಚಾರಗಳನ್ನು ಮನಸ್ಸಿನಿಂದ ಹೊರದೂಡಬೇಕು.

9. ಯೋಗಾಭ್ಯಾಸ ಮಾಡಿದಾಗ ದೇಹದಲ್ಲಿರುವ ಕಶ್ಮಲಗಳು ನೇರವಾಗಿ ಮೂತ್ರಕೋಶಕ್ಕೆ ಹೋಗಿ ಸೇರುತ್ತದೆ. ಆದ್ದರಿಂದ ಯೋಗ ಮಾಡಿದ ಬಳಿಕ ಮೂತ್ರ ವಿಸರ್ಜನೆಗೆ ಹೋಗುವುದು ಒಳ್ಳೆಯದು.

10. ಯೋಗ ಮಾಡುವಾಗ ನೈಸರ್ಗಿಕ ಕರೆ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬಾರದು. ಅಲ್ಲದೆ ಕೆಮ್ಮು, ಸೀನು ಬಂದಾಗ ತಡೆಹಿಡಿಯಬಾರದು. ನೀರು ಕುಡಿಬೇಕೆಂದು ಅನಿಸಿದರೆ ಒಂದು ಗುಟುಕಷ್ಟೇ ಕುಡಿಯಿರಿ.

11. ಯೋಗ ಮಾಡುವಾಗ ಬೆವರು ಬಂದರೆ ಮೃದು ಬಟ್ಟೆಯಿಂದ ಬೆವರು ಒರೆಸಿ. ಬೆವರು ನೈಸರ್ಗಿಕವಾಗಿ ಒಣಗಿದರೆ ಒಳ್ಳೆಯದು.

12. ಯೋಗ ಮಾಡಿದ ಬಳಿಕ ಧ್ಯಾನ ಮತ್ತು ಪ್ರಾಣಯಾಮ ಮಾಡಬೇಕು.

13. ಯೋಗ ಮಾಡಿದ ಬಳಿಕ 5 ನಿಮಿಷ ಶವಾಸನದಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕು.

ಏನು ಮಾಡಬಾರದು?

* ಮಹಿಳೆಯರು ಮುಟ್ಟಿನ ಸಮಯದಲ್ಲಿ ಎಲ್ಲಾ ಬಗೆಯ ಯೋಗಾಸನ ಮಾಡುವಂತಿಲ್ಲ. ಯೋಗ ತರಬೇತಿದಾರರ ಮಾರ್ಗದರ್ಶನ ಪಡೆಯಿರಿ.

* ಯೋಗ ಮಾಡುವಾಗ ಹೊಟ್ಟೆ ಖಾಲಿ ಇರಬೇಕು. ಊಟವಾದ ಬಳಿಕ ಯೋಗ ಮಾಡಲು 3 ಗಂಟೆಯ ಅಂತರವಿರಬೇಕು.

* ಯೋಗ ಮಾಡಿದ 30 ನಿಮಿಷದ ಬಳಿಕವಷ್ಟೆ ನೀರು ಕುಡಿಯುವುದಾಗಲಿ, ಸ್ನಾನ ಮಾಡುವುದಾಗಲಿ ಮಾಡಬೇಕು.

* ಅನಾರೋಗ್ಯದ ಸಮಯದಲ್ಲಿ ಯೋಗ ಮಾಡಬೇಡಿ.

* ಯೋಗ ಮಾಡಿದ ಬಳಿಕ ವ್ಯಾಯಾಮ ಮಾಡಬೇಡಿ. ವ್ಯಾಯಾಮ ಮಾಡಿದ ಬಳಿಕ ಯೋಗ ಮಾಡಬಹುದು.

* ಗಲೀಜು ಸ್ಥಳದಲ್ಲಿ ಯೋಗ ಅಭ್ಯಾಸ ಮಾಡಬೇಡಿ.

ಯಾವುದೇ ಯೋಗ ಮಾಡುವಾಗ ಅದನ್ನು ಹೇಗೆ ಮಾಡಿದರೆ ಒಳ್ಳೆಯದೆಂದು ತಿಳಿದುಕೊಂಡು ಮಾಡಿದರಷ್ಟೆ ಒಳ್ಳೆಯದು.

ಹಿಂದಿನ ಲೇಖನಹನುಮ ನಮ್ಮ ತಾಯಿತಂದೆ
ಮುಂದಿನ ಲೇಖನಮುಂದಿನ ವರ್ಷ ಈ ಐದು ರಾಶಿಗಳ ಮೇಲೆ ರಾಹುವಿನ ಪ್ರಭಾವ ಬೀರಲಿದೆ