ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಹಾಗೂ ‘ಕ್ಯಾಪ್ಟನ್ ಕೂಲ್’ ಎಂದೇ ಜನಪ್ರಿಯರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 42ನೇ ಹುಟ್ಟುಹಬ್ಬ.
1981ರ ಜುಲೈ 7ರಂದು ಜನಿಸಿದ ಇವರು ಯಶಸ್ವಿ ನಾಯಕ ಮಾತ್ರವಲ್ಲದೇ ಯಶಸ್ವಿ ವಿಕೆಟ್ ಕೀಪರ್ ಕೂಡಾ ಆಗಿರುವುದು ಗೊತ್ತಿರುವ ಸಂಗತಿ.
ಮಹೇಂದ್ರ ಸಿಂಗ್ ಧೋನಿ ಅವರ ಸಾಧನೆ ಬಗ್ಗೆ ತಿಳಿಯೋಣ, ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಎರಡು ಬಾರಿ ವರ್ಲ್ಡ್ ಕಪ್ ಗೆದ್ದಿದೆ ಹಾಗೂ ಐ ಪಿಎಲ್ ನಲ್ಲಿ ಸಿ ಎಸ್ ಕೆ ತಂಡಕ್ಕೆ ಐದು ಬಾರಿ ಐಪಿಎಲ್ ಟ್ರೋಫಿ ತಂದು ಕೊಟ್ಟಿದ್ದಾರೆ.
ಒಟ್ಟು 331 ಪಂದ್ಯಗಳ ಪೈಕಿ 60 ಟೆಸ್ಟ್, 199 ಏಕದಿನ, 72 ಟಿ20. ನಾಯಕನಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ ಏಕೈಕ ಆಟಗಾರ ಎನಿಸಿಕೊಂದಿದ್ದರೆ.
ಏಕದಿನ ಕ್ರಿಕೆಟ್ ನಲ್ಲಿ 100ಕ್ಕೂ ಹೆಚ್ಚು ಸ್ಟಂಪಿಂಗ್ ಮಾಡಿದ ಏಕೈಕ ವಿಕೆಟ್ ಕೀಪರ್ ಧೋನಿ. ಸಂಗಕ್ಕಾರ 99 ಸ್ಟಂಪಿಂಗ್ ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ಧೋನಿ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ವಿಕೆಟ್ ಕೀಪರ್ ನಿಂದ ಅತ್ಯಧಿಕ ಔಟ್‌ಗಳನ್ನು ಹೊಂದಿದ್ದಾರೆ – 294 (256 ಕ್ಯಾಚ್ ಗಳು, 38 ಸ್ಟಂಪಿಂಗ್) ಮಾಡಿದ್ದಾರೆ .
ಎಂ.ಎಸ್.ಧೋನಿ ಅವರು ನಂ.6 ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ODIಗಳಲ್ಲಿ ಅತಿ ಹೆಚ್ಚು ರನ್ (4164 47.32) ಗಳಿಸಿದ್ದಾರೆ ಎಂಬ ಪಾತ್ರ ಧೋನಿ ಅವರದ್ದು.
ಧೋನಿಗೆ 2009ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ ನೀಡಿ ಗೌರವಿಸಲಾಗಿದೆ. 2007ರಲ್ಲಿ ಭಾರತದ ಅತ್ಯುನ್ನತ ಕ್ರೀಡಾ ಗೌರವ ಪ್ರಶಸ್ತಿಯಾದ ‘ರಾಜೀವ್ ಗಾಂಧಿ ಖೇಲ್ ರತ್ನ’ ನೀಡಿ ಪುರಸ್ಕರಿಸಲಾಗಿದೆ. ಎರಡು ಬಾರಿ ಐಸಿಸಿ, ODI ವರ್ಷದ ಆಟಗಾರ ಪ್ರಶಸ್ತಿ ಗೆದ್ದ ಏಕೈಕ ಕ್ರಿಕೆಟರ್ ಎಂ.ಎಸ್.ಧೋನಿ.