ಮನೆ ರಾಜ್ಯ ರಾಜ್ಯದ ಇಂದಿನ ಹವಾಮಾನ ವರದಿ

ರಾಜ್ಯದ ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.24) ಹವಾಮಾನ ವರದಿ ಇಂತಿದೆ. ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಸೇರಿ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಬಳ್ಳಾರಿಯಲ್ಲಿ 31-23 ಸೆಲ್ಸಿಯಸ್‌ (ಸಿ) ಮೋಡ ಕವಿದ ವಾತಾವರಣ, ಬಿಸಿಲು, ರಾಯಚೂರಿನಲ್ಲಿ 32-24 ಸಿ, ಯಾದಗಿರಿಯಲ್ಲಿ 32-24 ಸಿ, ಹಾಸನದಲ್ಲಿ 24-19 ಸಿ ಮೋಡ ಕವಿದ ವಾತಾವರಣವಿರಲಿದೆ.

ಚಿಕ್ಕಬಳ್ಳಾಪುರದಲ್ಲಿ 27-20 ಸಿ, ಚಿತ್ರದುರ್ಗದಲ್ಲಿ 27-21 ಸಿ, ಕೋಲಾರದಲ್ಲಿ 28-21 ಸಿ, ವಿಜಯನಗರದಲ್ಲಿ 31-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಬೀದರ್‌ ನಲ್ಲಿ 30-22 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ವಿಜಯಪುರದಲ್ಲಿ 30-22 ಸಿ, ದಾವಣಗೆರೆಯಲ್ಲಿ 28-22 ಸಿ, ಗದಗದಲ್ಲಿ 28-22 ಸಿ, ಕಲ್ಬುರ್ಗಿಯಲ್ಲಿ 31-23 ಸಿ, ಹಾವೇರಿಯಲ್ಲಿ 27-22 ಸಿ, ಕೊಪ್ಪಳದಲ್ಲಿ 29-23 ಸಿ, ಮೈಸೂರಿನಲ್ಲಿ 27-21 ಸಿ, ತುಮಕೂರು 27-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬೆಂಗಳೂರು ನಗರ ಹಾಗೂ ಗ್ರಾಮಾಂತರ 27-20 ಸಿ, ಬೆಳಗಾವಿ 26-21 ಸಿ, ಚಾಮರಾಜನಗರ 28-21 ಸಿ, ಚಿಕ್ಕಮಗಳೂರು 23-18 ಸಿ, ಮಂಡ್ಯ 28-21 ಸಿ, ಶಿವಮೊಗ್ಗ 26-22 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ಬಾಗಲಕೋಟೆ 30-23 ಸಿ, ಧಾರವಾಡ 26-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80, ದಕ್ಷಿಣ ಕನ್ನಡ 28-24 ಸಿ, ಕೊಡಗು 21-17 ಸಿ, ರಾಮನಗರ 27-21 ಸಿ, ಉಡುಪಿ 28-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಮಕ್ಕಳು, ಪತ್ನಿಯನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಮೂವರು ಮಕ್ಕಳ ಸಾವು