ಮನೆ ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ

0

ದಿನ ಪ್ರಾರಂಭಿಸುವ ಮುನ್ನ ರಾಶಿ ಭವಿಷ್ಯವನ್ನು ಒಮ್ಮೆ ನೋಡಿ. ಇಲ್ಲಿರುವ ಎಚ್ಚರಿಕೆಯ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ಸಲಹೆಗಳನ್ನು ಪಾಲಿಸಿ.

ಮೇಷ ರಾಶಿ

ನೌಕರಿ ಇಲ್ಲದವರಿಗೆ ಹೊಸ ನೌಕರಿ ಸಿಗುವ ಸಂಭವ. ನೌಕರಿಯಲ್ಲಿ ಇರುವವರಿಗೆ ಜಾಗ ಬದಲಾವಣೆ ಸಂಭವ ಇದೆ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ವರ್ಗಾವಣೆ ಆಗಬಹುದು. ಕುಜ ನಿಮ್ಮ ರಾಶಿಯಿಂದ ಮುಂದೆ ಚಲಿಸುವವರೆಗೂ ಭೂಮಿ ವ್ಯವಹಾರಗಳಲ್ಲಿ ಮುಂದುವರೆಯಬೇಡಿ. ಅವಿವಾಹಿತರಿಗೆ ವಿವಾಹದ ಪ್ರಸ್ಥಾಪ ಬರಬಹುದು.

ವೃಷಭ ರಾಶಿ

ಹೊಸ ನೌಕರಿ ಬೇಟೆಯಲ್ಲಿ ಇರುವವರಿಗೆ ಶುಭಸುದ್ದಿ ಇದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುತ್ತದೆ. ಆಭರಣ ಅಲಂಕಾರ ಸಾಮಗ್ರಿಗಳ ವ್ಯಾಪಾರಿಗಳಿಗೆ ಶುಭದಿನ. ನಿಮ್ಮ ಮಾತು ಎದುರು ಇರುವವರನ್ನು ಪರವಶಗೊಳಿಸುತ್ತದೆ. ನಿಮ್ಮ ಮಾತಿಗೆ ಬೆಲೆ ಇದೆ. ಯಾವುದಾದರೂ ಮಾತುಕತೆ ಒಪ್ಪಂದ ಇಂಥ ಕೆಲಸಗಳಿಗೆ ನೀವು ಮಧ್ಯವರ್ತಿಯಾದರೆ ಶುಭ.

ಮಿಥುನ ರಾಶಿ

ನೌಕರಿಯಲ್ಲಿ ಕೊಂಚ ಒತ್ತಡದ ದಿನಗಳು. ಆದರೂ ಭಯ ಬೇಡ. ಹಣಕಾಸಿನ ಹರಿವು ಉತ್ತಮವಿದೆ. ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ತಾಯಿಯಿಂದ ಸಹಾಯ ಇದೆ. ನಿಮ್ಮ ಮಾತಿನಿಂದ ಲಾಭ ಇದೆ. ವಿಮೆ, ಮರ‍್ಕೆಟಿಂಗ್, ಫೈನಾನ್ಸ್ ನೌಕರರಿಗೆ ಶುಭದಿನ. ಭೂಮಿ ವ್ಯವಹಾರಗಳಲ್ಲಿ ಅಲ್ಪಮಟ್ಟಿನ ಲಾಭ ಇದೆ.

ಕರ್ಕಾಟಕ ರಾಶಿ

ಯಾವುದೋ ಶುಭಸುದ್ದಿಯೊಂದು ನಿಮಗಾಗಿ ಕಾಯುತ್ತಿದೆ. ಮನಸ್ಸಿಗೆ ಆಹ್ಲಾದ ಕೊಡುವ ದಿನ. ಹಣಕಾಸಿನ ಹರಿವು ಉತ್ತಮವಾಗಿದೆ. ಸುಖಭೋಜನ ಪ್ರಾಪ್ತಿ ಇದೆ. ಸಂಗಾತಿಯಿಂದ ಕೊಂಚ ಕಿರಿಕಿರಿ ಆದರೂ ದಿನಾಂತ್ಯ ಎಲ್ಲವೂ ಸರಿ ಆಗುತ್ತದೆ. ಗುರುಗಳ ದರ್ಶನ ಮಾಡಿ.

