ಮನೆ ರಾಷ್ಟ್ರೀಯ ಫೆ. 16 ರಂದು ತ್ರಿಪುರ, 27 ರಂದು  ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ಚುನಾವಣೆ

ಫೆ. 16 ರಂದು ತ್ರಿಪುರ, 27 ರಂದು  ನಾಗಾಲ್ಯಾಂಡ್, ಮೇಘಾಲಯ ರಾಜ್ಯಗಳ ಚುನಾವಣೆ

0

ನವದೆಹಲಿ(Newdelhi): ಫೆಬ್ರುವರಿ 16ರಂದು ತ್ರಿಪುರ, ಫೆಬ್ರುವರಿ 27ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣೆ ಆಯೋಗ ಘೋಷಿಸಿದೆ.

ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬುಧವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 2ರಂದು ಮೂರು ರಾಜ್ಯಗಳು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯ ರಾಜ್ಯಗಳ ಸರ್ಕಾರ ಅವಧಿಯು ಕ್ರಮವಾಗಿ 2023ರ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22ರಂದು ಪೂರ್ಣಗೊಳ್ಳಲಿದೆ.

 ಪ್ರತಿ ರಾಜ್ಯದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಿಗದಿಪಡಿಸಲಾಗಿದೆ ಎಂದು ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾದಲ್ಲಿ ಒಟ್ಟು 62.8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಜ. 21ರಿಂದ 29ರ ವರೆಗೆ ರಾಜ್ಯದಾದ್ಯಂತ ಬಿಜೆಪಿ “ವಿಜಯ ಸಂಕಲ್ಪ ಅಭಿಯಾನ”: 1 ಕೋಟಿ ಮಿಸ್ ಕಾಲ್ ಅಭಿಯಾನ
ಮುಂದಿನ ಲೇಖನಮೀಸಲಾತಿ ವಿಚಾರದಲ್ಲಿ ಗೊಂದಲಗಳಿಲ್ಲ: ಸಿಎಂ ಬೊಮ್ಮಾಯಿ