ಮನೆ ಅಪರಾಧ ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: 16 ಜನ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ

ಸಂಚಾರಿ ಪೊಲೀಸರ ವಿಶೇಷ ಕಾರ್ಯಾಚರಣೆ: 16 ಜನ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ

0

ಬೆಂಗಳೂರು: ಸುರಕ್ಷತೆಯ ದೃಷ್ಟಿಯಿಂದ ಪಾನಮತ್ತರಾಗಿ ವಾಹನ ಚಲಾಯಿಸುವಂತಿಲ್ಲ ಎಂಬ ಸಂಚಾರಿ ನಿಯಮವಿದ್ದರು ಕೂಡ ಮದ್ಯಪಾನ ಮಾಡಿ ಶಾಲಾ ಮಕ್ಕಳ ವಾಹನ ಚಲಾಯಿಸುವ ಚಾಲಕರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇಂದು ಬೆಳಗ್ಗೆ 7 ರಿಂದ 9.30ರ ವರೆಗೂ ಕಾರ್ಯಾಚರಣೆ ಕೈಗೊಂಡು ಒಟ್ಟು 3,414 ಶಾಲಾ ವಾಹನಗಳ ಚಾಲಕರನ್ನು ಪೊಲೀಸರು ತಪಾಸಣೆಗೊಳಪಡಿಸಿದ್ದಾರೆ.

ಈ ವೇಳೆ ಬೆಳ್ಳಂಬೆಳಗ್ಗೆ ಪಾನಮತ್ತರಾಗಿದ್ದ 16 ಜನ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಅವರ ಡ್ರೈವಿಂಗ್ ಲೈಸೆನ್ಸ್​ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಮಾನತುಗೊಳಿಸಲು ಸಾರಿಗೆ ಇಲಾಖೆ (ಆರ್.ಟಿ.ಓ) ಗೆ ರವಾನಿಸಲಾಗಿದೆ.

ಹಿಂದಿನ ಲೇಖನತಸ್ತೀಕ್ ಹಣ ಹಿಂತಿರುಗಿಸುವಂತೆ ಹಿರೇಮಗಳೂರು ಕಣ್ಣನ್ ಗೆ ಮುಜರಾಯಿ ಇಲಾಖೆ ನೋಟಿಸ್
ಮುಂದಿನ ಲೇಖನಮುಂಬೈ: ದೋಣಿ ಮಗುಚಿ ಓರ್ವ ಮಹಿಳೆ ಸಾವು: ಐವರು ನಾಪತ್ತೆ