ಮನೆ ವ್ಯಾಯಾಮ ಮಹಿಳೆಯರು ತೂಕ ಇಳಿಸಿಕೊಳ್ಳಲು ಈ ವ್ಯಾಯಾಮಗಳು ಸಹಕಾರಿ

ಮಹಿಳೆಯರು ತೂಕ ಇಳಿಸಿಕೊಳ್ಳಲು ಈ ವ್ಯಾಯಾಮಗಳು ಸಹಕಾರಿ

0

ಮಹಿಳೆಯರ ಒತ್ತಡದ ಜೀವನದಲ್ಲಿ ವ್ಯಾಯಾಮಕ್ಕೆ ಸಮಯ ದೊರೆಯುವುದು ಕಷ್ಟ. ನಿಮ್ಮಆರೋಗ್ಯದ ಹಿತದೃಷ್ಟಿಯಿಂದ ಕೆಲವೊಂದು ವ್ಯಾಯಾಮಗಳನ್ನು ಮಾಡಲೇಬೇಕು. ಇದರಿಂದ ತೂಕ ಇಳಿಕೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಆ ವ್ಯಾಯಾಮಗಳು ಯಾವುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ವಾಕಿಂಗ್

ವಾಕಿಂಗ್ ಮಾಡುವುದರಿಂದ ನಿಮ್ಮ ಮನಸ್ಸನ್ನು ರಿಲ್ಯಾಕ್ಸ್ ಆಗುತ್ತದೆ. ದಿನವೆಲ್ಲಾ ತಾಜಾತನದಿಂದ ಕೂಡಿರುತ್ತದೆ. ಅಲ್ಲದೆ, ವಾಕಿಂಗ್ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ನಾಯುಗಳನ್ನು ಬಲಪಡಿಸಿ, ತೂಕ ನಷ್ಟಕ್ಕೆ ಕಾರಣವಾಗುತ್ತದೆ. ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ. ಕೀಲುಗಳನ್ನು ಬಲಿಷ್ಠಗೊಳಿಸುತ್ತದೆ. ಶ್ವಾಸಕೋಶದ ಆರೋಗ್ಯವನ್ನು ಕಾಪಾಡುತ್ತದೆ. ಒಂದು ಮಹತ್ವವಾದ ಅಧ್ಯಯನದ ಪ್ರಕಾರ ಪ್ರತಿನಿತ್ಯ 30 ನಿಮಿಷಗಳ ನಡಿಗೆಯು ಅವರ ಸೊಂಟದ ಮುರಿತದ ಅಪಾಯವನ್ನು ಶೇ.40 ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ.

ಯೋಗ

ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ, ಬದಲಾಗಿ ಇದು ನಿಮ್ಮ ಮನಸ್ಥಿತಿ ಮತ್ತು ಒತ್ತಡವನ್ನು ಸುಧಾರಿಸುತ್ತದೆ. ಯೋಗದ ಭಂಗಿಗಳು ನಿಮ್ಮ ಮನಸ್ಸನ್ನು ಪ್ರಶಾಂತವಾಗಿಸಿ, ಸುಂದರವಾದ ಶರೀರದ ರಚನೆಗೆ ಕಾರಣವಾಗುತ್ತದೆ. ಹೊರಗೆ ಹೋಗಲು ಇಷ್ಟ ಪಡದೇ ಇರುವವರು ಮನೆಯಲ್ಲಿಯೇ ಯೋಗ ಮಾಡಬಹುದು. ಯೋಗ ಸ್ಮರಣ ಶಕ್ತಿಯನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನಿಮಗೆ ತಿಳಿದಿರಲಿ, ಯೋಗ ಮಾಡುವ ಜನರು ೪೩% ಕಡಿಮೆ ವೈದ್ಯಕೀಯ ಸೇವೆಗಳನ್ನು ಬಳಸುತ್ತಾರೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.

ಜಾಗಿಂಗ್

ವಾಕಿಂಗ್ ಮಾಡುವುದಕ್ಕಿಂತ ವೇಗವಾದ ಜಾಗಿಂಗ್ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಆದರೆ ಜಾಗಿಂಗ್ ಮಾಡಲು ಕಷ್ಟ ಎನ್ನುವವರು ವಾಕಿಂಗ್ ವೇಗಗೊಳಿಸಿ. ಇದರಿಂದ ಹಾನಿಕಾರಕ ಕೊಬ್ಬನ್ನು ಅಥವಾ ಹೊಟ್ಟೆಯ ಸುತ್ತ ಬೆಳೆದಿರುವ ಅನವಶ್ಯಕ ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.

ಜಿಗಿತ

ಜಿಗಿತ ಮತ್ತು ಸ್ಕ್ವಾಟ್ಸ್ ಮಾಡುವುದರಿಂದ ಪೃಷ್ಠ, ತೊಡೆ, ಸೊಂಟ ಮತ್ತು ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಅದ್ಭುತವಾಗಿ ಕೆಲಸ ಮಾಡುತ್ತದೆ. ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡಿ ಆರೋಗ್ಯಕರವಾಗಿ ತೂಕವನ್ನು ಕಡಿಮೆ ಮಾಡುತ್ತದೆ.

