ಮನೆ ಆರೋಗ್ಯ ಸಂಧಿವಾತ ಸಮಸ್ಯೆ ಇದ್ದವರು ದಿನಕ್ಕೊಂದು ಬಾಳೆಹಣ್ಣು ತಿನ್ನಿ!

ಸಂಧಿವಾತ ಸಮಸ್ಯೆ ಇದ್ದವರು ದಿನಕ್ಕೊಂದು ಬಾಳೆಹಣ್ಣು ತಿನ್ನಿ!

0

ಚಳಿಗಾಲ ಆಗಮಿಸುತ್ತಿದ್ದಂತೆಯೇ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗಿ ಕಂಡು ಬರಲು ಶುರುವಾಗುತ್ತದೆ. ತಂಪಾದ ವಾತಾವರಣದ ಕಾರಣದಿಂದಾಗಿ ಕೆಲವರಿಗೆ ಶೀತ, ಜ್ವರ, ಕೆಮ್ಮಿನ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಇನ್ನೂ ಕೆಲವರಿಗೆ, ಮೂಳೆಸಂಧುಗಳಲ್ಲಿ ನೋವು ಎದುರಾಗುವುದು. ಇದರಿಂದಾಗಿ ಕಾಲುಗಳನ್ನು ಸರಿಯಾಗಿ ಮಡಚಲು ಆಗದೇ, ಸಮಸ್ಯೆಯನ್ನು ಎದುರಿಸುತ್ತಾರೆ.

ಇನ್ನು ಸಂಧಿವಾತ ಇರುವ ವ್ಯಕ್ತಿಗಳಿಗಂತೂ ಚಳಿಗಾಲ ಅತಿ ಹೆಚ್ಚು ಬಾಧೆ ನೀಡುತ್ತದೆ.ಅದರಲ್ಲೂ ಚಳಿ ಹೆಚ್ಚಿದಷ್ಟೂ ಇಂತಹ ನೋವೂ ಇನ್ನಷ್ಟು ಸಮಸ್ಯೆ ನೀಡುತ್ತದೆ! ಬನ್ನಿ ಇಂದಿನ ಲೇಖನ ದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಬಾಳೆಹಣ್ಣಿನ ಸೇವನೆ ಮಾಡುವುದರಿಂದ ಸಂಧಿವಾತಕ್ಕೆ ಕಾರಣವಾಗುವ ಮೂಳೆಗಳ ಸಮಸ್ಯೆ ಹೇಗೆ ನಿವಾರಣೆಯಾಗುತ್ತದೆ ಎನ್ನುವುದನ್ನು ನೋಡೋಣ…

ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುವ ಯೂರಿಕ್ ಆಮ್ಲದ ಪ್ರಮಾಣ ರಕ್ತದಲ್ಲಿ ಹೆಚ್ಚಾಗಿ ಕೀಲುಗಳ ಭಾಗದಲ್ಲಿ ಕಲ್ಲುಗಳ ರೀತಿ ಶೇಖರಣೆಯಾಗುತ್ತಾ ಹೋಗುತ್ತದೆ.

• ಕೊನೆಗೆ ಇದೇ ಕಾರಣದಿಂದಾಗಿ ಕೀಲುಗಳಲ್ಲಿ ಊತ ಹಾಗೂ ನೋವಿನ ಸಮಸ್ಯೆಗಳು ಕಂಡು ಬರುತ್ತದೆ. ಹೆಚ್ಚಾಗಿ ಕಾಲಿನ ಮಂಡಿಗಳಲ್ಲಿ, ಮೊಣಕೈ, ಕಾಲಿನ ಹೆಬ್ಬೆರಳಲ್ಲಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ.

ಈ ಸಮಸ್ಯೆ ಇದ್ದವರು ದಿನಕ್ಕೊಂದು ಬಾಳೆಹಣ್ಣು ತಿನ್ನಬೇಕು!

• ವರ್ಷಪೂರ್ತಿ ಸಿಗುವ ಹಣ್ಣು ಎಂದರೆ ಅದು ಬಾಳೆಹಣ್ಣು! ಈ ಹಣ್ಣಿನಲ್ಲಿ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ.

• ಪ್ರಮುಖವಾಗಿ ಈ ಹಣ್ಣಿನಲ್ಲಿ ವಿಟಮಿನ್ ಎ, ಪೋಸ್ಪರಸ್, ಕಾರ್ಬೋ ಹೈಡ್ರೇಟ್ಸ್ ಕಬ್ಬಿನಾಂಶವು ಸೇಬು ಹಣ್ಣುಗಳಿಗಿಂತಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಎಂದರೆ ನೀವೇ ಲೆಕ್ಕ ಹಾಕಿ! ಇದೇ ಕಾರಣಕ್ಕೆ ಇದನ್ನು ಒಂದು ಅದ್ಭುತ ಹಾಗೂ ಆರೋಗ್ಯಕಾರಿ ಹಣ್ಣು ಎಂದು ಪರಿಗಣಿಸಲಾಗುತ್ತದೆ.

