ಮನೆ ಕಾನೂನು ಲೈಂಗಿಕ ಸುಖಕ್ಕಾಗಿ ವೇಶ್ಯಾವಾಟಿಕೆ ಗೃಹಕ್ಕೆ ಹೋಗುವವರು ಅಪರಾಧಿಗಳಲ್ಲ: ಕೋಲ್ಕತ್ತಾ ಹೈಕೋರ್ಟ್

ಲೈಂಗಿಕ ಸುಖಕ್ಕಾಗಿ ವೇಶ್ಯಾವಾಟಿಕೆ ಗೃಹಕ್ಕೆ ಹೋಗುವವರು ಅಪರಾಧಿಗಳಲ್ಲ: ಕೋಲ್ಕತ್ತಾ ಹೈಕೋರ್ಟ್

0

ಕೋಲ್ಕತ್ತಾ(kolkatha): ಲೈಂಗಿಕ ಸುಖಕ್ಕಾಗಿ ವೇಶ್ಯಾವಾಟಿಕೆ ಗೃಹಕ್ಕೆ ಭೇಟಿ ನೀಡುವ ಗ್ರಾಹಕರನ್ನು ಅನೈತಿಕ ಸಂಚಾರ ಎಂದು ಅನೈತಿಕ ಸಂಚಾರ ಕಾಯ್ದೆ ಅಡಿಯಲ್ಲಿ ಅಪರಾಧಿಗಳನ್ನಾಗಿ ಹೊಣೆ ಮಾಡಲಾಗುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

ಇತ್ತೀಚೆಗೆ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜೋಯ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ಗ್ರಾಹಕರಾಗಿ ಲೈಂಗಿಕ ಕಾರ್ಯಕರ್ತೆಯರ ಮನೆಗೆ ಭೇಟಿ ನೀಡುವುದು ಲೈಂಗಿಕ ಸುಖಕ್ಕಾಗಿಯೇ ಅಲ್ಲ. ಯಾವುದೋ ಸಂದರ್ಭದಲ್ಲಿ ಅವರು ಭೇಟಿ ನೀಡಿರುತ್ತಾರೆ ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖಿಸಿದೆ.

2019ರ ಜನವರಿ 4 ರಂದು ಪೊಲೀಸ್ ದಾಳಿ ವೇಳೆ ಬಂಧಿಸಲ್ಪಟ್ಟ ಎನ್‌ಆರ್‌ಐ ಉದ್ಯಮಿ ಸುರೇಶ್ ಬಾಬು ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ.

ಬಾಬು ಅವರನ್ನು ಸ್ಥಳೀಯ ಮಸಾಜ್ ಸೆಂಟರ್‌ನಿಂದ 8 ಮಹಿಳೆಯರು ಮತ್ತು ಒಬ್ಬ ಪುರುಷನೊಂದಿಗೆ ಬಂಧಿಸಿ ಕರೆದೊಯ್ಯಲಾಯಿತು. ಅವರಲ್ಲಿ ಲೈಂಗಿಕ ಕಾರ್ಯಕರ್ತೆಯರು ಹಾಗೂ ಪಿಂಪ್ ಸಹ ಇದ್ದನು. ಮತ್ತೊಬ್ಬ ಮಸಾಜ್ ಸೆಂಟರ್ ನಡೆಸುವ ನೆಪದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದನು. ಅವರೆಲ್ಲರನ್ನು ಪೊಲೀಸರು ಬಂಧಿಸಿ ಪಿಐಟಿಎ ಅಡಿಯಲ್ಲಿ ಕೇಸ್ ದಾಖಲಿಸಿದ್ದರು.

ಪಿಐಟಿಎ ಅಡಿಯಲ್ಲಿನ ನಿಬಂಧನೆಗಳು ವಾಣಿಜ್ಯ ಉದ್ದೇಶಕ್ಕಾಗಿ ವ್ಯಕ್ತಿಯ ಲೈಂಗಿಕ ಶೋಷಣೆ ಅಥವಾ ನಿಂದನೆಯನ್ನು ಶಿಕ್ಷಿಸುತ್ತವೆ. ಆದರೆ ಅರ್ಜಿದಾರರ ವಿರುದ್ಧ ಅದು ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಆದ್ದರಿಂದ ನ್ಯಾಯಾಲಯವು ಅರ್ಜಿದಾರರ ವಿರುದ್ಧ ಪ್ರಾರಂಭಿಸಲಾದ ಆರೋಪಪಟ್ಟಿ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.