ಮನೆ ಆರೋಗ್ಯ ಈ ಮೂರು ಬಗೆಯ ಡ್ರೈ ಫ್ರೂಟ್ಸ್ ನಲ್ಲಿ ಥೈರಾಯ್ಡ್ ವಾಸಿ ಮಾಡುವ ಶಕ್ತಿ ಇದೆ!

ಈ ಮೂರು ಬಗೆಯ ಡ್ರೈ ಫ್ರೂಟ್ಸ್ ನಲ್ಲಿ ಥೈರಾಯ್ಡ್ ವಾಸಿ ಮಾಡುವ ಶಕ್ತಿ ಇದೆ!

0

ಡ್ರೈ ಫ್ರೂಟ್ಸ್ ಗಳು ಅಥವಾ ಒಣಫಲಗಳು ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಉಳಿದ ಎಲ್ಲಾ ವಿಷ್ಯದಲ್ಲೂ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಪದಾರ್ಥಗಳು ಎನ್ನುವ ಬಗ್ಗೆ ಎರಡು ಮಾತಿಲ್ಲ. ಪ್ರತಿಯೊಂದು ಡ್ರೈಫ್ರೂಟ್ಸ್ ಗಳಲ್ಲೂ ಕೂಡ ಅರೋಗ್ಯಕ್ಕೆ ಬೇಕಾಗುವ, ಪೌಷ್ಟಿಕ ಸತ್ವಗಳು ಸಿಗುವುದರಿಂದ, ಸಾಮಾನ್ಯವಾಗಿ ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು ಕಂಡು ಬರುವುದಿಲ್ಲ.

Join Our Whatsapp Group

ಪಿಸ್ತಾ ಬೀಜಗಳನ್ನು ಸೇವನೆ ಮಾಡಿ..

• ಪಿಸ್ತಾ ಬೀಜಗಳನ್ನು, ಬೇಕರಿಯಲ್ಲಿ ಸಿಗುವ ಸ್ವಲ್ಪ ದುಬಾರಿ ಬೆಲೆಯ ಸಿಹಿ ತಿಂಡಿಗಳಲ್ಲಿ ಹೆಚ್ಚಾಗಿ ಬಳಸು ತ್ತಾರೆ. ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲಿ ಈ ಒಣಫಲ ಸಿಗುವುದಿಲ್ಲ! ಸೂಪರ್ ಮಾರ್ಕೆಟ್ ನಂತಹ ಶಾಪಿಂಗ್ ಸೆಂಟರ್ ನಲ್ಲಿ ಮಾತ್ರ ಕಂಡು ಬರುತ್ತದೆ.

• ಇದಕ್ಕೆ ಕಾರಣ ಇಷ್ಟೇ, ಬೆಲೆ ದುಬಾರಿ ಎನ್ನುವ ಒಂದೇ ಕಾರಣಕ್ಕೆ ಹೆಚ್ಚಿನವರು ಇದರಿಂದ ದೂರ ನಿಲ್ಲುತ್ತಾರೆ.

• ಆದರೆ ನಿಮಗೆ ಗೊತ್ತಿಲಿ, ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಒಣಬೀಜ, ಒಳ್ಳೆಯ ಆರೋಗ್ಯಕರ ಕೊಬ್ಬಿನ ಅಂಶಗಳು ಮತ್ತು ಅತ್ಯುತ್ತಮ ಪ್ರಮಾಣದ ಪ್ರೊಟೀನ್, ನಾರಿನಾಂಶ ಹಾಗೂ ಆಂಟಿ -ಆಕ್ಸಿಡೆಂಟ್ ಅಂಶಗಳು ಲಭ್ಯವಿವೆ.

• ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ ಬಾದಾಮಿ ಬೀಜಗಳ ನಂತ ರದ ಸ್ಥಾನವನ್ನು ಪಿಸ್ತಾ ಬೀಜಗಳು ತುಂಬುತ್ತದೆ ಎಂದು ಅಭಿಪ್ರಾಯಪಡುತ್ತಾರೆ.

