ಮನೆ ಅಪರಾಧ ಕೊಳ್ಳೇಗಾಲದಲ್ಲಿ ಟಿಪ್ಪರ್ – ಕಾರಿನ ನಡುವೆ ಡಿಕ್ಕಿ: ಐವರ ಸಾವು

ಕೊಳ್ಳೇಗಾಲದಲ್ಲಿ ಟಿಪ್ಪರ್ – ಕಾರಿನ ನಡುವೆ ಡಿಕ್ಕಿ: ಐವರ ಸಾವು

0

ಚಾಮರಾಜನಗರ: ಟಿಪ್ಪರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ರಸ್ತೆಯಲ್ಲಿ ನಡೆದಿದೆ.

Join Our Whatsapp Group

ಅಪಘಾತದಲ್ಲಿ ಮಂಡ್ಯ ನೋಂದಣಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರು ಕಾರಲ್ಲಿ ಮಹಾ ಶಿವರಾತ್ರಿ ಜಾತ್ರೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೃತರ ವಿವರವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಹನೂರು ಕಡೆಯಿಂದ ಬಂದ ಖಾಲಿ ಟಿಪ್ಪರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಬಳಿಕ ಎರಡೂ ವಾಹನಗಳು ರಸ್ತೆ ಬದಿ ಪಲ್ಟಿಯಾಗಿವೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಶವಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. KA 21 N5876 ನೋಂದಣಿ ಇರುವ ಕಾರು ಅಪಘಾತಕ್ಕೀಡಾಗಿದ್ದು, ನುಜ್ಜುಗುಜ್ಜಾಗಿದೆ.