ಮನೆ ಜ್ಯೋತಿಷ್ಯ ಈ ದಿನದ ನಿಮ್ಮ ರಾಶಿ ಭವಿಷ್ಯ

ಈ ದಿನದ ನಿಮ್ಮ ರಾಶಿ ಭವಿಷ್ಯ

0

ಮೇಷ: ಇಂದು, ನೀವು ಯಾರದೋ ಒಬ್ಬರ ಹೃದಯಕ್ಕೆ ಘಾಸಿಯುಂಟು ಮಾಡುತ್ತೀರಿ. ಮತ್ತೊಂದೆಡೆ, ನೀವು ಸ್ಥಿರವಾದ ಬಾಂಧವ್ಯಕ್ಕೆ ಬದ್ಧರಾಗಿರಲು ಕೂಡಾ ಬಯಸುತ್ತಿದ್ದೀರಿ. ವಿವಾಹಿತರಿಗೆ ಬಂಧಗಳು ಸದೃಢವಾಗಿರುತ್ತವೆ.

ವೃಷಭ: ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ ತಕ್ಕಷ್ಟಿಲ್ಲ ಎಂದು ನೀವು ಕಾಣುತ್ತೀರಿ. ಮಧ್ಯಾಹ್ನದಂದು ನೀವು ಪ್ರಯಾಣ ಮಾಡಲು ಉತ್ಸಾಹದಲ್ಲಿರುವುದಿಲ್ಲ, ಆದರೆ ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತುಕತೆಯ ಕಾರಣ ನಿರಾಳವಾಗಿರುತ್ತವೆ.

ಮಿಥುನ: ನಿಮ್ಮ ಸುತ್ತಲಿನ ಜನರು ಸಂತೋಷದಲ್ಲಿದ್ದು ಅವರ ಸಮಯವನ್ನು ಆನಂದಿಸುತ್ತಿರುವಾಗ, ನೀವು ವ್ಯಾಪಾರ ವ್ಯವಹಾರಗಳಲ್ಲಿ ಮುಳುಗಿ ಹೋಗಿರುತ್ತೀರಿ. ನೀವು ವ್ಯಾಪಾರ ಸಂಬಂಧಿತ ಪ್ರವಾಸ ಮಾಡುವ ಸಾಧ್ಯತೆಯೂ ಇದೆ.

ಕರ್ಕಾಟಕ: ಅಪಾರ ಒತ್ತಡ ಮತ್ತು ಇತರರ ಕೆಲಸದ ಭಾರ, ಆದರೂ ನೀವು ಸಾಧಿಸುತ್ತೀರಿ. ವ್ಯಾಪಾರದಲ್ಲಿ, ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳು ಅವರ ಯುಕ್ತಿಗಳಲ್ಲಿ ವಿಫಲರಾಗುತ್ತಾರೆ. ಈ ಹಂತದ ಸಂಪೂರ್ಣ ಬಳಕೆ ಮಾಡಿಕೊಳ್ಳಿರಿ.

ಸಿಂಹ: ಇಂದು ನೀವು ಅತಿಯಾದ ಭಾವನಾತ್ಮಕತೆಯಿಂದ ದೂರ ಉಳಿಯಬೇಕು. ಜೀವನದತ್ತ ನಿಮ್ಮ ಪ್ರವೃತ್ತಿಯನ್ನು ಬದಲಾಯಿಸುವ ನಿಮ್ಮ ಬಯಕೆಗೆ ಅನುಸಾರ ನೀವು ನಿಮ್ಮ ಜೀವನದ ಎಲ್ಲ ವೃತ್ತಗಳಲ್ಲೂ ಶ್ರೇಷ್ಠರಾಗಲು ಸಮರ್ಥರಾಗುತ್ತೀರಿ.

ಕನ್ಯಾ: ಇಂದು ನಿಮ್ಮ ಹೊಸ ಅಡ್ಡಹೆಸರು ಹಾರ್ಟ್ ‍ಬ್ರೇಕ್ ಕಿಡ್ ಎಂದು. ನಿಮ್ಮ ಖರ್ಚುಗಳು ನೀವು ಮಾಡಿರುವ ಉಳಿತಾಯ ಮೀರುತ್ತವೆ. ಸಂತೋಷಕರ ಜೀವನ ನಡೆಸಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಂಧವನ್ನು ಸದೃಢಗೊಳಿಸಿಕೊಳ್ಳಿ.

