ಮನೆ ಕಾನೂನು ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರ

ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರ

0

ಹೊಸದಿಲ್ಲಿ(New delhi): ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಶುಕ್ರವಾರ ನಿವೃತ್ತರಾಗುತ್ತಿದ್ದು, ಅವರ ಕರ್ತವ್ಯದ ಕೊನೆಯ ದಿನದ ಕಲಾಪವು  ಇದೇ ಮೊದಲ ಬಾರಿಗೆ ನೇರ ಪ್ರಸಾರ ವಾಗಲಿದೆ.

ದೇಶದೆಲ್ಲೆಡೆ ಜನರು ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.

ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ವಿಧ್ಯುಕ್ತ ಪೀಠದ ಕಲಾಪಗಳನ್ನು ಆಗಸ್ಟ್ 26ರ ಬೆಳಿಗ್ಗೆ 10.30ರಿಂದ ಎನ್‌ಐಸಿ ವೆಬ್‌ಕಾಸ್ಟ್ ಪೋರ್ಟಲ್‌ನಲ್ಲಿ ನೇರ ಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಆಸಕ್ತರು ಸುಪ್ರೀಂಕೋರ್ಟ್ ಆಫ್ ಇಂಡಿಯಾದ ವೆಬ್‌ಸೈಟ್‌ನಿಂದ ವೆಬ್‌ ಕಾಸ್ಟ್ ಪೋರ್ಟಲ್‌ನ ಲಿಂಕ್ ಅನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್‌ನ ಕಂಪ್ಯೂಟರ್ ಘಟಕದ ಶಾಖಾಧಿಕಾರಿ ಪ್ರಕಟಣೆ ತಿಳಿಸಿದೆ.

ಎನ್‌ವಿ ರಮಣ ಅವರು 2021ರ ಏಪ್ರಿಲ್ 24ರಂದು ಸುಪ್ರೀಂಕೋರ್ಟ್‌ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರಿ ಸ್ವೀಕರಿಸಿದ್ದರು. ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ಅವರು ಅನೇಕ ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ್ದಾರೆ.

ರಮಣ ಅವರ ಸ್ಥಾನಕ್ಕೆ ಉದಯ್ ಲಲಿತ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.