ಮನೆ ಅಪರಾಧ ಹೆಂಡತಿಯ ಅನೈತಿಕ ಸಂಬಂಧ: ಮನನೊಂದ ಗಂಡ ಆತ್ಮಹತ್ಯೆಗೆ ಶರಣು

ಹೆಂಡತಿಯ ಅನೈತಿಕ ಸಂಬಂಧ: ಮನನೊಂದ ಗಂಡ ಆತ್ಮಹತ್ಯೆಗೆ ಶರಣು

0

ಮೈಸೂರು:  ಹೆಂಡತಿಯ ಅನೈತಿಕ ಸಂಬಂಧಕ್ಕೆ ಮನನೊಂದು, ಗಂಡನೇ ನೇಣಿಗೆ ಶರಣಾದ ಘಟನೆ ಮೈಸೂರು ತಾಲೂಕಿನ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಗ್ರಾಮದ ಶಶಿಧರ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯಾಗಿದ್ದಾನೆ.

ಈತ ಕಳೆದ ಹತ್ತು ವರ್ಷಗಳ ಹಿಂದೆ ಭವ್ಯ ಎಂಬುವವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.  ಹೆಂಡತಿ ಬೇರೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದು, ಈ ಬಗ್ಗೆ ಹಲವರು ಹೆಂಡತಿಗೆ ಬುದ್ಧಿವಾದ ಹೇಳಿದ್ದರು. ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳದ ಹೆಂಡತಿ ಹಾಗೂ ಅಕ್ಕಪಕ್ಕದವರ ಚುಚ್ಚು ಮಾತಿಗೆ ಮನನೊಂದ ಶಶಿಧರ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.

ಈ ಸಂಬಂಧ ವರುಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಈ ಮೂರು ಬಗೆಯ ಡ್ರೈ ಫ್ರೂಟ್ಸ್ ನಲ್ಲಿ ಥೈರಾಯ್ಡ್ ವಾಸಿ ಮಾಡುವ ಶಕ್ತಿ ಇದೆ!
ಮುಂದಿನ ಲೇಖನ‘ಭೈರತಿ’ ಅಖಾಡಕ್ಕೆ ಶಿವಣ್ಣ: ನರ್ತನ್ ಚಿತ್ರಕ್ಕೆ ಇಂದು ಮುಹೂರ್ತ