ಯೋಗ ಮಾಡುವುದು ದೇಹದ ಆರೋಗ್ಯಕ್ಕೆ ಎಂದು ಎಲ್ಲರಿಗೂ ಗೊತ್ತು. ಆದರೆ ಅದರಿಂದ ಲೈಂಗಿಕ ಜೀವನ ಕೂಡ ಅಭಿವೃದ್ಧಿಯಾಗುತ್ತದೆ ಎನ್ನುವ ವಿಚಾರ ಹಲವರಿಗೆ ಗೊತ್ತಿಲ್ಲ. ಹೌದು ಇದು ನಿಜ. ಏಕೆಂದರೆ ಇದು ಸಹ ಒಂದು ರೀತಿಯ ವ್ಯಾಯಾಮದಂತೆ!
ದೈಹಿಕವಾಗಿ ಕಸರತ್ತು ಮಾಡಿದರೆ, ದೇಹಕ್ಕೆ ಬಲ ಬರುತ್ತದೆ. ಮಾಂಸಖಂಡಗಳು ಬೆಳೆಯುತ್ತವೆ. ಇದರಿಂದ ಲೈಂಗಿಕವಾಗಿ ಕೂಡ ಹೆಚ್ಚು ಹೊತ್ತು ಸಕ್ರಿಯವಾಗಿರಲು ಅನುಕೂಲವಾಗುತ್ತದೆ.
ಬ್ರಹ್ಮಚರ್ಯಸನ
ಯೋಗ ಚಾಪೆಯ ಮೇಲೆ ಮೊದಲು ಮಂಡಿಯೂರಿ ಕುಳಿತುಕೊಳ್ಳಿ. ಹೇಗೆಂದರೆ ನಿಮ್ಮ ಎರಡು ಮಂಡಿಗಳು ಒಂದುಕ್ಕೊಂದು ತಾಗುತ್ತಿರಬೇಕು ಆದರೆ ಕಾಲುಗಳು ಮಾತ್ರ ಸ್ವಲ್ಪ ದೂರ ಇರಬೇಕು. ನಿಮಗೆ ಎರಡು ಕಾಲುಗಳ ನಡುವೆ ಇರುವ ಜಾಗದಲ್ಲಿ ನೆಲದ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿ.
ನಿಮ್ಮ ಮಂಡಿಗಳ ಮೇಲೆ ನಿಮ್ಮ ಎರಡು ಕೈಗಳನ್ನು ಇಟ್ಟುಕೊಳ್ಳಿ. ನಿಧಾನವಾಗಿ ಉಸಿರಾಡಿ. ಇದೇ ರೀತಿ ಸ್ವಲ್ಪ ನಿಮಿಷಗಳು ಇದ್ದು, ಆನಂತರ ಸಹಜ ಸ್ಥಿತಿಗೆ ಮರಳಿ ಬನ್ನಿ.
ಗೋಮುಖಾಸನ
ಮೊದಲಿಗೆ ಮಂಡಿಗಳನ್ನು ಮಡಸಿ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ. ನಿಮ್ಮ ದೇಹವನ್ನು ನೇರ ವಾಗಿ ಇರಿಸಿಕೊಂಡು ಹೆಬ್ಬೆರಳುಗಳು ನೆಲದ ಕಡೆಗೆ ಇರುವಂತೆ ನೋಡಿಕೊಳ್ಳಿ. ನಿಮ್ಮ ಬಲಗೈ ಮಡಚಿ ಹಿಂಬದಿಗೆ ಹಿಡಿದುಕೊಳ್ಳಿ.
ನಿಮ್ಮ ಬೆರಳುಗಳು ಮೇಲ್ಭಾಗಕ್ಕೆ ಇರಲಿ, ನಿಮ್ಮ ಬೆನ್ನು ಹುರಿಗೆ ತಾಗುವಂತೆ ಹಿಡಿದುಕೊಳ್ಳಿ. ಈಗ ನಿಮ್ಮ ಎಡಗೈ ತೆಗೆದುಕೊಂಡು ನಿಮ್ಮ ತಲೆಯ ಮೇಲೆ ಇಟ್ಟುಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಬಲಗೈಯನ್ನು ಎಡಗೈಗೆ ಸೇರಿಸಲು ಮುಂದಾಗಿ. ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.
ಭುಜಂಗಾಸನ
ಮೊದಲು ನೆಲದ ಮೇಲೆ ನಿಮ್ಮ ಹೊಟ್ಟೆಯನ್ನು ಇರಿಸಿ. ನಿಮ್ಮ ಹಣೆಯ ಭಾಗವನ್ನು ನೆಲದ ಮೇಲೆ ಇರಿಸಿ. ನಿಮ್ಮ ಪಾದಗಳು ಮತ್ತು ಹಿಮ್ಮಡಿಗಳನ್ನು ಒಟ್ಟಿಗೆ ಇರಿಸಿಕೊಳ್ಳಿ. ನಿಮ್ಮ ಕೈಗಳನ್ನು ಭುಜದ ಬಳಿ ತಂದು ಇಟ್ಟುಕೊಳ್ಳಿ. ಈಗ ನಿಧಾನವಾಗಿ ಉಸಿರನ್ನು ಹೊರ ಬಿಟ್ಟು ನಿಮ್ಮ ದೇಹವನ್ನು ಮೇಲ್ಭಾ ಗಕ್ಕೆ ಎತ್ತಿ.
ಮೊದಲು ನಿಮ್ಮ ತಲೆ, ಎದೆ, ನಿಮ್ಮ ಬೆನ್ನು ಮತ್ತು ನಿಮ್ಮ ಸೊಂಟದ ಭಾಗವನ್ನು ಎತ್ತಿ. ಈಗ ನಿಮ್ಮ ಕೈಗಳನ್ನು ನೇರವಾಗಿ ಇರಿಸಿಕೊಂಡು ಸ್ವಲ್ಪ ಹೊತ್ತು ಇದ್ದು ನಂತರ ಸಹಜ ಸ್ಥಿತಿಗೆ ಮರಳಿ ಬನ್ನಿ.