ಮನೆ ರಾಷ್ಟ್ರೀಯ ಕಾರಿನಲ್ಲಿ ಬಂದು ವಾಕ್ ಹೋಗುತ್ತಿದ್ದ ಮಹಿಳೆ ಸರ ಕದ್ದ ಕಳ್ಳರು

ಕಾರಿನಲ್ಲಿ ಬಂದು ವಾಕ್ ಹೋಗುತ್ತಿದ್ದ ಮಹಿಳೆ ಸರ ಕದ್ದ ಕಳ್ಳರು

0

ಚೆನ್ನೈ: ಕಾರಿನಲ್ಲಿ ಬಂದ ಸರಕಳ್ಳರು ಮಾರ್ನಿಂಗ್​ ವಾಕ್​’ಗೆ ಹೋಗುತ್ತಿದ್ದ ಮಹಿಳೆಯ ಸರ ಕದ್ದು ಪರಾರಿಯಾಗಿರುವ ಘಟನೆ ಕೊಯಮತ್ತೂರಿನ ಪೀಲಮೇಡು ಪ್ರದೇಶದ ಜಿವಿ ರೆಸಿಡೆನ್ಸಿ ಬಳಿ ನಡೆದಿದೆ.

Join Our Whatsapp Group

ಮಹಿಳೆ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಬಿಳಿ ಬಣ್ಣದ ಕಾರು ಸಮೀಪಕ್ಕೆ ಬಂದು, ಮುಂಬಾಗಿಲಿಗೆ ಒರಗಿದ ವ್ಯಕ್ತಿ ಆಕೆಯ ಸರ ಕಿತ್ತುಕೊಳ್ಳಲು ಯತ್ನಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದ್ದಕ್ಕಿದ್ದಂತೆ ಕಳ್ಳತನದ ಅರಿವಾದ ಮಹಿಳೆ ತಡೆಯಲು ಪ್ರಯತ್ನಿಸಿದಳು, ಆದರೆ ಕಾರಿನಲ್ಲಿದ್ದ ವ್ಯಕ್ತಿ ಅವಳನ್ನು ಸ್ವಲ್ಪ ದೂರದವರೆಗೆ ಕಾರಿನೊಂದಿಗೆ ಎಳೆದೊಯ್ದು ಸರ ಕಿತ್ತುಕೊಂಡು ಅವರನ್ನು ತಳ್ಳಿದ್ದಾನೆ.

ಕೌಶಲ್ಯ ಎಂಬ ಮಹಿಳೆ ಸಿಂಗಾನಲ್ಲೂರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ವಾಹನದಲ್ಲಿ ನಂಬರ್ ಪ್ಲೇಟ್ ಇಲ್ಲದಿದ್ದರಿಂದ ಕಳ್ಳರನ್ನು ಹಿಡಿಯುವುದು ಕಷ್ಟ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಲೇಖನSRH vs GT: ಪಂದ್ಯ ಗೆದ್ದು ಪ್ಲೇ ಆಫ್ ತಲುಪಿದ ಗುಜರಾತ್ ಟೈಟನ್ಸ್
ಮುಂದಿನ ಲೇಖನಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