ಮನೆ ರಾಜಕೀಯ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ

ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ

0

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ 43 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಇಂದು (ಶನಿವಾರ)  ಪ್ರಕಟಿಸಿದೆ.

Join Our Whatsapp Group

ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎನ್ನಲಾದ ಕೋಲಾರ ಕ್ಷೇತ್ರದಿಂದ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ.

ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅರಸಿಕೆರೆಯಿಂದ ಶಿವಲಿಂಗೇಗೌಡ ಅವರು ಕಣಕ್ಕಿಳಿಯಲಿದ್ದಾರೆ.

ತೇರದಾಳ ಕ್ಷೇತ್ರದಿಂದ ಮಾಜಿ ಸಚಿವೆ, ನಟಿ ಉಮಾಶ್ರೀ ಅವರು ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿದ್ದು, ಸಿದ್ದಪ್ಪ ರಾಮಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

ಹಾಸನದಿಂದ ಬನವಾಸಿ ರಂಗಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದಿಂದ ಆರ್.ವಿ.ದೇವರಾಜ್ ಗೆ ಟಿಕೆಟ್ ನೀಡಲಾಗಿದೆ.  ಚಿಕ್ಕಪೇಟೆ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್ ಗಂಗಾಂಬಿಕೆ ಅವರಿಗೆ ನಿರಾಸೆಯಾಗಿದೆ. ಅವರು ಈಗಾಗಲೇ ನಾಮಪತ್ರವನ್ನೂ ಸಲ್ಲಿಸಿದ್ದಾರೆ.

224 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈವರೆಗೆ 209 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇನ್ನು 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿದಿದೆ. ಇತ್ತ ಬಿಜೆಪಿ 212 ಹಾಗೂ ಜೆಡಿಎಸ್ 143 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಮೂರನೇ ಪಟ್ಟಿ ಇಂತಿದೆ

ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ

ಕೋಲಾರ ಕ್ಷೇತ್ರ-ಕೊತ್ತೂರು ಮಂಜುನಾಥ

ಚಿಕ್ಕಪೇಟೆ ಕ್ಷೇತ್ರ-ಆರ್.ವಿ.ದೇವರಾಜ್​

 ಅರಸೀಕೆರೆ ಕ್ಷೇತ್ರ-ಕೆ.ಎಂ.ಶಿವಲಿಂಗೇಗೌಡ

 ಬೊಮ್ಮನಹಳ್ಳಿ ಕ್ಷೇತ್ರ-ಉಮಾಪತಿ ಶ್ರೀನಿವಾಸಗೌಡ

ಕುಂದಗೋಳ ಕ್ಷೇತ್ರ-ಕುಸುಮಾ ಶಿವಳ್ಳಿ

ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​

ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​

 ಬೆಳಗಾವಿ ದಕ್ಷಿಣ ಕ್ಷೇತ್ರ-ಪ್ರಭಾವತಿ ಮಾಸ್ತಿ ಮರಡಿ

ತೇರದಾಳ ಕ್ಷೇತ್ರ-ಸಿದ್ದಪ್ಪ ರಾಮಪ್ಪ ಕೊಣ್ಣೂರು

ದೇವರಹಿಪ್ಪರಗಿ-ಶರಣಪ್ಪ ಟಿ.ಸುಣಗಾರ

ಮೂಡಿಗೆರೆ ಕ್ಷೇತ್ರ-ನಯನಾ ಜ್ಯೋತಿ ಜವಾರ್(ಮೋಟಮ್ಮ ಪುತ್ರಿ)

ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ

ಕಲಬುರಗಿ ಗ್ರಾಮಾಂತರ ಕ್ಷೇತ್ರ-ರೇವೂನಾಯ್ಕ್​ ಬೆಳಮಗಿ

ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್​

 ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ

ದೇವದುರ್ಗ ಕ್ಷೇತ್ರ-ಶ್ರೀದೇವಿ ಆರ್.ನಾಯಕ

 ಸಿಂಧನೂರು ಕ್ಷೇತ್ರ-ಹಂಪನಗೌಡ ಬಾದರ್ಲಿ

ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ

ನವಲಗುಂದ ಕ್ಷೇತ್ರ-ಎನ್.ಹೆಚ್.ಕೋನರೆಡ್ಡಿ

 ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ

ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​

ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ

 ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ

ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್​

 ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ-ಡಾ.ಶ್ರೀನಿವಾಸ ಕರಿಯಣ್ಣ

 ಶಿವಮೊಗ್ಗ ನಗರ ಕ್ಷೇತ್ರ-ಹೆಚ್.ಸಿ.ಯೋಗೇಶ್​

ಶಿಕಾರಿಪುರ ಕ್ಷೇತ್ರ-ಜಿ.ಬಿ.ಮಾಲ್ತೇಶ್​

 ಕಾರ್ಕಳ ಕ್ಷೇತ್ರ-ಉದಯ್ ಶೆಟ್ಟಿ

 ತರೀಕೆರೆ ಕ್ಷೇತ್ರ-ಜಿ.ಹೆಚ್.ಶ್ರೀನಿವಾಸ

 ತುಮಕೂರು ಗ್ರಾಮಾಂತರ ಕ್ಷೇತ್ರ-ಜಿ.ಹೆಚ್.ಷಣ್ಮುಖಪ್ಪ ಯಾದವ್​

 ಚಿಕ್ಕಬಳ್ಳಾಪುರ ಕ್ಷೇತ್ರ-ಪ್ರದೀಪ್ ಈಶ್ವರ್ ಅಯ್ಯರ್​

 ದಾಸರಹಳ್ಳಿ ಕ್ಷೇತ್ರ-ಧನಂಜಯ ಗಂಗಾಧರಯ್ಯ

 ಬೆಂಗಳೂರು ದಕ್ಷಿಣ ಕ್ಷೇತ್ರ-ಆರ್.ಕೆ.ರಮೇಶ್​

 ಚನ್ನಪಟ್ಟಣ ಕ್ಷೇತ್ರ-ಎಸ್.ಗಂಗಾಧರ್​

ಮದ್ದೂರು ಕ್ಷೇತ್ರ-ಕೆ.ಎಂ.ಉದಯ್​

 ಹಾಸನ ಕ್ಷೇತ್ರ-ಬನವಾಸಿ ರಂಗಸ್ವಾಮಿ

 ಮಂಗಳೂರು ನಗರ ದಕ್ಷಿಣ ಕ್ಷೇತ್ರ-ಜಾನ್​ ರಿಚರ್ಡ್ ಲೋಬೋ

 ಪುತ್ತೂರು ಕ್ಷೇತ್ರ-ಅಶೋಕ್ ಕುಮಾರ್ ರೈ

 ಮೈಸೂರಿನ ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್​

 ಮೈಸೂರಿನ ಚಾಮರಾಜ ಕ್ಷೇತ್ರ-ಕೆ.ಹರೀಶ್ ಗೌಡ

ಹಿಂದಿನ ಲೇಖನದೇಶದಲ್ಲಿ 10,753 ನೂತನ ಕೋವಿಡ್ ಪ್ರಕರಣ ಪತ್ತೆ
ಮುಂದಿನ ಲೇಖನಐವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