ಸಿಂಹ ರಾಶಿ

ಭೂವಿವಾದಗಳಿಂದ ತೊಂದರೆ ಇದೆ. ಸರ್ಕಾರಿ ನೌಕರಿಗೆ ಇಷ್ಟವಿಲ್ಲದ ಜಾಗಕ್ಕೆ ವರ್ಗಾವಣೆ ಸಾಧ್ಯತೆ ಇದೆ. ಹಣಕಾಸು ಯೋಚಿಸಿ ಖರ್ಚು ಮಾಡಿ. ಅನಗತ್ಯ ಸೋರಿಹೋಗಲು ಬಿಡಬೇಡಿ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ದುರ್ಗಾಸ್ತುತಿ ಹೇಳಿಕೊಳ್ಳಿ.

ಕನ್ಯಾ ರಾಶಿ

ನಿಮಗೂ ಸಹ ವಿವಾಹದ ಮಾತುಕತೆಗಳು ಮನೆಯಲ್ಲಿ ನಡೆಯಬಹುದು. ಅನುರೂಪರಾದ ಸಂಗಾತಿ ದೊರೆಯುವ ಸಾಧ್ಯತೆ ಇದೆ. ಮಕ್ಕಳಿಲ್ಲದವರಿಗೆ ಶುಭ ಸುದ್ದಿ ಇದೆ. ದೂರಪ್ರಯಾಣ ಯೋಗ ಇದೆ. ಆದರೆ ಪ್ರಯಾಣ ಮಾಡುವಾಗ ಎಚ್ಚರಿಕೆ ಇರಲಿ. ಹಣಕಾಸಿನ ಬಗ್ಗೆ ಚಿಂತೆ ಬೇಡ.

ತುಲಾ ರಾಶಿ

ಸಂಗಾತಿಗೆ ಸಿಗುವ ಯಶಸ್ಸಿನಿಂದ ನಿಮಗೂ ಮನಸ್ಸಿಗೆ ಸಂತೋಷ. ವೃತ್ತಿಜೀವನದಲ್ಲಿ ಒತ್ತಡಗಳು ಇರುತ್ತದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ಆಂತರಿಕ ಶತ್ರುಗಳ ಕಾಟ ಇದೆ. ಯಾರನ್ನೂ ಹೆಚ್ಚು ಅವಲಂಬಿಸಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ. ಅಪವಾದ ಬರದಂತೆ ಎಚ್ಚರಿಕೆ ಇರಲಿ. ಹತ್ತಿರದವರಿಂದ ಉಡುಗೊರೆ ಸಿಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ

ಮಕ್ಕಳಿಗಾಗಿ ಅಪೇಕ್ಷೆ ಪಡುವವರಿಗೆ ಶುಭಸುದ್ದಿ ಇದೆ. ಶತ್ರುಗಳು ನಿಮ್ಮ ಮುಂದೆ ಸೋಲುತ್ತಾರೆ. ಜಯ ಯಶಸ್ಸು ನಿಮ್ಮದಾಗುತ್ತದೆ. ಹಣಕಾಸು ಸ್ಥಿತಿ ಸುಗಮವಾಗಿದೆ. ಹೊಸ ಹೊಸ ಯೋಜನೆ ಕೈಗೊಳ್ಳುವವರಿಗೆ ಶುಭದಿನ. ಸಾಧುಸಂತರಿಗೆ ದಾನ ಮಾಡಿ. ನೌಕರಿಯಲ್ಲಿ ಶುಭಸುದ್ದಿ ಇದೆ.

ಧನಸ್ಸು ರಾಶಿ

ಮಾತಿನಿಂದ ಮುಜಗರ ಅನುಭವಿಸುವಂತಾಗುತ್ತದೆ. ಮಾತಿನ ಮೇಲೆ ಗಮನ ಇರಲಿ. ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಮಾತೇ ನಿಮಗೆ ಮುಳುವಾಗುತ್ತದೆ. ಮಕ್ಕಳ ಯಶಸ್ಸಿಗೆ ಕೊಂಚ ಹಿನ್ನಡೆ ಇದೆ. ದೇಹದಲ್ಲಿ ಕೊಂಚ ಆಲಸ್ಯ ಕಾಣಿಸಬಹುದು. ಪ್ರೇಮಿಗಳಿಗೆ ಶುಭದಿನ.

