ಬೆಂಗಳೂರು: ಈ ದಿನದಂದು ಇಡೀ ಜಗತ್ತಿನಲ್ಲಿ ಆಚರಿಸಬೇಕಾದ ಪ್ರಮುಖ ದಿನವೆಂದರೆ “ವಿಶ್ವ ಪರಿಸರ ದಿನ”. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಾದ್ಯಂತ ಜೂನ್ 5 ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಶುಭಾಶಯಗಳನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಜೊತೆಗೆ ಪರಿಸರದ ಕುರಿತು ಆದರ್ಶಪೂರ್ಣ ಸಂದೇಶವನ್ನೂ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುತ್ತಾ, “ನಾವು ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ” ಎಂಬ ಸರಳ ಸತ್ಯವನ್ನು ವರ್ತಮಾನದಲ್ಲಿ ಅರ್ಥಮಾಡಿಕೊಂಡರೆ ಇಂದಿನ ಮತ್ತು ಮುಂದಿನ ತಲೆಮಾರಿನ ಭವಿಷ್ಯ ಸುರಕ್ಷಿತವಾಗಿ ಉಳಿಯಲಿದೆ. ಪರಿಸರ ಕಾಳಜಿ ಈ ದಿನಕ್ಕೆ ಸೀಮಿತವಾಗದೆ ನಮ್ಮೆಲ್ಲರ ನಿತ್ಯ ಬದುಕಿನ ಭಾಗವಾಗಲಿ. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬ ವ್ಯಕ್ತಿಯೂ ಕೈಗೊಳ್ಳಬೇಕು. ಪ್ರತಿಯೊಬ್ಬ ನಾಗರಿಕನೂ ಪರಿಸರದ ಉಳಿವಿಗೆ ಒಂದು ಹೆಜ್ಜೆ ಇಡಬೇಕಾದ ಅಗತ್ಯತೆ ಇದೆ.















