ಮನೆ ರಾಜ್ಯ ಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು ಕೊಲೆ: ಹತ್ಯೆ ಮಾಡಿದವನಿಗೂ ಗಂಭೀರ ಗಾಯ

ಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು ಕೊಲೆ: ಹತ್ಯೆ ಮಾಡಿದವನಿಗೂ ಗಂಭೀರ ಗಾಯ

0

ಮುಂಡಗೋಡ: ಟಿಬೆಟಿಯನ್ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ 4ರಲ್ಲಿ ನಡೆದಿದ್ದು ಮತ್ತೊಬ್ಬ ಟಿಬೆಟಿಯನ್ ವ್ಯಕ್ತಿ ಗಂಭೀರ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೆ.5ರ ಮಂಗಳವಾರ ರಾತ್ರಿ ನಡೆದಿದೆ.

ಜಮಯಾಂಗ್ ಲೋಬ್ಸಂಗ್ (35) ಕೊಲೆಯಾದ ಟಿಬೆಟಿಯನ್ ವ್ಯಕ್ತಿ.

ಗೊನಪ್ ಚೊಡೇಕ್ ಹತ್ಯೆ ಮಾಡಿದ ವ್ಯಕ್ತಿ. ಈತನು ಕೂಡಾ ಗಂಭೀರ ಗಾಯಗೊಂಡಿದ್ದಾನೆ. ಗೊನಫ್ ಮಾಜಿ ಸೈನಿಕನಾಗಿದ್ದು, ಕ್ಯಾಂಪ್ ನಂ 4 ನಿವಾಸಿ ಎಂದು ತಿಳಿದು ಬಂದಿದೆ.

ಚಾಕು ಇರಿತಕ್ಕೊಳಗಾಗಿದ್ದ ಜಮಾಯಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಆರೋಪಿತ ಗೊನಪ್ ನನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.

ಟಿಬೆಟಿಯನ್ ಸೆಟ್ಲಮೆಂಟ್ ಚೇರಮನ್ ಡೊಲ್ಮಾ ಸಿರಿಂಗ್, ಡಿವೈಎಸ್ಪಿ ಕೆ ಎಲ್ ಗಣೇಶ, ಸಿಪಿಐ ಬಿ ಎಸ್ ಲೋಕಾಪುರ ಪಿಎಸ್ ಐಗಳಾದ ಯಲ್ಲಾಲಿಂಗ ಕುನ್ನೂರ, ಹನಮಂತ ಕುಡಗುಂಟಿ ಇದ್ದರು.

ಹಿಂದಿನ ಲೇಖನಪಪ್ಪುಗಳಿಂದ ಭಾರತ ಉದ್ದಾರ ಆಗದು: ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ
ಮುಂದಿನ ಲೇಖನಅತಿಭಯ