ಮನೆ ಅಪರಾಧ ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರು ಡಿಕ್ಕಿ – ಟಿಪ್ಪರ್‌ ಚಾಲಕ ಸಾವು

ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರು ಡಿಕ್ಕಿ – ಟಿಪ್ಪರ್‌ ಚಾಲಕ ಸಾವು

0

ಚಿಕ್ಕಬಳ್ಳಾಪುರ : ಗಣಿ ಅಧಿಕಾರಿಗೆ ಹೆದರಿ ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿ ಟಿಪ್ಪರ್‌ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್‌ನ ಕೃಷ್ಣ ಕನ್ವೆನ್ಷನ್‌ ಸೆಂಟರ್ ಬಳಿ ನಡೆದಿದೆ.

ರಾಯಚೂರಿನ ಲಿಂಗಸೂರಿನ ರಮೇಶ್ (35) ಸಾವಿಗೀಡಾದ ಚಾಲಕ. ಟಿಪ್ಪರ್ ಲಾರಿ ಚೇಸ್ ಮಾಡಿದ್ದ ಗಣಿ ಅಧಿಕಾರಿ ಸವಿತಾ ಎಂದು ತಿಳಿದುಬಂದಿದೆ.

ಗಣಿ ಅಧಿಕಾರಿಗೆ ಹೆದರಿ ಟಿಪ್ಪರ್‌ ಚಾಲಕ ಓಡಿ ಹೋಗಿದ್ದ. ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ನಿಲ್ಲಿಸಿ ಚಾಲಕ ಎಸ್ಕೇಪ್‌ ಆಗಲು ಮುಂದಾಗಿದ್ದ. ಓಡಿ ಹೋಗುವಾಗ ಕಾರಿಗೆ ಅಡ್ಡ ಸಿಕ್ಕಿದ್ದಾನೆ. ಕಾರು ಡಿಕ್ಕಿ ಹೊಡೆದು ಟಿಪ್ಪರ್‌ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗಣಿ ಅಧಿಕಾರಿ ವಾಹನ‌ವನ್ನು ಕಂಡು ನಡುರಸ್ತೆಯಲ್ಲೇ ಟಿಪ್ಪರ್ ಬಿಟ್ಟು ಚಾಲಕ ಎಸ್ಕೇಪ್‌ ಆಗಲು ಮುಂದಾಗಿದ್ದ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ. ಟಿಪ್ಪರ್ ಲಾರಿ ಹಾಗೂ ಅಪಘಾತ ಮಾಡಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಧು ವರದಿಯಾಗಿದೆ.