ಮನೆ ಸುದ್ದಿ ಜಾಲ ಮುಸ್ಲಿಂರ ಸಹಭಾಗಿತ್ವದಲ್ಲೇ ಈ ಬಾರಿಯೂ ಬೆಂಗಳೂರಿನ ಕರಗ ಉತ್ಸವ

ಮುಸ್ಲಿಂರ ಸಹಭಾಗಿತ್ವದಲ್ಲೇ ಈ ಬಾರಿಯೂ ಬೆಂಗಳೂರಿನ ಕರಗ ಉತ್ಸವ

0

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್, ಅಜಾನ್ ಹೀಗೆ ಹಿಂದೂ-ಮುಸ್ಲಿಂರ ನಡುವೆ ವಿವಾದಗಳು ಸೃಷ್ಟಿಯಾಗುತ್ತಲೇ ಇದ್ದು, ಈ ನಡುವೆ ಬೆಂಗಳೂರಿನ ಕರಗ ಉತ್ಸವಕ್ಕೂ ಇದರ ಗಾಳಿ ಬೀಸಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಮೆರವಣಿಗೆ ಸಿದ್ಧತೆಗಳು ಶುರುವಾಗಿವೆಕರಗ ಉತ್ಸವ ತಾಯಿಯ ಮೆರವಣಿಗೆ ವೇಳೆ ಪ್ರತಿ ವರ್ಷವೂ ತಾಯಿಯನ್ನು ದರ್ಗಾಗೆ ಕರೆದುಕೊಂಡು ಹೋಗಲಾಗುತ್ತೆ.

ಈ  ಮಧ್ಯೆ ಕರಗ ಉತ್ಸವದ ವೇಳೆ ದರ್ಗಾಗೆ ಕರಗ ಪ್ರವೇಶಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆದರೆ ಈ ವಿರೋಧಕ್ಕೆ ಡೋಂಟ್ ಕೇರ್ ಎಂದಿರುವ ಕರಗ ಉತ್ಸವ ಸಮಿತಿ ಈ ಬಾರಿಯೂ ಮುಸ್ಲಿಂರ ಸಹಭಾಗಿತ್ವದಲ್ಲೇ ಕರಗ ಉತ್ಸವ ನಡೆಸಲು ತೀರ್ಮಾನಿಸಿದೆ.

ಕರಗ ಉತ್ಸವ ಮೊದಲಿನಿಂದಲೂ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಹೀಗಾಗಿ ಅಪಸ್ವರ ಕೇಳುವ ಮುನ್ನವೇ ಮುಸ್ಲಿಂ ಧರ್ಮಗುರುಗಳು ಎಚ್ಚೆತ್ತುಕೊಂಡಿದ್ದು, ಕರಗ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕರಗ ಉತ್ಸವ ಸಮಿತಿ ಭೇಟಿ ಮಾಡಿದ ಮುಸ್ಲಿಂ ಮುಖಂಡರು ಒಟ್ಟಿಗೆ ಸೇರಿ ಕರಗ ಆಚರಿಸೋಣ ಎಂದಿದ್ದಾರೆ. ಕರಗ ಹೊರುವ ಜ್ಞಾನೇಂದ್ರಗೆ ಮುಸ್ಲಿಂ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಕರಗ ಉತ್ಸವ ಸಮಿತಿ ಅಧ್ಯಕ್ಷ ಸತೀಶ್, ಪ್ರತಿ ವರ್ಷದಂತೆ ಈ ಬಾರಿಯೂ ಕರಗ ಉತ್ಸವ ಮೆರವಣಿಗೆ ನಡೆಯಲಿದೆ. ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಉತ್ಸವ ಭೇಟಿ ನೀಡಲಿದೆ. ನೂರಾರು ವರ್ಷಗಳ ಇತಿಹಾಸದಂತೆ ಆಚರಣೆ ನಡೆಯಲಿದೆ. ಕರಗ ಧರ್ಮರಾಯಸ್ವಾಮಿ  ದೇಗುಲದಿಂದ ಹೊರಟು ದರ್ಗಾ ಪ್ರವೇಶಿಸಲಿದೆ ಎಂದಿದ್ದಾರೆ.