ಮನೆ ಮನರಂಜನೆ ನಿರೀಕ್ಷೆ ಮೂಡಿಸಿದ ನಾನಿ ಅಭಿನಯದ ಸಿನಿಮಾ ‘ದಸರಾ’

ನಿರೀಕ್ಷೆ ಮೂಡಿಸಿದ ನಾನಿ ಅಭಿನಯದ ಸಿನಿಮಾ ‘ದಸರಾ’

0

ತೆಲುಗು ನಟ ನಾನಿ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಹೆಜ್ಜೆ ಇಟ್ಟಿದ್ದಾರೆ. ಅವರ ಹೊಸ ಸಿನಿಮಾ ‘ದಸರಾ’ ಹಲವು ಭಾಷೆಗಳಲ್ಲಿ ಮಾರ್ಚ್ 30ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಧರಣಿ ಅನ್ನೋ ರಗಡ್ ಪಾತ್ರವನ್ನು ನಾನಿ ಮಾಡಿದ್ದಾರೆ. ಅವರಿಗೆ ನಾಯಕಿಯಾಗಿ ವೆನ್ನಲಾ ಎಂಬ ಪಾತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮಾಡಿದ್ದಾರೆ.

ವಿಶೇಷವೆಂದರೆ, ಕನ್ನಡದ ‘ನಾಗಿಣಿ’ ಧಾರವಾಹಿ, ‘ದಿಯಾ’ ಸಿನಿಮಾದ ನಟ ದೀಕ್ಷಿತ್ ಶೆಟ್ಟಿ ಕೂಡ ‘ದಸರಾ’ ಸಿನಿಮಾದಲ್ಲಿ ಸೂರಿ ಅನ್ನೋ ಪಾತ್ರ ಮಾಡಿದ್ದಾರೆ.

ದಸರಾ ಟ್ರೇಲರ್ ರಿಲೀಸ್

‘ದಸರಾ’ ಸಿನಿಮಾವು ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಸಖತ್ ರಗಡ್ ಆಗಿ ಮೂಡಿಬಂದಿದೆ. ಕನ್ನಡದ ನಟ ದೀಕ್ಷಿತ್ ಶೆಟ್ಟಿ ಕೂಡ ಟ್ರೇಲರ್ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಟ್ರೇಲರ್ ನೋಡಿದವರು, ನಾನಿ ಅವತಾರ ಕಂಡು ಶಾಕ್ ಆಗಿದ್ದಾರೆ. ಈವರೆಗೂ ಫ್ಯಾಮಿಲಿ ಬಾಯ್, ಲವರ್ ಬಾಯ್ ಥರದ ಪಾತ್ರಗಳನ್ನು ಮಾಡಿಕೊಂಡಿದ್ದ ನಾನಿ ಇಲ್ಲಿ ರಗಡ್ ಅವತಾರ ತಾಳಿದ್ದಾರೆ. ಉದ್ದನೆಯ ಕೂದಲು, ಗಡ್ಡ ಬಿಟ್ಟು ಖದರ್ ಆಗಿ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ದೀಕ್ಷಿತ್ ಶೆಟ್ಟಿ ಕೂಡ ರಫ್ & ಟಫ್ ಲುಕ್ನಲ್ಲಿ ಮಿಂಚಿದ್ದಾರೆ. ಆಕ್ಷನ್ ಜೊತೆಗೆ ಎಮೋಷನಲ್ ದೃಶ್ಯಗಳು ಕೂಡ ಈ ಸಿನಿಮಾದಲ್ಲಿವೆ ಅನ್ನೋದಕ್ಕೆ ಟ್ರೇಲರ್ ನಲ್ಲಿ ಸಾಕ್ಷಿ ಇದೆ.

ಕಲ್ಲಿದ್ದಲನ್ನು ಬ್ಯಾಕ್ ಡ್ರಾಪ್ ಆಗಿ ಇಟ್ಟುಕೊಂಡು ದಸರಾ ಸಿನಿಮಾ ಮಾಡಲಾಗಿದ್ದು, ರಕ್ತಸಿಕ್ತ ದೃಶ್ಯಗಳು ಹೆಚ್ಚಿವೆ. ತೆಲಂಗಾಣದ ಗೋದಾವರಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ತೆರೆಮೇಲೆ ತರುತ್ತಿದೆ ‘ದಸರಾ’ ಸಿನಿಮಾ. ನಟ ನಾನಿ ಅವರ ಮೇಕ್ ಓವರ್, ರಗಡ್ ಲುಕ್, ಹಾವ ಭಾವ ಎಲ್ಲವೂ ಗಮನ ಸೆಳೆದಿದ್ದು, ನಾನಿ ಅಭಿಮಾನಿಗಳು ಕೂಡ ಸಿನಿಮಾ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕುರಿ ಅವರು ಈ ಸಿನಿಮಾವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಚೊಚ್ಚಲ ಬಾರಿಗೆ ಶ್ರೀಕಾಂತ್ ಒಡೆಲಾ ‘ದಸರಾ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ನಾನಿ, ದೀಕ್ಷಿತ್, ಕೀರ್ತಿ ಜೊತೆಗೆ ಸಮುದ್ರಖನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆ ಇದ್ದು, ಸತ್ಯನ್ ಸೂರ್ಯನ್ ಛಾಯಾಗ್ರಹಣ ಮಾಡಿದ್ದಾರೆ.

ಹಿಂದಿನ ಲೇಖನಬಸವಣ್ಣನವರ ತತ್ವಗಳನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎಂಬುದರಲ್ಲಿ ಯಶಸ್ಸು ನಿಂತಿದೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಸಹಕಾರಿ ರಂಗದಲ್ಲಿ ಎಲ್ಲರೂ ಸಮಾನರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