ಉಡುಪಿ: ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ನಿಭೀಷ್(23), ಅಮಲ್ (22)ಬಂಧಿತ ವಿದ್ಯಾರ್ಥಿಗಳು. ಮತ್ತೋರ್ವ ವಿದ್ಯಾರ್ಥಿ ಬಂಧನದ ವೇಳೆ ತಲೆಮರೆಸಿಕೊಂಡಿದ್ದು, ಹುಡುಕಾಟ ಆರಂಭಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಹೆರ್ಗಾ ಗ್ರಾಮದ ಈಶ್ಚರ ನಗರದಲ್ಲಿ ಈ ಮೂವರು ಗಾಂಜಾ ಮಾರುತ್ತಿದ್ದರು. ಈ ವೇಳೆ ದಾಳಿದ ಮಾಡಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಬರೊಬ್ಬರಿ 35 ಸಾವಿರ ಮೌಲ್ಯದ 7.3 ಗ್ರಾಂ ಮೆಥಾಂಪೆಟಮೆನ್ (MDMA) ಮಾದಕ ದ್ರವ್ಯವನ್ನ ಜೊತೆಗೆ 1.25 ಲಕ್ಷ ಮೌಲ್ಯದ ಡ್ಯೂಕ್ ಬೈಕ್ ಹಾಗೂ 1 ಲಕ್ಷ ಮೌಲ್ಯದ 2 ಮೊಬೈಲ್ ಫೋನ್ಗಳನ್ನ ವಶಕ್ಕೆ ಪಡೆಯಲಾಗಿದೆ.
ಈ ವೇಳೆ ತಲೆಮರೆಸಿಕೊಂಡ ಮತ್ತೋರ್ವ ಆರೋಪಿ ಅಪ್ಸಿನ್ ಗಾಗಿ ಪೊಲೀಸರು ಬಲೆಬೀಸಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.