ಮನೆ ಕಾನೂನು ಕೌಟುಂಬಿಕ ನ್ಯಾಯಾಲಯದ ಆದೇಶ, ಡಿಕ್ರಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾಲಮಿತಿ 30 ದಿನಗಳು ಮಾತ್ರ: ದೆಹಲಿ...

ಕೌಟುಂಬಿಕ ನ್ಯಾಯಾಲಯದ ಆದೇಶ, ಡಿಕ್ರಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕಾಲಮಿತಿ 30 ದಿನಗಳು ಮಾತ್ರ: ದೆಹಲಿ ಹೈಕೋರ್ಟ್

0

ಕೌಟುಂಬಿಕ ನ್ಯಾಯಾಲಯಗಳ ತೀರ್ಪು ಅಥವಾ ಡಿಕ್ರಿ ಪ್ರಶ್ನಿಸುವ ಮೇಲ್ಮನವಿಯನ್ನು ತೀರ್ಪು ಅಥವಾ ಡಿಕ್ರಿ ಪ್ರಕಟವಾದ 30 ದಿನಗಳೊಳಗೆ ಸಲ್ಲಿಸಬೇಕು ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.

ಮೇಲ್ಮನವಿ ಸಲ್ಲಿಸಲು ಆದ್ಯತೆ ನೀಡುವ ಕಾಲಮಿತಿ ವಿಚಾರವಾಗಿ ಹಿಂದೂ ವಿವಾಹ ಕಾಯಿದೆ- 1955 ಮತ್ತು ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ- 1984ರ ನಡುವೆ ಅಸಂಗತತೆ ಇದೆ ಎನ್ನುವುದನ್ನು ಗಮನಿಸಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ಸ್ಪಷ್ಟಪಡಿಸಿದೆ.

ಆದರೆ ಹಿಂದೂ ವಿವಾಹ ಕಾಯಿದೆ 2003ರಲ್ಲಿ ತಿದ್ದುಪಡಿಯಾದಾಗ ಮೇಲ್ಮನವಿಗಾಗಿ 90-ದಿನಗಳ ಕಾಲಮಿತಿ ನಿಗದಿಪಡಿಸಿದ್ದರೆ ಕೌಟುಂಬಿಕ ನ್ಯಾಯಾಲಯಗಳ ಕಾಯಿದೆ 30-ದಿನಗಳ ಗಡುವು ನಿಗದಿಪಡಿಸಿತ್ತು.

ಮೇಲ್ಮನವಿ ಸಲ್ಲಿಸಬಹುದಾದ ಆದೇಶ ಮತ್ತು ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವ ಗಡುವು 90-ದಿನಗಳ ಅವಧಿಯಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ, ಎಲ್ಲೆಲ್ಲಿ ಕೌಟುಂಬಿಕ ನ್ಯಾಯಾಲಯ ಕಾಯಿದೆ, 1984ರ ಅನ್ವಯ ಕೌಟುಂಬಿಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆಯೋ ಅಲ್ಲಿ ಕೌಟುಂಬಿಕ ನ್ಯಾಯಾಲಯ ಕಾಯಿದೆ ಅನ್ವಯವಾಗಲಿದ್ದು, ಅದರಲ್ಲಿನ ಸೆಕ್ಷನ್‌ 19ರ ಅಡಿ ತಿಳಿಸಿರುವಂತೆ ಆದೇಶ ಮತ್ತು ಡಿಕ್ರಿಗೆ ಮೇಲ್ಮನವಿ ಸಲ್ಲಿಸಲು ಕಾಲಮಿತಿ 30 ದಿನಗಳಿರಲಿದೆ ಎಂದು ಸ್ಪಷ್ಟಪಡಿಸಿದೆ.

ಹಿಂದಿನ ಲೇಖನರೈತರು, ಜನ ಜಾನವಾರನ್ನು ಸಂಕಷ್ಟಕ್ಕೆ ದೂಡಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರ ಜಲಶಕ್ತಿ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಮುಂದಿನ ಲೇಖನಕೇರಳದಲ್ಲಿ ನಿಫಾ ವೈರಸ್ ಐದನೇ ಪ್ರಕರಣ ಪತ್ತೆ: ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