ಸೈಕ್ಲಿಂಗ್

30 ನಿಮಿಷಗಳ ಸೈಕ್ಲಿಂಗ್ ನಿಮ್ಮ ದೇಹದ ತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಹಾರ್ವರ್ಡ್ ಹೆಲ್ತ್ ಸಂಶೋಧನೆಯ ಪ್ರಕಾರ, 16 ವರ್ಷಗಳ ಸುರ್ದೀಘ ಅಧ್ಯಯನದ ಕಾಲ 18,000 ಕ್ಕೂ ಹೆಚ್ಚು ಮಹಿಳೆಯರನ್ನು ಅನುಸರಿಸಲಾಯಿತು. 30 ನಿಮಿಷಗಳ ದೈಹಿಕ ಚಟುವಟಿಕೆಯಿಂದಾಗಿ ಮಹಿಳೆಯರು ಸಾಕಷ್ಟು ತೂಕವನ್ನು ಇಳಿಸಿಕೊಂಡಿದ್ದರು.

ಈಜು

ಈಜುವುದರಿಂದ ದೇಹದ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬಹುದು. ಅದರ ಜೊತೆಗೆ ತೂಕವನ್ನು ಕೆಳೆದುಕೊಳ್ಳಬಹುದು. ಇದು ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ಸ್ನಾಯುಗಳನ್ನು ಬಲಪಡಿಸುತ್ತದೆ. ಇತರ ದೈಹಿಕ ಚಟುವಟಿಕೆಯ ಪರ್ಯಾಯವಾಗಿ ಈಜುವುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನೀರಿನ ಆಧಾರಿತ ವ್ಯಾಯಾಮವು ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ.

ಬೈಸಿಕಲ್ ಕ್ರಂಚಸ್

30 ನಿಮಿಷಗಳ ವ್ಯಾಯಾಮವು ನಿಮ್ಮ ಕಿಬ್ಬೊಟ್ಟೆಯನ್ನು ಚಪ್ಪಟೆಯಾಗಿಸುತ್ತದೆ. ಕ್ರಂಚಸ್ ಮಾಡುವುದು ಮೇಲಿನ ಮತ್ತು ಕೆಳ ಹೊಟ್ಟೆಯ ಬೊಜ್ಜನ್ನು ನೀವು ಕಡಿಮೆ ಮಾಡಿಕೊಳ್ಳಬಹುದು. ಇದು ನಿಮ್ಮ ಸೊಂಟ, ಕೆಳ ಬೆನ್ನು ಮತ್ತು ಸೊಂಟಕ್ಕೆ ವಿಶೇಷವಾಗಿ ಶಕ್ತಿಯನ್ನು ನೀಡುತ್ತದೆ. ಕ್ರಂಚಸ್ ನಲ್ಲಿ ಹಲವಾರು ವಿಧಗಳಿವೆ ಅವುಗಳನ್ನು ನೀವು ಅನುಸರಿಸಬಹುದು.

ಸ್ಕ್ವಾಟ್

ಸ್ಕ್ವಾಟ್ ಹೆಚ್ಚಿನ ಪರಿಣಾಮಕಾರಿಯಾದ ದೇಹ ದಂಡನೆಯಾಗಿದೆ. ಸ್ಕ್ವಾಟ್ ನಲ್ಲಿ ಕೂಡ ಹೆಚ್ಚು ಅವೃತ್ತಿ ಇದ್ದು, ನಿಮ್ಮ ಸ್ಥೂಲಕಾಯವನ್ನು ಚಮತ್ಕಾರದಂತೆ ಕಡಿಮೆ ಮಾಡುತ್ತದೆ. ಮುಖ್ಯವಾಗಿ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸ್ಕ್ವಾಟ್‌ಗಳು ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ದೇಹದಲ್ಲಿನ ಸೆಲ್ಯುಲೈಟ್ ಗಳನ್ನು ತಗ್ಗಿಸಲು ಇವು ಹೆಚ್ಚು ಪರಿಣಾಮಕಾರಿ. ಪ್ರಾರಂಭದಲ್ಲಿ ಸ್ಕ್ವಾಟ್ಸ್ ಮಾಡುವಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ಕ್ರಮೇಣ ಇದು ಸಹಜ ಸ್ಥಿತಿಗೆ ಬರುತ್ತದೆ.

ಹಿಂದಿನ ಲೇಖನಕೋವಿಡ್:‌ ರಾಜ್ಯದಲ್ಲಿ 1206 ಹೊಸ ಪ್ರಕರಣ ವರದಿ
ಮುಂದಿನ ಲೇಖನಮೂಗಿನ ಮೂಲಕ ಕೋವಿಡ್‌ ಲಸಿಕೆ ನೀಡಿಕೆ: 3ನೇ ಹಂತದ ಪರೀಕ್ಷೆ ಯಶಸ್ವಿ