ಮನೆ ರಾಷ್ಟ್ರೀಯ ತರಬೇತಿ ವಿಮಾನ ಪತನ: ಪೈಲಟ್ ಸಾವು

ತರಬೇತಿ ವಿಮಾನ ಪತನ: ಪೈಲಟ್ ಸಾವು

0

ಬೆಂಗಳೂರು: ತರಬೇತಿ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ ಪೈಲಟ್ ಮೃತಪಟ್ಟಿರುವ ಘಟನೆ ಘಟನೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ನಡೆದಿದೆ.

ವಿಮಾನ ಅಪಘಾತಕ್ಕೆ ತುತ್ತಾಗುವ ಸಂದರ್ಭದಲ್ಲಿ ಅದರಲ್ಲಿದ್ದ ಪೈಲಟ್, ತರಬೇತಿ ನಿರತರಾಗಿದ್ದರು. ಮತ್ತೋರ್ವ ಪೈಲಟ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಹೇಳಿದ್ದಾರೆ.

ಶುಕ್ರವಾರ(ಜನವರಿ 06) ಮುಂಜಾನೆ ಈ ಅವಘಡ ಸಂಭವಿಸಿದೆ. ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆದು ಪತನಗೊಂಡಿತ್ತು. ಗಾಯಗೊಂಡ ತರಬೇತು ಪೈಲಟ್ ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ ಕಂಡು ಬಂದಂತೆ ಪ್ರತಿಕೂಲ ಹವಾಮಾನ ಮತ್ತು ಅತಿಯಾದ ಮಂಜು ಕವಿದಿದ್ದರಿಂದ ಲಘು ವಿಮಾನ ದೇವಸ್ಥಾನದ ಗರ್ಭಗುಡಿಗೆ ಡಿಕ್ಕಿ ಹೊಡೆಯಲು ಕಾರಣವಾಗಿದೆ ಎಂದು ವರದಿ ವಿವರಿಸಿದೆ.