ಮನೆ ಆರೋಗ್ಯ ಕೊರೊನಾ: 6561 ಹೊಸ ಪ್ರಕರಣ ಪತ್ತೆ

ಕೊರೊನಾ: 6561 ಹೊಸ ಪ್ರಕರಣ ಪತ್ತೆ

0

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು, ಕಳೆದ 24 ಗಂಟೆಗಳಲ್ಲಿ 6,561 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ.

ಬುಧವಾರ 7,554 ಸೋಂಕು ಪ್ರಕರಣಗಳು ವರದಿಯಾಗಿದ್ದವು.ಇದೇ ಅವಧಿಯಲ್ಲಿ 14,947 ಮಂದಿ ಚೇತರಿಸಿಕೊಂಡಿದ್ದು, ಇದುವರೆಗೆ ಒಟ್ಟು 4,23,53,620 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.ಕಳೆದ 24 ತಾಸಿನ ಅವಧಿಯಲ್ಲಿ 142 ಮಂದಿ ಮೃತಪಟ್ಟಿದ್ದು, ಈ ವರೆಗೆ ಒಟ್ಟು 5,14,388 ಮಂದಿ ಸಾವಿಗೀಡಾಗಿದ್ದಾರೆ.

Advertisement
Google search engine

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 77,152ಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ 98.62ರಷ್ಟಿದೆ.ದೇಶದಲ್ಲಿ 77 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

ದೈನಂದಿನ ದೃಢ ಪ್ರಮಾಣ ಶೇ 0.74 ಆಗಿದೆ.ಈ ವರೆಗೆ 178 ಕೋಟಿ ಡೋಸ್‌ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ.

ಹಿಂದಿನ ಲೇಖನಭೀಕರ ದಾಳಿ: ನಾಗರಿಕರ ಜೀವ ಉಳಿಸಲು ಖೇರ್ಸನ್ ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೇನೆ
ಮುಂದಿನ ಲೇಖನಸ್ಪಾ ಮಾಲೀಕರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಐವರ ಬಂಧನ