ಮನೆ ಮನರಂಜನೆ ನಾಳೆ 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ

ನಾಳೆ 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ

0

ಬೆಂಗಳೂರು (Bengaluru)- 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ (State Award of Karnataka Film)ಕಾರ್ಯಕ್ರಮದ ದಿನಾಂಕ ಪ್ರಕಟಗೊಂಡಿದೆ. ಡಾ.ರಾಜ್ ಕುಮಾರ್ (Dr.Rajkumar) ಹುಟ್ಟು ಹಬ್ಬದ ದಿನದಂದು ಪ್ರಶಸ್ತಿ ಪ್ರದಾ‌ನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ (Chief Minister) ಬಸವರಾಜ್ ಬೊಮ್ಮಾಯಿ (Basavaraja Bommai) ಅವರು 2017ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದಾರೆ. 

ಶುದ್ಧಿ, ಮಾರ್ಚ್ 22, ಪಡ್ಡಾಯಿ (ತುಳು) ಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಅತ್ಯುತ್ತಮ ಚಿತ್ರಗಳಾಗಿವೆ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೆಬ್ಬಟ್ ರಾಮಕ್ಕ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರವಾಗಿ ರಾಜಕುಮಾರ, ಅತ್ಯುತ್ತಮ ಮಕ್ಕಳ ಚಿತ್ರ ಎಳೆಯರು ನಾವು ಗೆಳೆಯರು, ಅತ್ಯುತ್ತಮ ನಟಿ ತಾರಾ ಅನುರಾಧ, ಅತ್ಯುತ್ತಮ ಪೋಷಕ ನಟಿ ರೇಖಾ, ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಗೆ ವಿ.ಹರಿಕೃಷ್ಣ ಆಯ್ಕೆಯಾಗಿದ್ದಾರೆ.
ಅಲ್ಲದೆ, ಇನ್ನು ಅನೇಕ ವಿಭಾಗಗಳಲ್ಲಿ ಕಲಾವಿದರು ಆಯ್ಕೆಯಾಗಿದ್ದು,  ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.