ಮನೆ ಯೋಗ ಬೆನ್ನು ನೋವು ನಿವಾರಣೆಗೆ ಈ ಯೋಗಾಸನಗಳು ಬೆಸ್ಟ್

ಬೆನ್ನು ನೋವು ನಿವಾರಣೆಗೆ ಈ ಯೋಗಾಸನಗಳು ಬೆಸ್ಟ್

0

ನೀವು ಈ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ಬೆನ್ನು ನೋವು ಕಡಿಮೆ ಮಾಡಿಕೊಳ್ಳಬಹುದು. ​ಬೆಳಿಗ್ಗೆ ಅಥವಾ ರಾತ್ರಿ ಮಲಗುವ ಮೊದಲು ಈ ಯೋಗಾಸನಗಳನ್ನು ಟ್ರೈ ಮಾಡಿ.

ಮಾರ್ಜಾಲ ಗೋ ಆಸನ

  • ಈ ಯೋಗಾಸನವನ್ನು ಅಭ್ಯಾಸ ಮಾಡಿದರೆ ಅದರಿಂದ ಬೆನ್ನುಹುರಿ, ಭುಜ, ಕುತ್ತಿಗೆ ಮತ್ತು ಮುಂಡದ ಭಾಗದಲ್ಲಿನ ಸ್ನಾಯುಗಳನ್ನು ಎಳೆಯುವುದು. ಈ ಆಸನವನ್ನು ಈ ರೀತಿಯಾಗಿ ಮಾಡಿ.
  • ನೆಲದ ಮೇಲೆ ಮೊಣಕಾಲು ಮತ್ತು ಅಂಗೈಯಿಂದ ನಿಂತುಕೊಳ್ಳಿ. ಮಣಿಕಟ್ಟನ್ನು ಭುಜದ ಕೆಳಗೆ ಮತ್ತು ಮೊಣಕಾಲು ಸೊಂಟದ ಕೆಳಗೆ ಇರಲಿ.
  • ತಲೆಯನ್ನು ಎತ್ತುತ್ತಾ ಉಸಿರಾಡಿ ಮತ್ತು ಹೊಟ್ಟೆಯ ಭಾಗವನ್ನು ಕೆಳಗೆ ತನ್ನಿ.
  • ಕೆಳಗೆ ನೋಡುತ್ತಿರುವಂತೆ ಉಸಿರನ್ನು ಬಿಡಿ ಮತ್ತು ಗಲ್ಲವು ಎದೆಯ ಭಾಗದಲ್ಲಿರಲಿ, ಬೆನ್ನುಹುರಿಯನ್ನು ಹಾಗೆ ಬಿಲ್ಲಿನ ಆಕಾರಕ್ಕೆ ತನ್ನಿ.
  • ಇದನ್ನು ನೀವು ಒಂದು ನಿಮಿಷ ಕಾಲ ಮಾಡಿ.

​ಕೆಳಮುಖ ಶ್ವಾನಾಸನ

  • ಅಂಗೈ ಮತ್ತು ಮೊಣಕಾಲಿನಲ್ಲಿ ನಿಲ್ಲಿ.
  • ತಲೆಯನ್ನು ನೆಲದ ಭಾಗಕ್ಕೆ ಒತ್ತುತ್ತಾ, ಮೊಣಕಾಲನ್ನು ಎತ್ತಿ ಮತ್ತು ಕುಳಿತುಕೊಳ್ಳುವ ಮೂಳೆಯನ್ನು ಕೂಡ.
  • ಬೆನ್ನುಹುರಿ ಮತ್ತು ಬಲಮೂಳೆಯು ಎಳೆಯಲ್ಪಡಲಿ.
  • ಕೈಗಳನ್ನು ಸರಿಯಾಗಿ ನೆಲದ ಮೇಲೆ ಊರಿಕೊಳ್ಳಿ ಮತ್ತು ಹಾಗೆ ಹಿಂಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ.
  • ತಲೆಯು ಮೇಲಿನ ತೋಳುಗಳಿಗೆ ಸರಿಯಾಗಿದೆಯಾ ಎಂದು ನೋಡಿಕೊಳ್ಳಿ ಅಥವಾ ಗಲ್ಲವು ಸ್ವಲ್ಪ ಹಿಡಿದಿಟ್ಟುಕೊಳ್ಳಿ.
  • ಒಂದು ನಿಮಿಷ ಕಾಲ ನೀವು ಈ ಭಂಗಿಯಲ್ಲಿ ಇರಬೇಕು.

​ಕೋಬ್ರಾ ಭಂಗಿ

  • ಹೊಟ್ಟೆಯ ಮೇಲೆ ಮಲಗಿ
  • ಭುಜಗಳ ಕೆಳಭಾಗದಲ್ಲಿ ಕೈಗಳನ್ನು ಇಡಿ ಮತ್ತು ಬೆರಳುಗಳು ಮುಂದಕ್ಕೆ ಮತ್ತು ಕೈಗಳು ಎದೆಯ ಭಾಗದಲ್ಲಿ ಬಿಗಿಯಾಗಿ ಇರಲಿ.
  • ಕೈಗಳನ್ನು ಹಾಗೆ ಒತ್ತುತ್ತಾ ಉಸಿರಾಡಿ ಮತ್ತು ನಿಧಾನವಾಗಿ ತಲೆ, ಎದೆ ಮತ್ತು ಭುಜವನ್ನು ಎತ್ತಿ.
  • ಉಸಿರನ್ನು ಬಿಡಿ ಮತ್ತು ನೆಲದ ಮೇಲೆ ಮಲಗಿ.
  • ಕೈಗಳನ್ನು ಹಾಗೆ ದೇಹದ ಬದಿಯಲ್ಲಿ ಇಡಿ ಮತ್ತು ತಲೆಗೆ ಆರಾಮ ನೀಡಿ.
  • ಈಗ ಸೊಂಟವನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ತಿರುಗಿಸಿ.
  • ಇದರಿಂದ ಬೆನ್ನಿನ ಭಾಗದಲ್ಲಿ ಇರುವಂತಹ ಒತ್ತಡವು ಕಡಿಮೆ ಆಗುವುದು.
ಹಿಂದಿನ ಲೇಖನರಾಜ್ಯದಲ್ಲಿ 891 ಮಂದಿಗೆ ಕೋವಿಡ್‌ ಪಾಸಿಟಿವ್‌
ಮುಂದಿನ ಲೇಖನದೇಶಬಿಟ್ಟು ಪರಾರಿಯಾದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