ಮೇಷ: ನೀವು ಈಗ ನಿಮ್ಮ ಎಲ್ಲ ಮಾನಸಿಕ ಸಾಮರ್ಥ್ಯಗಳನ್ನು ಒಗ್ಗೂಡಿಸಬೇಕು. ನೀವು ತಕ್ಷಣದ, ಸ್ಥಳದಲ್ಲಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸೂಕ್ತ ಸಲಹೆ ಪಡೆದುಕೊಳ್ಳಬೇಕು, ಏಕೆಂದರೆ ನಿಮ್ಮ ನಿರ್ಧಾರಗಳು ದೀರ್ಘಾವಧಿ ಪರಿಣಾಮ ಹೊಂದಿರಬಹುದು ಅಲ್ಲದೆ ಅವು ಹಣಕಾಸನ್ನು ಒಳಗೊಂಡಿರಬಹುದು.
ವೃಷಭ: ನಿಮಗೆ ಸುಲಭ, ನಿರಾತಂಕದ ದಿನ ಮುಂದಿದೆ. ಯಾವುದೇ ಚಿಂತೆ, ಆತಂಕಗಳಿಲ್ಲ. ಆದರೆ, ಒಂದು ಸಲಕ್ಕೆ ನೀವು ನಿರ್ವಹಿಸಲಾಗದ ಹಲವು ವಿಷಯಗಳಲ್ಲಿ ತೊಡಗಿಕೊಳ್ಳುತ್ತೀರಿ. ಇದು ನಿಮಗೆ ಒತ್ತಡ ಉಂಟು ಮಾಡಬಹುದು. ನೀವು ಪ್ರಾಯೋಗಿಕವಾಗಿರಿ ಮತ್ತು ಅತಿಯಾಗಿ ಏನೂ ಮಾಡಬೇಡಿ.
ಮಿಥುನ: ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ವಿರುದ್ಧ ಲಿಂಗಿಗಳ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಮುಂದಡಿ ಇಡುತ್ತೀರಿ.
ಕರ್ಕಾಟಕ: ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.
ಸಿಂಹ: ನೀವು ಇಂದು ಎಲ್ಲ ಸವಾಲುಗಳು ಮತ್ತು ಅಡೆತಡೆಗಳನ್ನೂ ಯಶಸ್ವಿಯಾಗಿ ನಿವಾರಿಸುತ್ತೀರಿ. ನಿಮ್ಮ ಅಂತಿಮ ಗುರಿ ಯಾವುದೇ ಸನ್ನಿವೇಶದಲ್ಲೂ ವಿಜೇತರಾಗಿ ಹೊರಬರಬೇಕು ಎನ್ನುವುದು. ವ್ಯಾಪಾರದಲ್ಲಿ ತೀವ್ರ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ.
ಕನ್ಯಾ: ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ.
ತುಲಾ: ನಿಮ್ಮ ಅತ್ಯಂತ ಪ್ರಭಾವಿ ಮಿತ್ರನೊಬ್ಬ ನಿಮಗೆ ಅದೃಷ್ಟ ತರುತ್ತಾನೆ. ವ್ಯಾಪಾರದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಹೊಸ ಉದ್ಯಮ ಪ್ರಾರಂಭಿಸಲು ಶಕ್ತರಾಗುತ್ತೀರಿ. ನಿಮ್ಮ ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಪ್ರಶಂಸೆ ಲಭಿಸುತ್ತದೆ.
ವೃಶ್ಚಿಕ: ನೀವು ಇಂದು ಬಾಸ್ಗಳ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ನಿಮಗೆ ನೆರವು ನೀಡುವುದಿಲ್ಲ ಮತ್ತು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಬಾಗಿಲು ಬಡಿಯುತ್ತಿರುವ ಹೊಸಬರು ಸಂದರ್ಶನ ಮತ್ತು ಅಂತಿಮ ಆಯ್ಕೆಯಲ್ಲಿ ತಡವಾದ ಯಶಸ್ಸು ಕಾಣುತ್ತಾರೆ.
ಧನು:. ನೇರ ಹಾಗೂ ಮುಕ್ತ ಮನಸ್ಸು ಹೊಂದಿರುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ನೀವು ನಿಮ್ಮ ಜೀವನಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತೀರಿ. ಇದು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂಬ ಭಾವನೆ ತರುತ್ತದೆ.
ಮಕರ: ನೀವು ನಿಮ್ಮ ಎಲ್ಲ ಪರಿಶ್ರಮ ಮತ್ತು ಯೋಜನೆ ವಿಫಲವಾಗಿದ್ದಕ್ಕೆ ಅತ್ಯಂತ ನಿರಾಸೆಗೊಳ್ಳುತ್ತೀರಿ. ನಿಮಗೆ ಇತರರೊಂದಿಗೆ ಅಭಿಪ್ರಾಯಭೇದಗಳಿವೆ ಮತ್ತು ಕೆಲವೊಮ್ಮೆ ಈ ಭೇದಗಳು ವಾಗ್ಯುದ್ಧಕ್ಕೆ ಕಾರಣವಾಗುತ್ತವೆ. ಅಂತಹ ಸಾಮರಸ್ಯವಿಲ್ಲದ ಪರಿಸರ ನಿಮ್ಮ ಆತಂಕ ಹೆಚ್ಚಿಸುತ್ತದೆ, ಆದರೆ ಭರವಸೆ ಕಳೆದುಕೊಳ್ಳಬೇಡಿ. ನೀವು ಖಂಡಿತಾ ಈ ಸಂಕಷ್ಟದ ಸಮಯದಿಂದ ಹೊರಬರುತ್ತೀರಿ.
ಕುಂಭ: ನೀವು ಭವಿಷ್ಯದ ಯೋಜನೆಗಳಿಂದ ನಿರ್ಬಂಧಕ್ಕೆ ಒಳಪಟ್ಟಿದ್ದೀರಿ. ಯೋಜನೆಗಳು ಸರಿ, ಆದರೆ ನೀವು ನಿಮ್ಮ ಕನಸುಗಳನ್ನು ನನಸಾಗಿಸುವ ಬ್ರಹ್ಮಾಂಡದ ಶಕ್ತಿಯನ್ನು ಪಡೆಯಲು ಪ್ರಸ್ತುತದಲ್ಲಿ ಜೀವಿಸಬೇಕು.
ಮೀನ: ನೀವು ಜೀವನದಲ್ಲಿ ನಿಮ್ಮ ಹಣಕಾಸುಗಳನ್ನು ಯೋಜಿಸುವುದು ಅಗತ್ಯ ಮತ್ತು ನೀವು ಇಂದು ನಿಮ್ಮ ಶಕ್ತಿಯನ್ನು ಅದಕ್ಕಾಗಿ ವ್ಯಯಿಸಬೇಕು. ಹಣದ ವಿಷಯದಲ್ಲಿ ನೀವು ದಿಢೀರ್ ಎಂದು ಜಿಪುಣರಾಗಿದ್ದೀರಿ. ಕುಟುಂಬದಲ್ಲಿ ಅನಿರೀಕ್ಷಿತ ರೋಗ ರುಜಿನ ನಿಮಗೆ ಆತಂಕ ತರುತ್ತದೆ.