• ಹೀಗಾಗಿ ಮಿತವಾಗಿ, ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ ಅಥವಾ ದಿನದ ಯಾವುದೇ ಸಮಯದಲ್ಲಿ ಮಿತವಾಗಿ ಈ ಒಣಫಲವನ್ನು ಸೇವನೆ ಮಾಡುವುದರಿಂದ, ದೇಹದಲ್ಲಿ ಥೈರಾಯ್ಡ್ ಹಾರ್ಮೋ ನಿನ ಅಸಮತೋಲನ ವನ್ನು ನಿಯಂತ್ರಣ ಮಾಡಿಕೊಳ್ಳಲು ನೆರವಾಗುತ್ತದೆ. ಆದರೆ ಪಿಸ್ತಾ ಬೀಜಗಳನ್ನು ತಿನ್ನುವಾಗ ಮೇಲಿನ ಸಿಪ್ಪೆಯನ್ನು ತೆಗೆದು ಹಾಕುವುದು ಒಳ್ಳೆಯದು.

ಒಣ ಖರ್ಜೂರ

• ಖರ್ಜೂರ ಮರುಭೂಮಿಯ ಬೆಳೆಯಾದರೂ ಹಲವಾರು ಪೌಷ್ಟಿಕ ಸತ್ವ ಒಳಗೊಂಡಿರುವ ಅದ್ಭುತ ಆಹಾರ ವಾಗಿದೆ. ಇದೇ ಕಾರಣಕ್ಕೆ ಇದಕ್ಕೆ ಸೂಪರ್ ಫುಡ್ ಎನ್ನುವ ಪಟ್ಟ ಕೊಡಲಾಗಿದೆ.

• ಖರ್ಜೂರವನ್ನು ಹಸಿಯಾಗಿಯೂ ತಿನ್ನಬಹುದು ಇಲ್ಲಾಂ ದ್ರೆ ಒಣಗಿದ ರೂಪದಲ್ಲಿ ಇರುವುದನ್ನೂ ಕೂಡ ತಿನ್ನ ಬಹುದು. ಒಟ್ಟಾರೆ ಹೇಗೆ ತಿಂದರೂ ಕೂಡ ಆರೋಗ್ಯಕ್ಕೆ ತುಂಬಾನೇ ಲಾಭ ತಂದುಕೊಡುತ್ತದೆ.

• ಸಾಮಾನ್ಯವಾಗಿ ನೈಸರ್ಗಿಕ ಸಿಹಿ ಅಂಶ ಇರುವ ಖರ್ಜೂ ರವನ್ನು ಹೆಚ್ಚಿನವರು ತಿನ್ನಲು ಇಷ್ಟಪಡುವುದಿಲ್ಲ

• ಆದರೆ ನಿಮಗೆ ಗೊತ್ತಿರಲಿ, ಖರ್ಜೂರಗಳಲ್ಲಿ ಕರಗುವ ನಾರಿನಾಂಶ, ಪೊಟ್ಯಾ ಸಿಯಂ, ಮೆಗ್ನೀಸಿಯಮ್, ವಿಟ ಮಿನ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ.

• ಅಲ್ಲದೆ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ನಂತಹ, ನೈಸ ರ್ಗಿಕ ಸಕ್ಕರೆ ರೂಪಕಗಳು ಇರುವುದರಿಂದ, ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರ ಎನ್ನುವುದರಲ್ಲಿ ಎರಡು ಮಾತಿಲ್ಲ.

• ಇದಕ್ಕೆ ಪ್ರಮುಖ ಕಾರಣ, ಇದರಲ್ಲಿ ಕಂಡು ಬರುವ ಅಯೋಡಿನ್ ಹಾಗು ಕಬ್ಬಿಣದ ಅಂಶ ಹೇರಳವಾಗಿ ಕಂಡುವುದರಿಂದ, ದೇಹದಲ್ಲಿ ಥೈರಾಯ್ಡ್ ಹಾರ್ಮೋ ನಿನ ಅಸಮತೋಲನವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ.

• ಹೀಗಾಗಿ ಪ್ರತಿದಿನ ಖರ್ಜೂರ (ಹಸಿ ಅಥವಾ ಒಣ ಖರ್ಜೂರ) ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಥೈರಾಯ್ಡ್ ಕಾಯಿಲೆಯ ಲಕ್ಷಣಗಳಾದ ದೈಹಿಕ ಆಯಾಸ, ತಲೆಕೂದಲು ಉದುರುವಿಕೆ, ದೇಹದ ತೂಕ ಅತಿಯಾಗಿ ಹೆಚ್ಚಾಗುವುದು, ಕೀಲು ನೋವು, ಮಾನಸಿಕ ಒತ್ತಡ ಇಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ.

ಬ್ರೆಜಿಲ್ ನಟ್ಸ್

• ಈಗಾಗಲೇ ಥೈರಾಯ್ಡ್ ಸಮಸ್ಯೆ ಇರುವವರು ಬ್ರೆಜಿಲ್ ನಟ್ಸ್ಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.