ಬಾಳೆಹಣ್ಣುಗಳಲ್ಲಿ ಕಂಡುಬರುವ ಪೊಟ್ಯಾಶಿಯಂ ಅಂಶ

• ನಿಮಗೆ ಗೊತ್ತಿರಲ್ಲಿ, ಕೆಲವೊಮ್ಮೆ ದೇಹದಲ್ಲಿ ಪೊಟ್ಯಾಶಿಯಂ ಅಂಶ ಕೊರತೆ ಎದುರಾದರೆ ಸ್ನಾಯುಗಳ ನೋವು ಮತ್ತು ಮೂಳೆ ಸಂಧುಗಳ ನೋವು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ.

• ಹೀಗಾಗಿ, ದೇಹದಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಬೇಕೆಂದರೆ, ಪ್ರತಿದಿನ ಬಾಳೆಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಳ್ಳಬೇಕು. ಅಂದರೆ ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟವಾದ ಬಳಿಕ ಕನಿಷ್ಠ ಒಂದು ಬಾಳೆಹಣ್ಣಾದರೂ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಬಾಳೆ ಹಣ್ಣಿನ ವಿಟಮಿನ್ಸ್

• ಬಾಳೆಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ b6,ವಿಟಮಿನ್ ಸಿ, ಅಧಿಕ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಕ್ಯಾಲ್ಸಿಯಂ, ಫೋಲಿಕ್ ಆಮ್ಲ, ಫಾಸ್ಪರಸ್ ಅಂಶಗಳು ಕೂಡ, ಯಥೇಚ್ಛವಾಗಿ ಈ ಹಣ್ಣಿನಲ್ಲಿ ಸಿಗುವುದರಿಂದ ಮೂಳೆಗಳ ಉರಿಯೂತಕ್ಕೆ ಕಾರಣವಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ.

• ಅಲ್ಲದೆ ಮೂಳೆಗಳ ಆರೋಗ್ಯಕ್ಕೆ ಬೇಕಾಗುವವಿಟಮಿನ್ಸ್ ಅಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.

ಬಾಳೆಹಣ್ಣಿನಲ್ಲಿ ಇರುವ ಪೋಷಕಾಂಶ ಮೌಲ್ಯಗಳು

• ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 12% ಪೊಟ್ಯಾಶಿಯಂ ಅಂಶ ಕಂಡು ಬರುತ್ತದೆ. ಇನ್ನು ಬರೋಬ್ಬರಿ 22% ನಷ್ಟು ವಿಟಮಿನ್ ಬಿ6 ಹಾಗೂ 17% ದಷ್ಟು ವಿಟಮಿನ್ ಸಿ ಅಂಶ ಕಂಡು ಬರುತ್ತದೆ.

• ಇನ್ನು ಇತರೆ ಪೌಷ್ಟಿಕ ಸತ್ವಗಳು ನೋಡುವುದಾದರೆ, 1.2 ಗ್ರಾಂ ಪ್ರೋಟೀನ್, 0.3 ಗ್ರಾಂ ಕೊಬ್ಬಿನಾಂಶ, 27.2 ಗ್ರಾಂ ಕಾರ್ಬೋ ಹೈಡ್ರೇಟ್ಸ್, 17 ಮಿ.ಗ್ರಾಂ ಕ್ಯಾಲ್ಸಿಯಂ, 36 ಮಿ.ಗ್ರಾಂ. ಕಬ್ಬಿನಾಂಶ ಒಂದು ಬಾಳೆಹಣ್ಣಿನಲ್ಲಿ ಕಂಡು ಬರುತ್ತದೆ ಎಂದು ಅಚ್ಚರಿ ಯಾಗುತ್ತದೆ ಅಲ್ಲವೇ? ಹಾಗಾದ್ರೆ ಇನ್ನೇಕೆ ತಡ ಪ್ರತಿದಿನ ಒಂದೊಂದು ಬಾಳೆ ಹಣ್ಣನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ಹಿಂದಿನ ಲೇಖನಫೆ.10 ರಂದು ವಿಧಾನಮಂಡಲದ ಬಜೆಟ್ ಅಧಿವೇಶನ
ಮುಂದಿನ ಲೇಖನಆರೋಪಪಟ್ಟಿ ಸಾರ್ವಜನಿಕ ದಾಖಲೆಯಲ್ಲ, ಇದನ್ನು ವೆಬ್‌’ಸೈಟ್‌’ಗೆ ಅಪ್‌ಲೋಡ್ ಮಾಡಲಾಗದು: ಸುಪ್ರೀಂಕೋರ್ಟ್