ಬೆಂಗಳೂರು (Bengaluru)- ಥಾಮಸ್ ಕಪ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿ ಜಯಗಳಿಸಿದ ಕನ್ನಡಿಗ ಲಕ್ಷ್ಯ ಸೇನ್ ಅವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ. ಮೊತ್ತದ ಬಹುಮಾನದ ಚೆಕ್ ನೀಡಿ ಗೌರವಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬ್ಯಾಂಕಾಕ್ ನಲ್ಲಿ ನಡೆದ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿದ ಭಾರತ ತಂಡದ ಸದಸ್ಯ ಹಾಗೂ ಬೆಂಗಳೂರಿನಲ್ಲಿದ್ದುಕೊಂಡು ತರಬೇತಿ ಪಡೆದಿರುವ ಲಕ್ಷ್ಯ ಸೇನ್ ಅವರಿಗೆ ೫ ಲಕ್ಷ ರೂಪಾಯಿ ಮೊತ್ತದ ಬಹುಮಾನದ ಚೆಕ್ ನ್ನು ವಿತರಿಸಿದರು.
ಥಾಮಸ್ ಕಪ್ ಮುಡಿಗೇರಿಸಿಕೊಂಡ ಭಾರತದ ತಂಡದಲ್ಲಿ ಬೆಂಗಳೂರಿನ ದ್ರಾವಿಡ್ ಪಡುಕೋಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ಸೇನ್ ಕೂಡ ಒಬ್ಬರಾಗಿದ್ದರು. ಮೊದಲ ಸುತ್ತಿನಲ್ಲಿ ಲಕ್ಷ್ಯ ಸೇನ್ ಅವರು ಮೊದಲ ಸಿಂಗಲ್ಸ್‌ನಲ್ಲಿ ಆ್ಯಂಟನಿ ಜಿಂಟಿಂಗ್ ವಿರುದ್ಧ 8-21, 21-17,21-16 ಅಂಕಗಳೊಂದಿಗೆ ಗೆಲುವು ದಾಖಲಿಸಿದ್ದರು.
ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಡಾ. ನಾರಾಯಣಗೌಡ, ಲಕ್ಷ್ಯ ಸೇನ್ ಅವರ ತರಬೇತುದಾರ ವಿಮಲ್ ಕುಮಾರ ಹಾಗೂ ತಂದೆ ಬೀರೇನ್ ಕುಮಾರ ಸೇನ್, ತಾಯಿ ನಿರ್ಮಲಾ ಸೇನ್ ಅವರನ್ನು ಸನ್ಮಾನಿಸಿದರು.