ಮಕರ ರಾಶಿ

ಮನಸ್ಸಿಗೆ ಕಳವಳ ಆತಂಕ. ಆದರೆ ಯೋಚಿಸಬೇಡಿ. ಮುಂದೆ ಒಳ್ಳೆಯ ದಿನಗಳು ಖಂಡಿತಾ ಇದೆ. ಹಣಕಾಸಿನ ಮುಗ್ಗಟ್ಟು ಇದ್ದರೂ ಹಣದ ಹರಿವೂ ಇದೆ. ಖರ್ಚು ವೆಚ್ಚಗಳ ಬಗ್ಗೆ ಗಮನ ಇರಲಿ. ಮಕ್ಕಳ ಮಾತು ಅಥವಾ ನಡವಳಿಕೆಯಿಂದ ಮನಸ್ಸಿಗೆ ನೋವಾಗುವ ಸಂಭವ ಇದೆ. ದೇಹಾಲಸ್ಯವೂ ಕಾಣಿಸುತ್ತದೆ. ಗುರುಗಳನ್ನು ನಂಬಿ. ಗುರುರಾಯರ ಸ್ಮರಣೆ ಮಾಡಿ.

ಕುಂಭ ರಾಶಿ

ಹಣದ ಹರಿವು ಬಹಳ ಉತ್ತಮವಾಗಿದೆ. ಶುಭಕಾರ್ಯಕ್ಕೆ ಧನವ್ಯಯ ಆಗಲಿದೆ. ಮನೆಯಲ್ಲಿ ಶುಭದ ವಾತಾವರಣ. ವೃತ್ತಿಯಲ್ಲಿ ಸಂತಸದ ಕ್ಷಣಗಳು. ಶತ್ರುಗಳ ಕಾಟ ಕಡಿಮೆ. ಹೆಣ್ಣುಮಕ್ಕಳಿಂದ ಅಥವಾ ಸಹೋದರಿ-ತಾಯಿ ಮುಂತಾದವರಿಂದ ಶುಭಸುದ್ದಿ ಇದೆ. ಸರ್ಕಾರದಿಂದ ಲಾಭ ಇದೆ. ಅನಿರೀಕ್ಷಿತ ಧನಲಾಭ ಇದೆ. ಹೋಟೆಲ್ ವ್ಯಾಪಾರಿಗಳಿಗೆ ಸಿಹಿತಿಂಡಿ ವ್ಯಾಪಾರಿಗಳಿಗೆ ಶುಭದಿನ.

ಮೀನ ರಾಶಿ

ಬೆಳಗ್ಗೆ ಅನಿರೀಕ್ಷಿತ ಹಣ ಖರ್ಚಾದರೂ ಸಂಜೆಯ ವೇಳೆಗೆ ಹಣ ಒದಗಿ ಬರುತ್ತದೆ. ಬಂಧುಗಳು ನಿಮಗೆ ಸಹಾಯ ಮಾಡುತ್ತಾರೆ ಅಥವಾ ಬೆಂಬಲ ಕೊಡುತ್ತಾರೆ. ಮಕ್ಕಳಿಂದ ಶುಭಸುದ್ದಿ ಇದೆ. ಆದರೂ ಮನಸ್ಸಿಗೆ ಯಾವುದೋ ವ್ಯಥೆ ಆಗಾಗ ಇಣುಕಿ ಬೇಸರ ತರಿಸುತ್ತದೆ. ಯಾವುದಾದರೂ ನಿಂತುಹೋದ ಕೆಲಸ ಶುಭಾರಂಭವಾಗುತ್ತದೆ.

ಹಿಂದಿನ ಲೇಖನಜು.25ಕ್ಕೆ 2ನೇ ಹಂತದ ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ಸಮನ್ಸ್‌
ಮುಂದಿನ ಲೇಖನಕೆ.ಎಲ್.ರಾಹುಲ್‌ ಗೆ ಕೋವಿಡ್‌ ಪಾಸಿಟಿವ್‌: ವಿಂಡೀಸ್‌ ಸರಣಿಗೆ ಅಲಭ್ಯ