ತುಲಾ: ನಿಮ್ಮ ದಿರಿಸು ಮತ್ತು ಉಡುಪು ಧರಿಸುವ ರೀತಿ ನಿಮ್ಮ ವ್ಯಕ್ತಿತ್ವಕ್ಕೆ ಮತ್ತು ಸೌಂದರ್ಯಕ್ಕೆ ಸೇರ್ಪಡೆಯಾಗುತ್ತದೆ. ಜನರು ನಿಮ್ಮ ಸೌಂದರ್ಯದಿಂದ ಪ್ರಭಾವಿತರಾಗುತ್ತಾರೆ.

ವೃಶ್ಚಿಕ: ಅವಸರದಿಂದ ಕೆಲಸ ಕೆಡುತ್ತದೆ. ನೀವು ನಿರ್ಧಾರ ಕೈಗೊಳ್ಳುವ ಮುನ್ನ ಅಥವಾ ನಿಮ್ಮ ಯೋಜನೆಗಳು ನಿಯಂತ್ರಣ ಕಳೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸುವುದು ಮುಖ್ಯ. ವ್ಯಾಪಾರದ ಪ್ರವಾಸದ ಸಾಧ್ಯತೆ ಇದೆ.

ಧನು: ಶಾಂತಿ ಮತ್ತು ನೆಮ್ಮದಿ, ಇಂದು ನೀವು ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದೀರಿ. ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರ ಮುಂದೆ ಭಾವನಾತ್ಮಕ ವ್ಯಕ್ತಿಯಾಗಿ ಕಾಣುತ್ತೀರಿ..

ಮಕರ: ನೀವು ಇಂದು ಸಮತೋಲನದ ಕಾರ್ಯ ನಿರ್ವಹಿಸುತ್ತೀರಿ. ಒಂದೆಡೆ ನೀವು ನಿಮ್ಮ ಗುರಿಗಳನ್ನು ತಲುಪಲು ಬಹಳ ಶ್ರಮ ವಹಿಸುತ್ತೀರಿ, ಮತ್ತೊಂದೆಡೆ, ನಿಮ್ಮ ಹವ್ಯಾಸಗಳಿಗೆ ಕೊಂಚ ಸಮಯ ಮೀಸಲಿಡುತ್ತೀರಿ.

ಕುಂಭ: ಇಂದು ನಿಮಗೆ ಪಾರ್ಟಿ ಮಾಡಲು ಅತ್ಯಂತ ಸಣ್ಣ ಕಾರಣಗಳು ಸಾಕು. ಶುಭಸುದ್ದಿ ನಿಮ್ಮ ಉತ್ಸಾಹಕ್ಕೆ ಸೇರ್ಪಡೆಯಾಗುತ್ತದೆ. ಈ ದಿನ ಧನಾತ್ಮಕವಾಗಿ ಪ್ರಾರಂಭವಾಗುತ್ತದೆ, ಮತ್ತು ಇದು ಇಡೀ ದಿನ ಮುಂದುವರೆಯುತ್ತದೆ.

ಮೀನ: ಒಂಟಿಯಾಗಿರುವ ಎಲ್ಲರಿಗೂ ಈ ದಿನ “ಬಂಧನ”ಕ್ಕೆ ಒಳಗಾಗಲು ಒಳ್ಳೆಯ ದಿನ. ವಿವಾಹಿತರು ಅಥವಾ ಪ್ರೇಮಿಗಳನ್ನು ಹೊಂದಿರುವವರಿಗೆ ಪ್ರಣಯದ ದಿನ ನಿಮಗಾಗಿ ಕಾದಿದ್ದು ನಿಮ್ಮನ್ನು ನಿಮ್ಮ ಸಂಗಾತಿಗೆ ಬಹಳ ಹತ್ತಿರ ತರುತ್ತದೆ.