• ಈ ಬಗ್ಗೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಬ್ರೆಜಿಲ್‌‪ ನಟ್ಸ್ನಲ್ಲಿ 68- 91 ಮೈಕ್ರೋಗ್ರಾಂ ಸೆಲೆನಿಯಂ ಅಂಶ ಕಂಡು ಬರುತ್ತದೆ.

• ಹೀಗಾಗಿ ಈ ಸಮಸ್ಯೆ ಇರುವವರು, ಪ್ರತಿದಿನ ಬ್ರೆಜಿಲ್ ನಟ್ಸ್ ಗಳನ್ನು ತಿನ್ನುವ, ಅಭ್ಯಾಸ ಮಾಡಿಕೊಂಡರೆ, ದಿನದ ಅಗತ್ಯಕ್ಕೆ ಬೇಕಾಗಿರುವ ಸೆಲೆನಿಯಂ ಅಂಶ, ನೈಸರ್ಗಿಕ ವಾಗಿ ಪೂರೈಕೆ ಆಗುವುದು.

• ಹೀಗಾಗಿ ಪ್ರತಿ ದಿನ ಬೆಳಗಿನ ಸಂದರ್ಭದಲ್ಲಿ ಎರಡು- ಮೂರು ಒಣಗಿದ ಅಥವಾ ರೋಸ್ಟ್ ಮಾಡಿದ ಬ್ರೆಜಿಲ್ ನಟ್ಸ್ ಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಒಳ್ಳೆಯದು.

• ದೇಹದಲ್ಲಿ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವ ಹಿಸದೇ ಹೋದರೆ, ಕೆಲವೊಂದು ಆರೋಗ್ಯ ಸಮಸ್ಯೆಗಳು ಕಂಡು ಬರುತ್ತದೆ.

• ಉದಾಹರಣೆಗೆ ದೇಹದ ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಪದೇ ಪದೇ ಆಯಾಸ ಕಂಡು ಬರು ವುದು, ಗಂಟಲಿನ ಜಾಗದಲ್ಲಿ ಊತದಂತಹ ಸಮಸ್ಯೆ ಕಂಡು ಬರುವುದು, ತಲೆಕೂದಲು ಉದುರುವಿಕೆ ಹೆಚ್ಚಾ ಗುವುದು, ಮಾಸಿಕ ಖಿನ್ನತೆ, ಸರಿಯಾಗಿ ನಿದ್ದೆ ಬರದೇ ಇರು ವುದು. ಇವೆಲ್ಲಾ ಈ ಥೈರಾಯ್ಡ್ ಕಾಯಿಲೆಯ ಲಕ್ಷಣಗಳು.

• ಒಂದು ವೇಳೆ, ನಿಮಗೂ ಇಂತಹ ಲಕ್ಷಣಗಳು ಕಂಡು ಬಂದರೆ, ವೈದ್ಯರ ಬಳಿ, ಪರೀಕ್ಷೆ ಮಾಡಿಸಿಕೊಳ್ಳಿ. ಸಾಮಾ ನ್ಯವಾಗಿ ಮೇಲಿನ ಲಕ್ಷಣಗಳು ಇದ್ದರೆ, ವೈದ್ಯರ ಸಲಹೆ ಮೇರೆಗೆ ಥೈರಾಯಿಡ್ ಪ್ಯಾನಲ್‪ ಟೆಸ್ಟ್ ಮಾಡಿಸಿಕೊಳ್ಳು ವುದು ಒಳ್ಳೆಯದು.

• ಇದೊಂದು ಸಾಧಾರಣ ರಕ್ತ ಪರೀಕ್ಷೆ ಆಗಿದ್ದು, ಥೈರಾಯ್ಡ್ ರೋಗ – ಲಕ್ಷಣಗಳು ಪ್ರಾರಂಭ ಆಗುವ ಮೊದಲೇ ಸಮಸ್ಯೆಯನ್ನು ಪತ್ತೆ ಹಚ್ಚಬಹುದು.

• ಈಗಾಗಲೇ ಥೈರಾಯ್ಡ್ ಸಮಸ್ಯೆ ಇದ್ದರೆ ಈ ಜೀವನಶೈಲಿ, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವು ದರ ಜೊತೆಗೆ ವೈದ್ಯರು ನೀಡಿರುವ ಔಷಧಿಗಳನ್ನು ಸಮ ಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದರಿಂದ ಈ ಕಾಯಿಲೆ ಯಿಂದ ಪಾರಾಗಬಹುದಾಗಿದೆ.