ಮನೆ ಅಪರಾಧ ಮಂಡ್ಯದ ವಿಸಿ ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು

ಮಂಡ್ಯದ ವಿಸಿ ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವು

0

ಮಂಡ್ಯ: ಜಿಲ್ಲೆಯ ವಿಸಿ ನಾಲೆಗೆ ಕಾರು ಬಿದ್ದು ಕೆಲ ದಿನಗಳ ಹಿಂದಷ್ಟೇ ಪ್ರಾಣಹಾನಿ ಉಂಟಾಗಿತ್ತು. ಇಂದು ವಿಸಿ ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ದುರ್ಮರಣ ಹೊಂದಿರುವಂತ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ವಿಸಿ ನಾಲೆಯಲ್ಲಿ ಮುಳುಗಿ ಮೈಸೂರಿನ ಗೌಸಿಯಾ ನಗರದ ನಿವಾಸಿಗಳಾದಂತ 17 ವರ್ಷದ ಸೋನು, 16 ವರ್ಷದ ಸಿಮ್ರಾನ್ ಹಾಗೂ 9 ವರ್ಷದ ಸಿದ್ದೇಶ್ ಎಂಬುವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಚಿಕ್ಕಾಯರಹಳ್ಳಿ ಜಾತ್ರೆಗೆ ಮೈಸೂರಿನ ಗೌಸಿಯಾ ನಗರದಿಂದ ಆಗಮಿಸಿದ್ದರು. ಸಮೀಪದ ವಿಸಿ ಕಾಲುವೆಗೆ ಇಳಿದಂತ ವೇಳೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದವರನ್ನು ರಕ್ಷಿಸಲು ಹೋಗಿ ಮೂವರು ವಿಸಿ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.