ಮನೆ ರಾಜ್ಯ ಸಾರಿಗೆ ನೌಕರರ ಮುಷ್ಕರ ಅನಿವಾರ್ಯ: ಸಮಿತಿ ಎಚ್ಚರಿಕೆ

ಸಾರಿಗೆ ನೌಕರರ ಮುಷ್ಕರ ಅನಿವಾರ್ಯ: ಸಮಿತಿ ಎಚ್ಚರಿಕೆ

0

ಹುಬ್ಬಳ್ಳಿ: ಸಾರಿಗೆ ನಿಗಮಗಳ ನೌಕರರ ‌ವೇತನ ಪರಿಷ್ಕರಣೆ, ನಿಗಮಗಳಿಗೆ ಬಾಕಿ ಹಾಗೂ ಶಕ್ತಿ ಯೋಜನೆ ಬಾಕಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಸಾರಿಗೆ ನೌಕರರ ಮುಷ್ಕರ ಅನಿವಾರ್ಯವಾಗಲಿದೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ‌ ಜಂಟಿ ಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.

Join Our Whatsapp Group

ಬುಧವಾರ(ಆ 28)ಜಂಟಿ‌ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಸಮಿತಿ‌ ಮುಖಂಡರಾದ ದೇವರಾಜೆ ಅರಸು, ವಿಜಯ ಭಾಸ್ಕರ, ಮಂಜುನಾಥ ಅವರು, ನೌಕರರಿಗೆ 2020ರಲ್ಲಿ‌ ಶೇ.15 ರಷ್ಟು ವೇತನ ಪರಿಷ್ಕರಣೆ ಮಾಡಲಾಗಿದ್ದು, ಸುಮಾರು 38 ತಿಂಗಳ ಹಿಂಬಾಕಿ‌ ಬಿಡುಗಡೆ ಮಾಡಿಲ್ಲ.2024ರ ಜನೆವರಿಯಲ್ಲಿ ವೇತನ ಪರಿಷ್ಕರಣೆ ಆಗಬೇಕಾಗಿದ್ದು ಯಾವುದೇ‌ ಕ್ರಮ ಇಲ್ಲವಾಗಿದೆ ಎಂದರು.

ಸಾರಿಗೆ ನಿಗಮಗಳಿಗೆ ಅಂದಾಜು 4,927 ಕೋಟಿ ರೂ., ಬಾಕಿ ಬರಬೇಕಾಗಿದೆ. ಶಕ್ತಿ ಯೋಜನೆಯಡಿ 1,500 ಕೋಟಿರೂ., ಹಾಗೂ ಸರಬರಾಜುದಾರರು, ಇಂಧನ ಬಾಕಿ 150 ಗಳನ್ನು ಬಿಡುಗಡೆ ಮಾಡಬೇಕು.ಸೆ.12ರಂದು ಜಂಟಿ ಕ್ರಿಯಾ ಸಮಿತಿಯಿಂದ ಬೆಂಗಳೂರಿನ ಫ್ರೀಡಮ್ ಪಾರ್ಕ್ ನಲ್ಲಿ ಒಂದು ದಿನದ ಧರಣಿ ಮಾಡುತ್ತಿದ್ದು, ಸರ್ಕಾರ ಸ್ಪಂದಿಸದಿದ್ದರೆ ಬಸ್ ಗಳ ಸಂಚಾರ ಸ್ಥಗಿತಗೊಳಿಸಿ ಮುಷ್ಕರಕ್ಕಿಳಿಯುವುದು ಅನಿವಾರ್ಯ ಆಗಲಿದೆ.

ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಲೇ ಸಾರಿಗೆ ನೌಕರರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಜಂಟಿ ಕ್ರಿಯಾ ಸಮಿತಿ‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.